Advertisement

ಇಂದಿರಾ ಕ್ಯಾಂಟಿನ್‌ಗೆ ಯುವಕರ ಲಗ್ಗೆ

10:20 AM Feb 12, 2018 | Team Udayavani |

ಕಲಬುರಗಿ: ಮಹಾನಗರ ಪಾಲಿಕೆ ಆವರಣದಲ್ಲಿ ಶನಿವಾರ ಆರಂಭವಾಗಿರುವ ಇಂದಿರಾ ಕ್ಯಾಂಟಿನ್‌ಗೆ ಎರಡನೇ ದಿನವಾದ ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಗಮಿಸಿರುವುದು ಕಂಡು ಬಂತು. ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರಿಂದ ಶನಿವಾರ ಉದ್ಘಾಟಿಸಲ್ಪಟ್ಟ ಇಂದಿರಾ ಕ್ಯಾಂಟಿನ್‌ ರವಿವಾರ ಮಧ್ಯಾಹ್ನ 12:30ಕ್ಕೆ ಪ್ರಾರಂಭವಾಯಿತು.

Advertisement

ಮಧ್ಯಾಹ್ನ 12:00ಕ್ಕೆ ಅನೇಕ ಯುವಕರು ಇಂದಿರಾ ಕ್ಯಾಂಟಿನ್‌ ಮುಂದೆ ಉಪಹಾರಕ್ಕಾಗಿ ಕಾಯ್ದು ನಿಂತರು. ಕ್ಯಾಂಟಿನ್‌ ಹೊರಗಡೆ ಗೇಟ್‌ ಮುಚ್ಚಿದ್ದರಿಂದ ಪಾದಾಚಾರಿ ರಸ್ತೆ ಮೇಲೆ ಕ್ಯಾಂಟಿನ್‌ ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಾ ಕುಳಿತ್ತಿದ್ದರು.

ಸರಿಯಾಗಿ ಮಧ್ಯಾಹ್ನ 12:30ಕ್ಕೆ ದ್ವಾರ ತೆಗೆದಿದ್ದರಿಂದ ಯುವಕರ ಪಡೆಯು ಕ್ಯಾಂಟಿನ್‌ ಮುಂದೆ ಸರದಿ ಸಾಲಿನಲ್ಲಿ ನಿಂತು ಟೋಕನ್‌ ಪಡೆದು ಉಪಾಹಾರ ಸೇವಿಸಿದರು. ಬಹುತೇಕ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಆಟೋ ಚಾಲಕರಾಗಲಿ, ಕೃಷಿ, ಕೂಲಿ ಕಾರ್ಮಿಕರಾಗಲಿ ಆರಂಭದಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬರಲಿಲ್ಲ. ರವಿವಾರ ರಾತ್ರಿ ಊಟಕ್ಕೆ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ವಿಷಯ ಸಿಬ್ಬಂದಿಗಳಿಂದ ಕೇಳಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next