Advertisement

ಹಾಲಿ ಭಾರತ ಕ್ರಿಕೆಟಿಗರಲ್ಲಿ ಶಿಸ್ತೇ ಇಲ್ಲ: ಯುವರಾಜ್‌ ಬೇಸರ

09:52 PM Apr 08, 2020 | Sriram |

ಹೊಸದಿಲ್ಲಿ: “ಭಾರತ ತಂಡದಲ್ಲಿರುವ ಕೆಲವು ಹಾಲಿ ಯುವ ಕ್ರಿಕೆಟಿಗರಿಗೆ ತಾವು ಆಡಿದ್ದೇ ಆಟವಾಗಿದೆ, ಹೇಳುವವರಿಲ್ಲ ಯಾರೂ ಕೇಳು ವವರಿಲ್ಲ, ತಂಡದಲ್ಲಿರುವ ಹಿರಿಯ ಕ್ರಿಕೆಟಿಗರ ಬಗ್ಗೆ ಅವರಿಗೆ ಸ್ವಲ್ಪವೂ ಗೌರವವಿಲ್ಲ, ಇದರಿಂದಾಗಿ ಸದ್ಯ ತಂಡದಲ್ಲಿ ಮಾದರಿ ಆಟಗಾರರ ಸಂಖ್ಯೆ ಕಡಿಮೆಯಾಗಿದೆ’ ಎಂದು ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಹಾಲಿ ಉಪನಾಯಕ ರೋಹಿತ್‌ ಶರ್ಮ ಹಿಂದಿನ ಹಾಗೂ ಈಗಿನ ಕ್ರಿಕೆಟ್‌ ಕುರಿತ ಪ್ರಶ್ನೆಗೆ ಯುವಿ ಈ ರೀತಿ ಬೇಸರ ಹೊರಹಾಕಿದರು.
“ನನಗಿನ್ನೂ ನೆನಪಿದೆ, ನಾವಿಬ್ಬರು ಭಾರತ ತಂಡವನ್ನು ಪ್ರವೇಶಿಸಿದ್ದ ಸಂದರ್ಭದಲ್ಲಿ ಆಗಿನ್ನೂ ಸಾಮಾಜಿಕ ಜಾಲತಾಣ ಇರಲಿಲ್ಲ, ನಮ್ಮ ಹಿರಿಯ ಕ್ರಿಕೆಟಿಗರು ಶಿಸ್ತಿನ ಸಿಪಾಯಿಗಳಾಗಿದ್ದರು, ಯಾವುದು ತಪ್ಪು- ಯಾವುದು ಸರಿ ಎನ್ನುವುದನ್ನು ನಮಗೆ ತಿದ್ದಿ ಹೇಳುತ್ತಿದ್ದರು, ಯಾರೊಂದಿಗೆ ಹೇಗೆ ಮಾತನಾಡಬೇಕು, ಇದೆಲ್ಲವನ್ನು ನಮಗೆ ನಮ್ಮ ಹಿರಿಯ ಕ್ರಿಕೆಟಿಗರು ತಿಳಿ ಹೇಳುತ್ತಿದ್ದರು. ಅವರಿಗೆ ನಾವು ತುಂಬಾ ಗೌರವ ಕೊಡುತ್ತಿದ್ದೆವು, ಆದರೆ ಕಾಲ ಈಗ ಹಾಗಿಲ್ಲ, ನೀವು, ಕೊಹ್ಲಿ ಇಬ್ಬರನ್ನು ಬಿಟ್ಟರೆ ಹಿರಿಯ ಆಟಗಾರರಿಲ್ಲ, ಸಲಿಗೆ ಸಿಕ್ಕಿದೆಯೋ ಗೊತ್ತಿಲ್ಲ, ಕೆಲವು ಯುವ ಆಟಗಾರರಿಗೆ ಯಾರ ಹೆದರಿಕೆಯೂ ಇಲ್ಲ. ತಂಡದಲ್ಲಿರುವ ಹಿರಿಯ ಕ್ರಿಕೆಟಿಗರನ್ನೂ ಅವರೆಲ್ಲ ಗೌರವಿಸುತ್ತಿಲ್ಲ, ಯಾರೂ ಯಾರೊಂದಿಗೂ ಹೇಗೆ ಬೇಕಾದರೂ ವರ್ತಿಸಬಹುದು ಎನ್ನುವ ಪರಿಸ್ಥಿತಿ ಇದೆ’ ಎಂದು ಯುವಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next