Advertisement

ಟೀಕೆಗಳಿಗೆ ಕೊನೆಯಿಲ್ಲ: ಡೇವಿಡ್‌ ವಾರ್ನರ್‌

09:03 PM Oct 29, 2021 | Team Udayavani |

ಶಾರ್ಜಾ: ಸತತ ಬ್ಯಾಟಿಂಗ್‌ ವೈಫ‌ಲ್ಯದಿಂದ ಹೈರಾಣಾಗಿದ್ದ ಆಸ್ಟ್ರೇಲಿಯ ತಂಡದ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ ಶ್ರೀಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಿದ್ದಾರೆ.

Advertisement

ಪಂದ್ಯದ ಬಳಿಕ ಮಾತನಾಡಿದ್ದ ವಾರ್ನರ್‌, ಜನರು ನನ್ನ ಬ್ಯಾಟಿಂಗ್‌ ಲಯದ ಬಗ್ಗೆ ಮಾತನಾಡುವುದು ತಮಾಷೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನನಗೇನೂ ಇದು ಚಿಂತಿಸುವ ವಿಷಯವಲ್ಲ. ನಾನು ಯಾವುದೇ ಕ್ರಿಕೆಟ್‌ ಪಂದ್ಯ ಆಡಿದರೂ ಅದು ಕಠಿಣವಾಗಿಯೇ ಇರುತ್ತದೆ.

ಗುರುವಾರ ರಾತ್ರಿಯದ್ದು ಇನ್ನೊಂದು ಹೊಸ ಪಂದ್ಯ’ ಎಂದಿದ್ದಾರೆ. ಟೀಕೆಗಳನ್ನು ನಿಲ್ಲಿಸಲಾಗುವುದೇ? ಇಲ್ಲ, ಸಾಧ್ಯವೇ ಇಲ್ಲ. ಇದು ವಿಶ್ವ ಕ್ರೀಡೆಯ ಒಂದು ಭಾಗ. ನೀವು ಅಗ್ರಸ್ಥಾನಕ್ಕೇರಿದಾಗ, ಸಾಮಾನ್ಯವಾಗಿ ಕೆಳಗೆ ಇಳಿಯಲೇಬೇಕಾಗುತ್ತದೆ. ಹಾಗಾಗಿ, ಈ ಎಲ್ಲ ಸಂದರ್ಭಗಳಲ್ಲಿ ನಿಮ್ಮ ಮುಖದಲ್ಲಿ ನಗು ತುಂಬಿರಬೇಕು ಎಂದು ವಾರ್ನರ್‌ ಹೇಳಿದರು.

ಇದನ್ನೂ ಓದಿ:ವೆಸ್ಟ್‌ ಇಂಡೀಸ್‌ ಎದುರು ನಡೆದ ರೋಚಕ ಹೋರಾಟದಲ್ಲಿ ಬಾಂಗ್ಲಾಕ್ಕೆ ಸೋಲು

Advertisement

Udayavani is now on Telegram. Click here to join our channel and stay updated with the latest news.

Next