Advertisement

ಅಲ್ಲಿ ಬರಗಾಲ, ಇಲ್ಲಿ ನೆರೆಗಾಲ; ಭೂಮಿಗೆ ಕೇಡುಗಾಲ

12:49 AM Aug 23, 2022 | Team Udayavani |

“ಮಳೆಯಾಗುವುದೋ, ಬರ ಕಾಡುವುದೋ, ಊರು ಮುಳುಗುವುದೋ, ಕಾಡು ಹೊತ್ತಿ ಉರಿಯುವುದೋ?…’ ಇಡೀ ಜಗತ್ತೇ ಈಗ ಇಂಥದ್ದೊಂದು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಬದುಕುವಂತಾಗಿದೆ ! ಹವಾಮಾನ ವೈಪರೀತ್ಯವು ಇಡೀ ಮನುಕುಲವನ್ನೇ ಗೊಂದಲಕ್ಕೆ ನೂಕಿದೆ. ಇವೆಲ್ಲದರ ಸಾರ ಒಂದೇ -ಭೂಮಿ ಅಪಾಯದಲ್ಲಿದೆ.

Advertisement

ಕುಡಿಯಲು ನೀರೂ ಸಿಗುತ್ತಿಲ್ಲ
ಬ್ರಿಟನ್‌, ಅಮೆರಿಕ, ಸೊಮಾಲಿಯಾ, ಮೆಕ್ಸಿಕೋ, ಚಿಲಿ ಸೇರಿದಂತೆ ಹಲವು ದೇಶಗಳಿಗೆ “ಬರಗಾಲ’ದ ನರಕ ದರ್ಶನವಾಗುತ್ತಿದೆ. ದಾಖಲೆ ತಾಪಮಾನ, ಕುಡಿಯುವ ನೀರಿನ ಅಭಾವಕ್ಕೆ ಜನ ಬಸವಳಿದಿದ್ದಾರೆ. ಹುಲ್ಲುಗಾವಲುಗಳು ಒಣಗಿ ಕಾಳಿYಚ್ಚು ಹಬ್ಬುತ್ತಿವೆ, ಪ್ರಾಣಿಗಳು ನಿಂತಲ್ಲಿಯೇ ಕುಸಿದುಬೀಳುತ್ತಿವೆ, ಸೂಪರ್‌ಮಾರ್ಕೆಟ್‌ಗಳಲ್ಲಿ ನೀರಿನ ಬಾಟಲಿಗಳೇ ಸಿಗುತ್ತಿಲ್ಲ,

ಆರ್ಥಿಕ ಅಧಃಪತನದತ್ತ ಚೀನ
ಹವಾಮಾನ ವೈಪರೀತ್ಯವು ಚೀನದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ನೈಋತ್ಯ ಚೀನದಲ್ಲಿ ಕಾಳಿYಚ್ಚಿನ ಕಾಟವಾದರೆ, ಈಶಾನ್ಯ ಚೀನದಲ್ಲಿ ಪ್ರವಾಹದಿಂದಾಗಿ ಬೆಳೆಗಳೆಲ್ಲ ನೀರುಪಾಲಾಗಿವೆ. ವಿದ್ಯುತ್‌ ಕ್ಷಾಮದ ಆತಂಕ ಎದುರಾಗಿದೆ. ಕಾರ್ಖಾನೆಗಳನ್ನು ಮುಚ್ಚಿ, ಶಾಪಿಂಗ್‌ ಮಾಲ್‌ಗ‌ಳಿಗೆ ಬೀಗ ಜಡಿದು ವಿದ್ಯುತ್‌ ಉಳಿಸುವ ಪ್ರಯತ್ನ ನಡೆದಿದೆ.

ಬತ್ತುತ್ತಿವೆ ನೀರ ಸೆಲೆ
ತಾಪಮಾನದ ಹೆಚ್ಚಳದಿಂದಾಗಿ ಒಂದೆಡೆ ಸಮುದ್ರದ ಮಟ್ಟ ಏರಿಕೆಯಾಗುತ್ತಿದ್ದರೆ, ನದಿಗಳ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಇಟಲಿಯಲ್ಲಿ ರಿವರ್‌ ಪೋ ನೀರಿನ ಮಟ್ಟ ಇಳಿದ ಪರಿಣಾಮ, ಎರಡನೇ ವಿಶ್ವಯುದ್ಧದ ವೇಳೆ ನೀರಿನಡಿ ಹೂತುಹೋಗಿದ್ದ 450 ಕೆ.ಜಿ.ತೂಕದ ಬಾಂಬ್‌ವೊಂದು ಸಿಕ್ಕಿದೆ. ಸೇನಾ ಪರಿಣತರು ಬಂದು ಬಾಂಬ್‌ ನಿಷ್ಕ್ರಿಯಗೊಳಿಸಿದ್ದಾರೆ.

ನೆರೆಯೋ, ಬರವೋ?
ಭಾರತದ ಪರಿಸ್ಥಿಯೂ ಭಿನ್ನವಾಗಿಲ್ಲ. ದೇಶದ ಪ್ರಮುಖ ಅಕ್ಕಿ ಬೆಳೆಯುವ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಲವು “ಬರ’ದ ಮುಷ್ಟಿಗೆ ಸಿಲುಕಿವೆ. ಅಸ್ಸಾಂ, ಒಡಿಶಾ, ಝಾರ್ಖಂಡ್‌ನ‌ಲ್ಲಿ ಪ್ರವಾಹವು ಸಾವಿರಾರು ಮಂದಿಯನ್ನು ನಿರ್ವಸಿತರನ್ನಾಗಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next