Advertisement

ಸರಳ ಬದುಕಿನ ರೂಢಿ ಅಗತ್ಯ: ಸಚಿವ ಡಾ|ಶರಣಪ್ರಕಾಶ

09:54 AM Oct 10, 2017 | Team Udayavani |

ಕಲಬುರಗಿ: ಜೀವನ ಕ್ರಮ ಸರಳವಾಗಿದ್ದರೆ ಮಾತ್ರವೇ ಬಹು ದಿನಗಳ ಕಾಲ ನಾವು ಜನರ ನೆನಪಿನಲ್ಲಿ ಜೀವಂತ ಇರಲು ಸಾಧ್ಯ. ಈ ನಿಟ್ಟಿನಲ್ಲಿ ಸರಳ ಜೀವನದ ಜೊತೆಯಲ್ಲಿ ಅದ್ಭುತ ಸಾಧನೆ ಮಾಡಿದವರು ಸನ್ಮಾನಕ್ಕೆ ಭಾಜನರಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ರವಿವಾರ ತಾಜಸುಲ್ತಾನಪುರ ಗ್ರಾಮದ ಕೆ.ಎಸ್‌.ಆರ್‌.ಪಿ. ಮೈದಾನದಲ್ಲಿ ಸ್ನೇಹ ಸಂಗಮ ವಿವಿದೋದ್ದೇಶ ಸಂಘದ ವತಿಯಿಂದ ಏರ್ಪಡಿಸಿದ್ದ, ರಾಜ್ಯ ಸರಕಾರದ “ಹಿರಿಯ ನಾಗರಿಕ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ, ರಾಷ್ಟ್ರಪತಿ ಪದಕ ಪಡೆದ ಬಸವರಾಜ ಜಿಳ್ಳೆ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಮಾಜದ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಚೇತನಗಳನ್ನು ಗುರುತಿಸಿ, ಗೌರವಿಸುವುದು ಅಗತ್ಯವಾಗಿದೆ. ಸರಳತೆ, ಸಹಜತೆ, ಬದ್ಧತೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವವರನ್ನು ಸತ್ಕರಿಸುವ ಮೂಲಕ ಸಮಾಜದ ವಿದ್ಯಾರ್ಥಿ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕು ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಮಾತನಾಡಿ, ಆದರ್ಶ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿ ಮತ್ತು ಯುವಜನತೆ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸತ್ಯನಿಷ್ಠೆ ಹಾಗೂ ಸಮಾಜದ ಕುರಿತು ಚಿಂತನೆ ಬೋಧಿ ಸುವುದು ಅಗತ್ಯ ಎಂದರು.

ಮೀತಿಮೀರಿದ ಭ್ರಷ್ಟಾಚಾರದಿಂದ ಜನತೆ ರೋಸಿ ಹೋಗಿದ್ದಾರೆ. ವ್ಯವಸ್ಥೆಯ ಬದಲಾವಣೆಗೆ ಇದು ಸಕಾಲವಾಗಿದ್ದು, ಪ್ರತಿಯೊಬ್ಬರು ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೆಜ್ಜೆ ಹಾಕುವಂತೆ ಕರೆ ನೀಡಿದರು. ಸನ್ಮಾನಿತ ಸಾಧಕ ಕೆ.ಎಸ್‌.ಆರ್‌.ಪಿ., ಎಸ್‌.ಪಿ. ಬಸವರಾಜ ಜಿಳ್ಳೆ ಮಾತನಾಡಿ, ಸಮಾಜದ ಪ್ರಗತಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಅತ್ಯಂತ ಹಿರಿದಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಹಣಮಂತರಾಯ ಅಟ್ಟೂರ ಮಾತನಾಡಿದರು. ಕಲಬುರಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್‌.ಕೆ. ಹೀರೆಮಠ, ಜಿಲ್ಲಾಧ್ಯಕ್ಷ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ನಾಗಲಿಂಗಯ್ಯ ಮಠಪತಿ ಹಾಜರಿದ್ದರು. ಗುಂಡಣ್ಣಾ ಡಿಗ್ಗಿ ಹರಸೂರ, ಗಣೇಶ ಪಾಟೀಲ ಅವರಿಂದ ನಗೆಚಟಾಕಿ ನಡೆಯಿತು. 

Advertisement

ನಂದೀಶ್ವರ ಜೆ. ಪಾಟೀಲ, ಸಾಯಬಣ್ಣ ಬೆಳಮ, ರಾಜಶೇಖರ ಪಾಟೀಲ, ಶಿವಕುಮಾರ ಗಣಾಚಾರಿ, ರಘುನಂದನ ಕುಲಕರ್ಣಿ, ಕಲ್ಯಾಣಿ ಮುರುಡ್‌, ಆನಂದ ಖೇಳಗಿ, ಶರಣು ಜೆ. ಪಾಟೀಲ, ಭೀಮರಾವ ಹುಂಪಳಿ, ನಾಗರಾಜ ಹೆಬ್ಟಾಳ, ಡಾ. ರಾಜಕುಮಾರ ಪಾಟೀಲ, ರಜನಿಕಾಂತ ಬರುಡೆ, ಶಿವಶರಣಪ್ಪ ಸಿರಿ, ಡಾ| ಸುಧಾ ಹಾಲಕಾಯಿ, ಗೋಪಾಲ ಪಾಲಾದಿ, ನೀಲಾಂಬಿಕಾ ಚೌಕಿಮಠ, ಚನ್ನಬಸವ, ನಿಸಾರ್‌ ಅಹ್ಮದ್‌ ಸೇರಿದಂತೆ ಕೆ.ಎಸ್‌.ಆರ್‌.ಪಿ. ಸಿಬ್ಬಂದಿ  ಹಾಗೂ ನೂರಾರು ಜನ ಭಾಗವಹಿಸಿದ್ದರು. ನಾಗಲಿಂಗಯ್ಯ ಮಠಪತಿ ಸ್ವಾಗತಿಸಿದರು. ರವಿ ಶಹಾಪೂರಕರ್‌ ನಿರೂಪಿಸಿದರು, ಮಲಕಾರಿ ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next