Advertisement
ರಾಜ್ಯ ಒಕ್ಕಲಿಗರ ಸಂಘವು ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಅಪೂರ್ವ ಪುರುಷಸಿಂಹ ಕೆ.ಎಚ್.ರಾಮಯ್ಯ’ ಸಂಸ್ಮರಣ ಗ್ರಂಥ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.36ರಷ್ಟು ಒಕ್ಕಲಿಗರಿದ್ದು, ಗೆಲುವಿಗೆ ನಿರ್ಣಾಯಕರೆನಿಸಿದ್ದಾರೆ. ಆ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದಾಗ ಸ್ಥಳೀಯ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದಾಗ ಹೆಸರಿನೊಂದಿಗೆ ಗೌಡ ಎಂಬುದನ್ನು ಸೇರಿಸಿಕೊಂಡರೆ ಉಪಯುಕ್ತವಾಗಲಿದೆ ಎಂದು ಸಲಹೆ ನೀಡಿದರು. ಅಲ್ಲಿಯವರೆಗೆ ಸದಾನಂದನಾಗಿದ್ದ ನಾನು ಸದಾನಂದಗೌಡನಾದೆ. ಈ ಗೌಡ ಹೆಸರಿನ ಏಣಿಯ ಮೂಲಕ ಈವರೆಗೆ ನಾನಾ ಉನ್ನತ ಸ್ಥಾನಗಳನ್ನು ಪಡೆದಿದ್ದೇನೆ.
ರಾಜಕೀಯ ಏಳಿಗೆ ಮೂಲಕ ಮುಖ್ಯಮಂತ್ರಿ ಕೇಂದ್ರ ಸಚಿವ ಸ್ಥಾನಗಳನ್ನು ಗೌಡ ಕೋಟವೇ ತಂದುಕೊಟ್ಟಿದೆ ಎಂದು ಹೆಮ್ಮೆಯಿಂದ ನುಡಿದರು. ರಾಜ್ಯ ಒಕ್ಕಲಿಗರ ಸಂಘದ ಅಧRಕ್ಷ ಡಿ.ಎನ್.ಬೆಟ್ಟೇಗೌಡ, “ಸಂಘದ ಆಗುಹೋಗುಗಳ ಬಗ್ಗೆ ಸಮುದಾಯದ ಸ್ವಾಮೀಜಿಗಳು, ಮುಖಂಡರು ಗಮನಿಸಿದರೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗಲಿದೆ. ಪ್ರತಿ ತಿಂಗಳು ಸ್ವಾಮೀಜಿಗಳು ಪರಿಶೀಲನೆ ನಡೆಸಿದರೂ ಉತ್ತಮ. ಕೆ.ಚ್.ರಾಮಯ್ಯನವರ ಹೆಸರಿನಲ್ಲಿ ಉಚಿತ ವಿದ್ಯಾರ್ಥಿನಿಲಯ ಆರಂಭಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಸ್ವಾರ್ಥ ಬಿಟ್ಟು ಕೆಲಸ ಮಾಡಿ: ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, “ಸಮುದಾಯ ಅಭಿವೃದ್ಧಿ ಸಾಧಿಸಬೇಕಾದರೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಸಮುದಾಯದ ಎಲ್ಲ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಬೇಕು. ಇದಕ್ಕೆ ಸಂಘವು ನೆರವು ನೀಡಬೇಕು. ಸಂಘದ ಆಡಳಿತದ ಮೇಲೆ ನಿಗಾ ವಹಿಸುವುದು ಸ್ವಾಮೀಜಿ ಕೆಲಸವಲ್ಲ. ಅಗತ್ಯಬಿದ್ದರೆ ಮುತ್ಸದಿಗಳಾದ ಮಾಜಿ ಪ್ರಧಾನಿಯವರ ಮಾರ್ಗದರ್ಶನ ಪಡೆಯಬಹುದು.
ಸಂಘದಲ್ಲೂ ವೃತ್ತಿಪರರಿದ್ದು, ಅವರ ಅಭಿಪ್ರಾಯ ಪಡೆಯಬಹುದು. ಆಧ್ಯಾತ್ಮ ವಿಚಾರದಲ್ಲಿ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಸ್ವಾರ್ಥ ಬಿಟ್ಟು ಕೆಲಸ ಮಾಡಿದರೆ ಸಂಘ ಬೆಳೆಯಲಿದೆ’ ಎಂದು ತಿಳಿಸಿದರು. ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ. ಪದ್ಮಾ ಶೇಖರ್ ಕೃತಿ ಪರಿಚಯ ನೀಡಿದರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಗ್ರಂಥ ಸಂಪಾದಕ ಹ.ಕ.ರಾಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇನ್ನೊಬ್ಬರಿಗೆ ಅವಕಾಶ ಸಿಗುವಾಗ ಕಾಲೆಳೆಯಬಾರದು: ಜೀವನದಲ್ಲಿ ಈವರೆಗೆ ಸ್ವಾಭಿಮಾನದಿಂದಲೇ ಹೋರಾಡುತ್ತಾ ಬಂದಿದ್ದೇನೆ. ಯಾವುದೇ ಸಂದರ್ಭ, ಎಂತಹ ಸನ್ನಿವೇಶದಲ್ಲೂ ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ. ಮುಂದೆಯೂ ಬಿಡುವುದಿಲ್ಲ. ಅದು ರಕ್ತಗತವಾಗಿದೆ. ಸಂದರ್ಭ, ಸನ್ನಿವೇಶಗಳಲ್ಲಿ ಡಿ.ವಿ.ಸದಾನಂದಗೌಡರು, ಎಸ್.ಎಂ.ಕೃಷ್ಣ ಅವರಿಗೆ ನೆರವಾಗಿದ್ದೇನೆ. ಇನ್ನೊಬ್ಬರಿಗೆ ಅವಕಾಶ ಸಿಗುವಾಗ ಕಾಲೆಳೆಯಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾರ್ಮಿಕವಾಗಿ ನುಡಿದರು.
ಡಿ.ವಿ.ಸದಾನಂದಗೌಡರ ಬಗ್ಗೆ ಒಳ್ಳೆಯ ಮಾತನಾಡಿದರೆ ಅಲ್ಲಿರುವವರೆ ಸದಾನಂದಗೌಡರ ಶಕ್ತಿ ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಅವರು ಮುಖ್ಯಮಂತ್ರಿಗಳಾಗಿದ್ದಾಗ ಸ್ಥಾನ ತಪ್ಪಿಸುವ ಸಂಚು ನಡೆಯಿತು. ಆಗ ಕಿಂಚಿತ್ ಸಹಕಾರ ಕೊಟ್ಟಿದ್ದೇನೆ. ನಾನು ಮುಖ್ಯಮಂತ್ರಿ ಆಗಬೇಕಾದ ಸಂದರ್ಭದಲ್ಲೂ ಹೊಡೆದಾಟ ನಡೆದಿತ್ತು ಎಂದು ಸ್ಮರಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಆಡಳಿತ ಬಿಗಿಯಾಗಿತ್ತು. ಒಬ್ಬ ಸಚಿವರು ಮಿಸುಕಾಡದಂತೆ ಇಟ್ಟಿದೆ. ನನಗೆ ಪ್ರಧಾನಿಯಾಗುವ ಅವಕಾಶ ಒದಗಿಬಂದಾಗ ಸೌಜನ್ಯಕ್ಕೂ ಸಂಪುಟ ಸಹೋದ್ಯೋಗಿಗಳು ಚಹಾ ಕೊಟ್ಟು ಬೀಳೊYಡಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.
ದುರ್ಬಳಕೆ ಮಾಡಿಕೊಂಡಿಲ್ಲ: ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂಸ್ಕೃತಿಕ ಚಟುವಟಿಕೆ ಸಮಿತಿ ಅಧ್ಯಕ್ಷ ಅ.ದೇವೇಗೌಡ, “ಈ ಕಾರ್ಯಕ್ರಮ ಆಯೋಜನೆಯಲ್ಲಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ನಾನು ಯಾರಿಂದಲೂ ಹಣ ಪಡೆದಿಲ್ಲ. ಹಾಗೆ ಮಾಡಿದವರ ಮನೆ ಹಾಳಾಗಲಿ. ಹಣವನ್ನು ದುರ್ಬಳಕೆ ಮಾಡಿಕೊಂಡರೆ ಹೆಂಡತಿ, ಮಕ್ಕಳಿಗೆ ತೊಂದರೆಯಾಗಲಿದೆ’ ಎಂದು ಹೇಳಿದರು.