Advertisement
ವಿಧಾನಸಭೆ ವ್ಯಾಪ್ತಿಯ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ 261 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಬಿಸಿಲ ಧಗೆಯಲ್ಲೂ ಸಾಲುಗಟ್ಟಿ ಬಂದ ಮತದಾರರು ಮತದಾನ ಮಾಡಿದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ದೇವನೂರ, ದುಗನೂರ, ಮೋತಕಪಲ್ಲಿ, ಮುಧೋಳ ಹಂದರಕಿ, ವೆಂಕಟಾಪುರತಾಂಡಾಗಳಲ್ಲಿ ಕೆಲ ಸಣ್ಣಪುಟ್ಟ ಗದ್ದಲಗಳು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ನಡೆದವಾದರೂ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿತು.
ಪಂಚಮುಖೀ ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಮುಖಂಡ ಬಸವರಾಜ ಭೂತಪುರ, ನಾಗೇಂದ್ರಪ್ಪ ಸಾಹುಕಾರ, ಶಿವಕುಮಾರ ಪಾಟೀಲ, ಪೋಲಿಂಗ್ ಬೂತ್ ಸಿಬ್ಬಂದಿ ಕಾಂಗ್ರೇಸ್ ಮುಖಂಡ ಸಿದ್ದು ಬಾನಾರ ಅವರ ಪತ್ನಿಯಾಗಿದ್ದು, ಮೋಸದಿಂದ ಮತದಾರರನ್ನು ಕಾಂಗ್ರೆಸ್‌ಗೆ ಮತ ಹಾಕಲು ಸೂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ಸಿಬ್ಬಂದಿಯನ್ನು ಹೊರಕಳಿಸಿದಾಗ ಪರಿಸ್ಥಿತಿ ತಿಳಿಗೊಂಡಿತು.
Related Articles
Advertisement
1 ಗಂಟೆ ಮತದಾನಕ್ಕೆ ತಡೆ: ತಾಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಒಂದು ಗಂಟೆಕಾಲ ಮತದಾನ ಸ್ಥಗಿತಗೊಂಡಿತ್ತು. ನಂತರ ಆಗಮಿಸಿದ ಅ ಧಿಕಾರಿಗಳು ವಿವಿಪ್ಯಾಟ್ ಬದಲಾಯಿಸಿ, ಮತದಾನಕ್ಕೆ ಅನುವು ಮಾಡಿಕೊಟ್ಟರು. ಸಚಿವ ಡಾ. ಶರಣಪ್ರಕಾಶ ಪಾಟೀಲ ಆಡಕಿ ಗ್ರಾಮಕ್ಕೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಅವರು ಕುಳಿತಿದ್ದ ಕಾರ್‌ನ್ನು ತಡೆದು ಮೋದಿ ಮೋದಿ ಎಂದು ಘೋಷಣೆ ಕೂಗಿದ ಪ್ರಸಂಗ ನಡೆಯಿತು. ಈ ವೇಳೆ ಸಚಿವರು ಕಾರಿನಿಂದ ಇಳಿಯದೇ ಹಾಗೆ ತೆರಳಿದರು.