Advertisement

ಮಳ್ಳೂರು ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ

09:47 PM May 12, 2019 | Lakshmi GovindaRaj |

ಕೊಳ್ಳೇಗಾಲ: ತಾಲೂಕಿನಲ್ಲೇ ಮುಳ್ಳೂರು ಅತ್ಯಂತ ದೊಡ್ಡ ಗ್ರಾಮವಾಗಿದ್ದು, ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಎಲ್ಲಾ ಬೀದಿಗಳಲ್ಲಿ ಚರಂಡಿ ನಿರ್ಮಾಣ ಮಾಡಿದ್ದರೂ ಸಹ ಚರಂಡಿಯಲ್ಲಿರುವ ಕಸವನ್ನು ಸರಿಯಾಗಿ ನಿರ್ವಹಣೆ ಮಾಡದೆ ಚರಂಡಿಗಳು ಗಬ್ಬು ನಾರುತ್ತಿದ್ದು, ಕ್ರಿಮಿಕೀಟಗಳ ಬಾಧೆಯಿಂದ ಗ್ರಾಮಸ್ಥರು ಬಳಲುವಂತಾಗಿದೆ.

Advertisement

ಗ್ರಾಮವು ವಿವಿಧ ಸಮಾಜದ ಜನರನ್ನು ಹೊಂದಿದ್ದು, ನಗರ ಪ್ರದೇಶ ಮಾದರಿಯಲ್ಲಿ ಗ್ರಾಮದ ಬೀದಿಗಳಿಗೆ 1ನೇ ಕ್ರಾಸ್‌, 2ನೇ ಕ್ರಾಸ್‌ ಗಳನ್ನು ನಮೂದಿಸಿರುವ ಏಕೈಕ ಗ್ರಾಮವಾಗಿದೆ. ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕೊಳ್ಳೇಗಾಲ ನಗರ ಪ್ರದೇಶವನ್ನೇ ಅವಲಂಬಿಸಿದ್ದಾರೆ.

ಹೆಚ್ಚು ವಿದ್ಯಾರ್ಥಿಗಳು ತಮ್ಮ ಪದವಿಯ ಬಳಿಕ ಮೈಸೂರು ಮತ್ತು ಬೆಂಗಳೂರಿನಂತಹ ಮಹಾನಗರಗಳಿಗೆ ತೆರಳಿ ಉನ್ನತ ಶಿಕ್ಷಣವನ್ನು ಪಡೆದು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಹಿರಿಮೆ ಗ್ರಾಮಸ್ಥರಿಗೆ ಸಲ್ಲುತ್ತದೆ. ಗ್ರಾಮದ ಉಪ್ಪಾರ ಮತ್ತು ದಲಿತ ಸಮಾಜದವರು ಅಕ್ಕಪಕ್ಕದಲ್ಲೇ ಇದ್ದು

-ಗ್ರಾಪಂ ವತಿಯಿಂದ ನೂತನ ಚರಂಡಿಗಳನ್ನು ನಿರ್ಮಾಣ ಮಾಡಿದ್ದರೂ ಸಹ ಗ್ರಾಪಂ ಅಧಿಕಾರಿಗಳು ಸರಿಯಾಗಿ ಚರಂಡಿಯ ಕಸವನ್ನು ಹೊರ ತೆಗೆಯದೆ ಚರಂಡಿಯಲ್ಲೇ ಶೇಖರಣೆಯಾಗುತ್ತಿದ್ದು, ಗಬ್ಬು ನಾರುತ್ತಿದೆ. ಇದರಿಂದ, ಕ್ರಿಮಿಕೀಟಗಳ ಬಾಧೆಯೂ ಹೆಚ್ಚುತ್ತಿದ್ದು ಗ್ರಾಮಸ್ಥರಲ್ಲಿ ಡೆಂ ಘೀ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗ ಹರಡುವ ಭೀತಿ ಏರ್ಪಟ್ಟಿದೆ.

ರಾಶಿ ಬಿದ್ದಿರುವ ಕಸ: ಗ್ರಾಮಸ್ಥರು ಮನೆ ಮತ್ತು ಇನ್ನಿತರ ಕಸವನ್ನು ಬಿಸಾಡಿದ ವೇಳೆ ಪಂಚಾಯಿತಿಯ ಅಧಿಕಾರಿಗಳು ಅದನ್ನು ಬೇರಡೆಗೆ ಪ್ರತಿನಿತ್ಯ ಸಾಗಿಸಬೇಕು. ಆದರೆ ಅಂತಹ ಕೆಲಸವನ್ನು ಮಾಡದಿರಲು ಅಧಿಕಾರಿಗಳ ನೀರ್ಲಕ್ಷ್ಯವೇ ಕಾರಣವಾಗಿದೆ. ಅಧಿಕಾರಿಗಳು ಪೌರ ಕಾರ್ಮಿಕರಿಗೆ ಸೂಚಿಸಿ ಮಾಡಿಸಬೇಕಿದೆ. ದೇಶದಲ್ಲಿ ಸ್ವಚ್ಛ ಭಾರತದ ಹೋರಾಟ ಪ್ರಾರಂಭವಾದರೂ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

Advertisement

ವ್ಯವಸ್ಥೆಯಿಲ್ಲ: ಮಾಳಗಸರಮ್ಮ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಮತ್ತು ವಿಶೇಷ ಪೂಜೆ ಸಲ್ಲಿಸಲು ಇದೇ ರಸ್ತೆಯಲ್ಲಿ ಸಂಚರಿಸುವ ಭಕ್ತರು ರಸ್ತೆಗೆ ಸರಿಯಾದ ಡಾಂಬರೀಕರಣ ಇಲ್ಲದೆ ಮಣ್ಣು ರಸ್ತೆಯಿಂದ ಕೂಡಿದ್ದು, ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣವಾಗದೆ ಹಳ್ಳದಲ್ಲೇ ನೀರು ನಿಂತು ಗಿಡಗಂಟೆಗಳು ಬೆಳೆದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮುಜುಗರವನ್ನುಂಟು ಮಾಡಿದೆ.

ಗ್ರಾಮದ ವಿವಿಧ ಚರಂಡಿಗಳಲ್ಲಿ ಕೊಳಚೆ ನೀರು ಶೇಖರಣೆಯಾಗಿದ್ದು, ಕೂಡಲೇ ಚರಂಡಿಗಳ ಕಸವನ್ನು ತೆರವು ಮಾಡಿ ಗ್ರಾಮದ ಮಾಳಗರಸಮ್ಮ ದೇವಸ್ಥಾನದ ರಸ್ತೆ ಅಭಿವೃದ್ಧಿ ಪಡಿಸಿ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿ ಹಳ್ಳದಲ್ಲಿ ನಿಂತಿರುವ ಕೊಳಚೆ ನೀರು ಸುಗಮವಾಗಿ ಹರಿದು ಹೋಗುವಂತೆ ಮಾಡಲಾಗುವುದು.
-ರಾಜೇಶ್‌, ಮುಳ್ಳೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ

ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿ, ಗಬ್ಬು ನಾರುತ್ತಿರುವ ಕಸವನ್ನು ತೆರವು ಮಾಡಿ ಕೀಟ ನಾಶಕ ಔಷಧಿಗಳನ್ನು ಸಿಂಪಡಿಸಿ ಗ್ರಾಮಸ್ಥರ ಆರೋಗ್ಯ ಕಾಪಾಡುವಂತೆ ಸೂಚನೆ ನೀಡಲಾಗುವುದು.
-ಉಮೇಶ್‌, ತಾಪಂ ಕಾರ್ಯನಿರ್ವಹಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next