Advertisement
ಬರಗಾಲದ ಕಾರಣದಿಂದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರುತ್ತಿದ್ದು, ಬೆಳ್ಳುಳ್ಳಿ ಬೆಲೆ ಕೆಜಿಗೆ 300 ರೂ. ಸನಿಹಕ್ಕೆ ಬಂದು ನಿಂತಿದೆ. ಸದ್ಯ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ 270ರಿಂದ 280ರಲ್ಲಿದೆ. ಬೆಳ್ಳುಳ್ಳಿಯು ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದಿರುವುದೇ ಇದಕ್ಕೆ ಪ್ರಮುಖ ಕಾರಣ.
ಹಾಪ್ ಕಾಮ್ಸ್ ಸಹಿತ ಇನ್ನಿತರ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ ಹಾಪ್ ಕಾಮ್ಸ್‌ನಲ್ಲಿ ಪ್ರತಿ ಕೆ.ಜಿ. ಬೆಳ್ಳುಳ್ಳಿ 250 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ರವಿವಾರ 308 ರೂ.ಗೆ ಮಾರಾಟವಾಯಿತು. ಬೇಡಿಕೆಗಿಂತ ಪೂರೈಕೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶ ಉಮೇಶ್ ಮಿರ್ಜಿ, ಕೆಲವು ದಿನಗಳಿಂದ ಹಾಪ್‌ಕಾಮ್ಸ್‌ನಲ್ಲಿ ಕೂಡ ಬೆಳ್ಳುಳ್ಳಿದರ ಏರಿಕೆ ಆಗುತ್ತಿದೆ. ಬೆಳ್ಳುಳ್ಳಿಯನ್ನು ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವುದಿಲ್ಲ. ಮಧ್ಯಪ್ರದೇಶ ಸಹಿತ ಉತ್ತರಭಾರತದ ರಾಜ್ಯಗಳಿಂದ ಇಲ್ಲಿಗೆ ಪೂರೈಕೆ ಆಗುತ್ತಿದೆ. ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬೆಳ್ಳುಳ್ಳಿ ಪೂರೈಕೆ ಆಗುವವರೆಗೂ ಬೆಲೆ ಏರಿಕೆ ಇರುವ ಸಾಧ್ಯತೆಯಿದೆ ಎಂದಿದ್ದಾರೆ.
Related Articles
Advertisement