Advertisement

ಅಚ್ಛೇ ದಿನ ಬರಲೇ ಇಲ್ಲ : ಸುನೀಲ್‌ ಕುಮಾರ್‌ ಬಜಾಲ್‌

02:20 AM Jul 11, 2017 | Karthik A |

ಜಪ್ಪಿನಮೊಗರು: ಅಚ್ಛೇದಿನ ಬರುತ್ತದೆ ಎಂದು ದೇಶದ ಜನರಿಗೆ ಕನಸು ಕಾಣಿಸಿ ಕಳೆದ ಮೂರು ವರುಷಗಳಿಂದ ದೇಶವನ್ನಾಳಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಳ್ವಿಕೆಯಿಂದ ಈವರೆಗೂ ಅಚ್ಛೇ ದಿನ ಬರಲೇ ಇಲ್ಲ ಎಂದು ಸಿಪಿಐಎಂನ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಬಜಾಲ್‌ ಹೇಳಿದರು. ಅವರು ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಸಿಪಿಎಂ ಬಜಾಲ್‌ ವಿಭಾಗ ಸಮಿತಿ ನೇತೃತ್ವದಲ್ಲಿ ಕಣ್ಣೂರಿನಲ್ಲಿ ರವಿವಾರ ಜರಗಿದ ಪ್ರಚಾರ ಆಂದೋಲನ ದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತಾಡಿದರು.

Advertisement

100 ದಿನಗಳಲ್ಲಿ ಕಪ್ಪು ಹಣ ತರುತ್ತೇನೆ ಎಂದು ಹೇಳಿ 1000 ದಿನಗಳಾದರೂ ತರಲೇ ಇಲ್ಲ. ಕಳ್ಳನೋಟು,ಭ್ರಷ್ಟಾಚಾರ, ಭಯೋತ್ಪಾದನೆಯನ್ನು ತಡೆಗಟ್ಟುವ ಬದಲಾಗಿ ಜಾಸ್ತಿಯಾಗುತ್ತಿದೆ. ಪ್ರಧಾನಿಯವರು ದೇಶ ವಿದೇಶಗಳನ್ನು ಸುತ್ತುತ್ತಾ ಅಲ್ಲಿನ ಬಂಡವಾಳಗಾರರಿಗೆ ದೇಶದಲ್ಲಿ ವ್ಯಾಪಾರ ನಡೆಸಲು ನೆಲೆ ಕಲ್ಪಿಸುವ ಕಾರ್ಯದಲ್ಲಿ ತೊಡಗಿರುವುದು ದುರಂತ. ಒಂದೇ ದೇಶ ಒಂದೇ ತೆರಿಗೆ ಹೆಸರಲ್ಲಿ ಜಿಎಸ್‌ಟಿ ಜಾರಿಗೆ ತರುವ ಮೂಲಕ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗಿ ಸಾಮಾನ್ಯ ಜನರಿಗೆ ತೆರಿಗೆ ಬಿಸಿತಟ್ಟುವಂತಾಗಿದೆ ಎಂದರು.

ಬಜಾಲ್‌ ವಿಭಾಗ ಸಮಿತಿಯ ಪ್ರಚಾರ ಆಂದೋಲನ ಕಾರ್ಯಕ್ರಮವು ಜಪ್ಪಿನಮೊಗರಿನ ಮುಖ್ಯದ್ವಾರದ ಬಳಿ ಉದ್ಘಾಟನೆಗೊಂಡಿತು. ಸಿಪಿಐಎಂನ ಜಿಲ್ಲಾಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ವಾಹನ ಪ್ರಚಾರ ಜಾಥಾ ಕಂಕನಾಡಿ ಬಿ, ಅಳಪೆ ದಕ್ಷಿಣ, ಬಜಾಲ್‌ ಕಣ್ಣೂರು ವಾರ್ಡುಗಳ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಕಣ್ಣೂರಿನಲ್ಲಿ ಸಮಾರೋಪಗೊಂಡಿತು. ಸಮಾರೋಪದಲ್ಲಿ ಸಿಪಿಎಂ ಮಂಗಳೂರು ನಗರ ಸಮಿತಿ ಮುಖಂಡರಾದ ಸಂತೋಷ್‌ ಬಜಾಲ್‌, ಸುರೇಶ್‌ ಬಜಾಲ್‌, ಪ್ರೇಮನಾಥ್‌ ಜಲ್ಲಿಗುಡ್ಡೆ, ಸಾಧಿಕ್‌ಕಣ್ಣೂರು, ಜಯಂತಿ ಬಿ ಶೆಟ್ಟಿ, ದಿನೇಶ್‌ಶೆಟ್ಟಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next