Advertisement

ಕುಷ್ಟಗಿಯಲ್ಲಿ ವೆಂಟಿಲೇಟರ್‌ ಇವೆ, ತಜ್ಞರಿಲ್ಲ

10:26 PM May 24, 2021 | Team Udayavani |

ಕುಷ್ಟಗಿ: ಇಲ್ಲಿನ ಡಿಸಿಎಚ್‌ಸಿ (ಡೆಡಿಕೇಟ್‌ ಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌)ನಲ್ಲಿ ವೆಂಟಿಲೇಟರ್‌ ವ್ಯವಸ್ಥೆ ಇಲ್ಲ. ವೆಂಟಿಲೇಟರ್‌ ನಿರ್ವಹಣೆ ತಜ್ಞರು ಇಲ್ಲದಿರುವ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ಆರೋಗ್ಯ ಹದಗೆಟ್ಟವರು ಯಲಬುರ್ಗಾ, ಕೊಪ್ಪಳ, ಗಂಗಾವತಿ ಕೋವಿಡ್‌ ಆಸ್ಪತ್ರೆಗಳನ್ನು ನೆಚ್ಚಿಕೊಳ್ಳಬೇಕಿದೆ.

Advertisement

ಕಳೆದ ಮೇ 7ರಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರು, ಈ ಆಸ್ಪತ್ರೆಗೆ μಜಿಷಿಯನ್‌ ಹಾಗೂ ಅರಿವಳಿಕೆ ತಜ್ಞರನ್ನು ನಿಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಇಲ್ಲಿಯವರೆಗೂ ವೈದ್ಯ ಹುದ್ದೆಗೆ ಯಾರು ನಿಯೋಜನೆ ಆಗಿಲ್ಲ. ಅರಿವಳಿಕೆ ತಜ್ಞರಿದ್ದರೆ ವೆಂಟಿಲೇಟರ್‌ ನಿರ್ವಹಿಸುವ ಸಾಧ್ಯತೆಗಳಿವೆ.

ಕುಷ್ಟಗಿ ಆಸ್ಪತ್ರೆಯ ಅರಿವಳಿಕೆ ತಜ್ಞ ಅಮಾನತ್ತುಗೊಂಡಿರುವ ಹಿನ್ನೆಲೆಯಲ್ಲಿ ಈ ಹುದ್ದೆಗೆ ಬೇರೊಬ್ಬರನ್ನು ತಾತ್ಕಾಲಿಕವಾಗಿ ನಿಯೋಜಿಸಿಲ್ಲ. ಕುಷ್ಟಗಿ ಡಿಸಿಎಚ್‌ಸಿಯಲ್ಲಿ ಸದ್ಯ ಆಕ್ಸಿಜನ್‌ ಸಹಿತ 42 ಬೆಡ್‌ ಗಳಿದ್ದು, ನಾಲ್ಕು ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಗಿದೆ. ಆದರೆ ವೆಂಟಿಲೇಟರ್‌ ನಿರ್ವಹಣೆಗೆ ತಜ್ಞರು ಇಲ್ಲದಿರುವ ಹಿನ್ನೆಲೆಯಲ್ಲಿ ವಾರದ ಹಿಂದೆ ಇಲ್ಲಿರುವ ಎರಡು ವೆಂಟಿಲೇಟರ್‌ ಗಂಗಾವತಿ ಕೋವಿಡ್‌ ಆಸ್ಪತ್ರೆಯವರು ಬಳಸಿಕೊಂಡಿದ್ದಾರೆ.

ಡಿಸಿಎಚ್‌ಸಿಯಲ್ಲಿ ತೀರ ಗಂಭೀರ ಪ್ರಕರಣಗಳಿಗೆ ವೆಂಟಿಲೇಟರ್‌ ಅಗತ್ಯವಾಗಿದ್ದು, ಸೌಲಭ್ಯ ಇಲ್ಲದಿರುವುದರಿಂದ ಗಂಭೀರ ಪ್ರಕರಣಗಳನ್ನು ಯಲಬುರ್ಗಾ, ಗಂಗಾವತಿ, ಕೊಪ್ಪಳ ಜಿಲ್ಲಾಸ್ಪತ್ರೆ ದಾಖಲಿಸುವುದು ಅನಿವಾರ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೆಂಟಿಲೇಟರ್‌ ಇದ್ದಾಗ ನಿರ್ವಹಣೆ, ತಾಂತ್ರಿಕ ಸಿಬ್ಬಂದಿ ಸಕಾಲಿಕವಾಗಿ ನೇಮಿಸದೇ ಇರುವುದು ಯಾರನ್ನು ದೂರುವುದು ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next