Advertisement

ರುದನೂರ: ವಿವಿಧ ಅಭಿವೃದಿ ಕಾಮಗಾರಿ ಉದ್ಘಾಟನೆ

10:15 AM Feb 27, 2018 | Team Udayavani |

ಚಿಂಚೋಳಿ: ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಟ್ಟಿರುವ 31 ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಕಳೆದ ಹತ್ತು ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನ ಮಾಡಿರುವುದರಿಂದ ಹಳ್ಳಿಗಳು ಸಾಕಷ್ಟು ಬದಲಾವಣೆಗೊಂಡು ಪ್ರಗತಿಗೊಂಡಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ತಾಲೂಕಿನ ರುದನೂರ ಗ್ರಾಮದಲ್ಲಿ ಸೇತುವೆ ಕಾಮಗಾರಿ ಅಡಿಗಲ್ಲು ಹಾಗೂ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಕೋಣೆ, ಅಂಬಿಗರ ಚೌಡಯ್ಯ ಸಮುದಾಯ ಭವನ, ಸಿಮೆಂಟ್‌ ರಸ್ತೆ ಉದ್ಘಾಟಿಸಿದ ನಂತರ ಪ್ರಾಥಮಿಕ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಯ ಜನರ ಏಳ್ಗೆಗಾಗಿ ಜನಸಂಖ್ಯೆಗನುಣವಾಗಿ ಕಳೆದ ಐದು ವರ್ಷಗಳಲ್ಲಿ 85 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಬಿಜೆಪಿ ಸರಕಾರದಲ್ಲಿ ಕೇವಲ 25 ಸಾವಿರ ಕೋಟಿ ಖರ್ಚು ಮಾಡಿತ್ತು. 

ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಇಡೀ ದೇಶಕ್ಕೆ ಮಾದರಿ ಆಗಿದೆ. ಯಾವ ರಾಜ್ಯದಲ್ಲಿ ಇಂತಹ ಯೋಜನೆ ಇಲ್ಲ. ಬಡವರಿಗೆ ಉಚಿತವಾಗಿ ಅಕ್ಕಿ ವಿತರಣೆ ನೀಡಲಾಗುತ್ತಿದೆ. ಬಡ ಜನರ ಏಳ್ಗೆ ರಾಜ್ಯ ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದರು. 

ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 8 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದಾರೆ. ನಿರವ ಮೋದಿ ಮತ್ತು ವಿಜಯ ಮಲ್ಯಾ ಸಾವಿರಾರು ಕೋಟಿ ರೂ.ಸಾಲ ಪಡೆದು ದೇಶ ಬಿಟ್ಟು ಹೋಗಿದ್ದಾರೆ. ಅಂತಹವರ 1.20 ಲಕ್ಷ ಕೋಟಿ ರೂ. ಸಾಲವನ್ನು ಕೇಂದ್ರ ಮನ್ನಾ ಮಾಡಿದೆ ಎಂದರು.

Advertisement

ರುದನೂರ, ಭೂತಪೂರ, ಚಿಂತಪಳ್ಳಿ ಗ್ರಾಮಗಳ ಜನರಿಗೆ ಶುದ್ಧ ನೀರು ಪೂರೈಕೆಗೊಸ್ಕರ ಬಹುಗ್ರಾಮ ಯೋಜನೆಯಡಿ 6 ಕೋಟಿ ರೂ. ಮಂಜೂರಿಗೊಳಿಸಿ ಯೋಜನೆ ಪೂರ್ಣಗೊಳಿಸಲಾಗಿದೆ. ಜನರು ಶುದ್ಧ ನೀರು ಕುಡಿಯುತ್ತಿದ್ದಾರೆ. 

ಗಡಿಕೇಶ್ವರ, ಖರ್ಚಖೇಡ, ಸುಲೇಪೇಟ, ಶಿರೋಳಿ, ಕುಪನೂರ, ಭಂಟನಳ್ಳಿ ಗ್ರಾಮಗಳ ರಸ್ತೆ ಡಾಂಬರೀಕರಣಗೊಳಿಸಲಾಗಿದೆ ಎಂದರು. ವೆಂಕಟರೆಡ್ಡಿ ಜಟ್ಟೂರ, ಬಿಚ್ಚಾರೆಡ್ಡಿ ಪಾಟೀಲ್‌, ವಿಶ್ವನಾಥರೆಡ್ಡಿ, ಶಿವಶರಣ ರೆಡ್ಡಿ, ಸುಭಾಶ ನಿಷ್ಟಿ, ಲಿಂಗಶೆಟ್ಟಿ ತಟ್ಟೆಪಳ್ಳಿ, ರಾಮಲಿಂಗ ನಾಟೀಕಾರ, ಗುಂಡಮ್ಮ, ಡಾ| ಮಹ್ಮದ ಗಪಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next