Advertisement

Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ

07:00 PM Sep 14, 2024 | Team Udayavani |

ಹೊಸದಿಲ್ಲಿ: ”ಹಿಂದಿ ಮತ್ತು ಇತರ ಭಾರತೀಯ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು ಏಕೆಂದರೆ ಅಧಿಕೃತ ಭಾಷೆ ಹಿಂದಿ ಎಲ್ಲ ಭಾಷೆಗಳ ಸ್ನೇಹಿತ ಮತ್ತು ಅವು ಪರಸ್ಪರ ಪೂರಕವಾಗಿವೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ(ಸೆ14) ಹೇಳಿದ್ದಾರೆ.

Advertisement

ಹಿಂದಿ ದಿವಸ್ ಸಂದರ್ಭ ನಾಲ್ಕನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಾ, ‘ಎಲ್ಲ ಇತರ ಭಾರತೀಯ ಭಾಷೆಗಳನ್ನು ಬಲಪಡಿಸುವವರೆಗೆ ಮತ್ತು ಅಧಿಕೃತ ಭಾಷೆಯು ಎಲ್ಲರೊಂದಿಗೆ ಸಂವಾದವನ್ನು ಸ್ಥಾಪಿಸುವವರೆಗೆ ಅಧಿಕೃತ ಭಾಷೆ ಹಿಂದಿಯ ಪ್ರಚಾರ ನಡೆಯುವುದಿಲ್ಲ’ ಎಂದು ಹೇಳಿದರು.

”ಹಿಂದಿಯನ್ನು ಸಂವಹನ ಭಾಷೆ, ಸಾಮಾನ್ಯ ಭಾಷೆ, ತಾಂತ್ರಿಕ ಭಾಷೆ ಮತ್ತು ಈಗ ಅಂತಾರಾಷ್ಟ್ರೀಯ ಭಾಷೆಯನ್ನಾಗಿ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಸಂದರ್ಭವೇ ಹಿಂದಿ ದಿವಸ್” ಎಂದು ಶಾ ಹೇಳಿದರು.

“ನಾವು ಹಿಂದಿಯನ್ನು ಅಧಿಕೃತ ಭಾಷೆಯಾಗಿ 75 ವರ್ಷಗಳನ್ನು ಪೂರ್ಣಗೊಳಿಸಿದ ಗುರುತಾಗಿ ವಜ್ರಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸಿ ದೇಶದ ಎಲ್ಲ ಸ್ಥಳೀಯ ಭಾಷೆಗಳನ್ನು ಹಿಂದಿಯ ಮೂಲಕ ಸಂಪರ್ಕಿಸುವ ಮೂಲಕ ನಮ್ಮ ಸಂಸ್ಕೃತಿ, ಭಾಷೆ, ಸಾಹಿತ್ಯ, ಕಲೆ, ವ್ಯಾಕರಣವನ್ನು ಉಳಿಸಿ ಬೆಳೆಸುವತ್ತ ಸಾಗುತ್ತಿದ್ದೇವೆ. ಹಿಂದಿಯು ಭೌಗೋಳಿಕ-ರಾಜಕೀಯ ಭಾಷೆಗಿಂತ ಹೆಚ್ಚಾಗಿ ಭೌಗೋಳಿಕ-ಸಾಂಸ್ಕೃತಿಕ ಭಾಷೆಯಾಗಿದೆ. ಗೃಹ ಮತ್ತು ಸಹಕಾರ ಎಂಬ ತನ್ನ ಎರಡು ಸಚಿವಾಲಯಗಳ ಫೈಲ್‌ಗಳ ಮೂಲಕ ಎಲ್ಲಾ ಸಂವಹನಗಳನ್ನು ಹಿಂದಿ ಮೂಲಕ ಮಾಡಲಾಗುತ್ತದೆ. ಈ ಹಂತವನ್ನು ತಲುಪಲು ಮೂರು ವರ್ಷಗಳು ತೆಗೆದುಕೊಂಡಿತು” ಎಂದು ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next