Advertisement

BJP; ಈಶ್ವರಪ್ಪ ಮನವೊಲಿಸೋ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ

02:38 PM Mar 22, 2024 | Team Udayavani |

ಹುಬ್ಬಳ್ಳಿ: ಬಿಜೆಪಿಯಿಂದ ಬಂಡಾಯ ಎದ್ದಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಸಮಾಧಾನ ಮಾಡಲು ನಮ್ಮ ನಾಯಕರು ಯಶಸ್ವಿ ಯಾಗ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌

Advertisement

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಶ್ವರಪ್ಪ ಮನವೊಲಿಸೋ ವಿಶ್ವಾಸ ಇದೆ. ಸಂಬಂಧ ಬಹಳ ಮುಖ್ಯ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅನ್ನೋದು ಅವರ ಬಯಕೆ ಇದೆ. ಹೀಗಾಗಿ ಈಶ್ವರಪ್ಪ ಮನವೊಲಿಕೆಗೆ ನಮ್ಮ ಹೈಕಮಾಂಡ್ ಯಶಸ್ವಿ ಯಾಗತ್ತೆ. ಕರಡಿ ಸಂಗಣ್ಣ, ಪ್ರತಾಪ್ ಸಿಂಹ, ಸದಾನಂದಗೌಡ ಜೊತೆ ಮಾತುಕತೆ ಮಾಡಲಾಗುತ್ತಿದೆ. ಇವರೆಲ್ಲ ಪಕ್ಷ ಕಟ್ಟಿದವರು, ಹೀಗಾಗಿ ನಮ್ಮ ಜತೆಯಲ್ಲಿ ಇರುತ್ತಾರೆ. ಚುನಾವಣೆ ಸಂದರ್ಭದಲ್ಲಿ ನೋವಾಗೋದು ಸಹಜ ಎಂದರು.

ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ರಾಜಕೀಯ ನಾಟಕದ ಒಂದು ಭಾಗ. ಮತಗಳಿಗಾಗಿ ಪಾದಯಾತ್ರೆ ಮಾಡಿದ್ದರು. ‌ಇವರಿಗೆ ಯೋಜ‌ನೆ ಬಗ್ಗೆ ಕಾಳಜಿ ಇಲ್ಲ,ಆ ಭಾಗದ ಜನರಿಗೆ ಮೂಗಿಗೆ ತುಪ್ಪ ಹಚ್ಚಿದ್ದಾರೆ.‌ಕೋರ್ಟ್ ನಲ್ಲಿ ಇದೆ ಅಂದರು, ಸಿದ್ದರಾಮಯ್ಯ ಇಲ್ಲ ಅಂದರು. ಕಾಂಗ್ರೆಸ್ ಗೆ ನಿಜವಾದ ಕಾಳಜಿ ಇದ್ದರೆ ಇಂಡಿಯಾ ಒಕ್ಕೂಟದಿಂದ ಹೊರ ಬರಬೇಕು. ಕಾಂಗ್ರೆಸ್ ಮೇಕೆದಾಟು ಯೋಜನೆ ಬಗ್ಗೆ ನಿಲುವು ಸ್ಪಷ್ಟ ಪಡಿಸಬೇಕು.ಲೋಕಸಭೆಗೆ ಕಾಂಗ್ರೆಸ್ ನಲ್ಲಿ ಸ್ಪರ್ದೆ ಮಾಡಲು ಅಭ್ಯರ್ಥಿ ಸಿಗಲಿಲ್ಲ.‌ ಮಂತ್ರಿಗಳು ಕೂಡಾ ಚುನಾವಣೆಗೆ ನಿಲ್ಲಲಿಲ್ಲ. ಇದೀಗ ಅವರ ಮನೆಯಲ್ಲಿ ಟಿಕೆಟ್ ಕೊಡೋ ಸ್ಥಿತಿ ಬಂದಿದೆ.ಜಗದೀಶ್ ಶೆಟ್ಟರ್ ಗೆ ಇನ್ನೆರಡು ದಿನದಲ್ಲಿ ಟಿಕೆಟ್ ಫೈನಲ್ ಆಗಬಹುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next