Advertisement
ಗಿಡ ಗಂಟಿಗಳು ರಸ್ತೆಯನ್ನು ನುಂಗುತ್ತಿವೆ. ಚರಂಡಿ ನಿರ್ವಹಣೆ ಮಾಡದಿರುವುದು ಒಂದು ಕಡೆಯಾದರೆ ರಸ್ತೆ ಬದಿಯಲ್ಲಿ ಪೊದರು, ಗಿಡ ಗಂಟಿಗಳು ಬೆಳೆದು ಅರ್ಧ ರಸ್ತೆಯೆ ಮಾಯವಾಗುತ್ತಿದೆ. ಮುಳ್ಳು, ಪೊದರು ಬೆಳೆದು ಪಾದಚಾರಿಗಳ ಮೈ ಪರಚುವಂತಾಗಿದ್ದು ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇದಕ್ಕೆ ನಿಡ್ಪಳ್ಳಿಯ ಲೋಕೋಪಯೋಗಿ ಇಲಾಖೆಯ ಈ ರಸ್ತೆ ಒಂದು ನಿದರ್ಶನ.
ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿಯಿಂದ ಶಾಂತಾದುರ್ಗಾ ದೇವಾಲಯದವರೆಗೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಅಭಿವೃದ್ಧಿ ಇಲಾಖೆಯ ವತಿಯಿಂದ ರಸ್ತೆ ನಿರ್ಮಾಣವಾಗಿ ಡಾಮರುಗೊಂಡು 3 ವರ್ಷ ಕಳೆದಿದೆ. ಆನಂತರ ಈ ರಸ್ತೆಯನ್ನು, ರಸ್ತೆ ಬದಿಯನ್ನು ನಿರ್ವಹಣೆ ಮಾಡದಿರುವುದರಿಂದ ರಸ್ತೆ ಹದಗೆಡುತ್ತಿದೆ. ಈ ಬಗ್ಗೆ ಯಾವ ಜನಪ್ರತಿನಿಧಿಗಳೂ ಚಕಾರವೆತ್ತ ದಿರುವುದು ದುರಂತ. ಹೀಗಾದರೆ ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ರಕ್ಷಿಸುವುದಾದರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಇಲಾಖೆ ತತ್‌ಕ್ಷಣ ಸ್ಪಂದಿಸುವ ಅನಿವಾರ್ಯವಿದೆ.