Advertisement

ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ

02:46 PM Apr 26, 2023 | Team Udayavani |

ಆನೇಕಲ್‌: ಭಾರತೀಯ ಜನತಾ ಪಾರ್ಟಿ ಶಿಸ್ತಿನ ಪಕ್ಷ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ನಂಬಿರುವ ಪಕ್ಷ, ಸದ್ಯ ನಮ್ಮಲ್ಲಿ ಯಾವುದೇ ಗೊಂದಲ, ಭಿನ್ನಮತ, ಬಂಡಾಯವಾಗಲಿ ಇಲ್ಲ, ಈ ಚುನಾ ವಣೆಯನ್ನು ಸಾಮೂಹಿಕವಾಗಿ ಎದುರಿಸಲು ಪಕ್ಷದ ಎಲ್ಲ ಹಿರಿ, ಕಿರಿಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸನ್ನದ್ದರಾಗಿದ್ದಾರೆ ಎಂದು ಆನೇಕಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಶ್ರೀನಿವಾಸ್‌ ಹೇಳಿದರು.

Advertisement

ತಾಲೂಕಿನ ಮುಗಳೂರು ಗ್ರಾಮದ ದೇವಾಲಯದಲ್ಲಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಶಾಸಕರಿಲ್ಲದ ಕಾರಣ ಆಕಾಂಕ್ಷಿ ಗಳು ಪಕ್ಷವನ್ನು ಕಟ್ಟಿ ಬೆಳೆಸಿ, ಶಾಸಕ ಅಭ್ಯರ್ಥಿಗೆ ಹತ್ತು ಮಂದಿ ಮನವಿ ಮಾಡಿದ್ದೆವು. ಅಂತಿಮವಾಗಿ ನನ್ನ ಹೆಸರನ್ನು ಘೋಷಿಸಿದೆ. ಅಷ್ಟೇ ಆಗಂತ ಉಳಿದ ಆಕಾಂಕ್ಷಿಗಳನ್ನು ಪಕ್ಷ ಯಾವತ್ತು ಕಡೆಗಾಣಿಸುವುದಿಲ್ಲ. ಅವರಿಗೂ ಸೂಕ್ತ ಗೌರವಗಳನ್ನು ಪಕ್ಷ ನೀಡುತ್ತದೆ. ಈ ಹಿನ್ನಲೆಯಲ್ಲಿ ಯಾವೊಬ್ಬ ಆಕಾಂಕ್ಷಿ ಕೂಡ ಬೇಸರ ವಾಗದೆ ಎಲ್ಲರೂ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಿ: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ನೇತೃತ್ವದಲ್ಲಿ ಬಹುತೇಕ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸುವ ದಿನವೇ ನಮ್ಮೊಂದಿಗೆ ಇದ್ದು ಒಗ್ಗಟ್ಟು ಪ್ರದರ್ಶಿಸಿದರು. ಎಂದ ಅವರು ನಮ್ಮ ಗುರಿ ಒಂದೇ ಕ್ಷೇತ್ರದಲ್ಲಿನ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ, ಬಿಜೆಪಿ ಶಾಸಕರನ್ನು ಆಯ್ಕೆ ಮಾಡುವುದಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ಬಿಜೆಪಿ ಶಾಸಕರಾಗಿದ್ದ ಎ.ನಾರಾಯಣಸ್ವಾಮಿ ಅವರ ಕಾಲಾವಧಿಯಲ್ಲಿ ಆಗಿದ್ದ ಅಭಿವೃದ್ಧಿ ಯನ್ನು° ಮುಂದಿಟ್ಟು ಕೊಂಡು ಹಾಗೂ ಕಾಂಗ್ರೆಸ್‌ ಶಾಸಕರ ಕಳಪೆ ಕಾಮಗಾರಿ, ವ್ಯಾಪಕ ಭ್ರಷ್ಟಾಚಾರ ಗಳನ್ನು ಕ್ಷೇತ್ರ ಜನತೆಗೆ ತಿಳಿಸಿ ನನ್ನ ಪರವಾಗಿ ಮತಯಾಚಿಸುತ್ತಿದ್ದೆನೆ ಎಂದು ಅವರು ಹೇಳಿದರು.

ಸೇರ್ಪಡೆ : ಸರ್ಜಾಪುರ ಗ್ರಾಪಂ ಸದಸ್ಯರು ಜೆಡಿಎಸ್‌ ಮುಖಂಡರಾದ ಪಾರ್ಥಸಾರಥಿ, ಮಂಜುನಾಥ್‌ ಸರ್ಜಾ, ಗಣೇಶ್‌ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಇವರೊಂದಿಗೆ ಮತ್ತಷ್ಟು ಸದಸ್ಯರು , ಮುಖಂಡರು ಬಿ ಜೆ ಪಿ ಸೇರಿಲಿದ್ದಾರೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next