Advertisement

ಬಿಜೆಪಿಯಲ್ಲಿ ಎರಡು ಹೈಕಮಾಂಡ್ ಇದೆ ಎಂದು ಒಪ್ಪಿಕೊಂಡ ಶಾಸಕ ಹರತಾಳು ಹಾಲಪ್ಪ

01:44 PM Jul 31, 2021 | Team Udayavani |

ಶಿವಮೊಗ್ಗ: ನಮಗೆ ಇಬ್ಬರೂ ಹೈಕಮಾಂಡ್. ದೆಹಲಿ ಹೈಕಮಾಂಡ್ ಹಾಗೂ ಯಡಿಯೂರಪ್ಪ ಒಪ್ಪಿದರೆ ನಾನು ಸಚಿವನಾಗುತ್ತೇನೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಈ ಮೂಲಕ ಬಿಜೆಪಿಯಲ್ಲಿ ಎರಡು ಹೈಕಮಾಂಡ್ ಇದೆ ಎಂದು ಹರತಾಳು ಹಾಲಪ್ಪ ಒಪ್ಪಿಕೊಂಡರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ, ಮುಂದಿನ ಸಚಿವ ಸಂಪುಟದಲ್ಲಿ ಹಿರಿಯರಿಗೆ ಅವಕಾಶ ನೀಡುವುದಿಲ್ಲ ಎಂದು ಮಾಧ್ಯಮದಲ್ಲಿ‌ ನಾನು ನೋಡಿದ್ದೇನೆ. ಒಂದು ವೇಳೆ ಹಿರಿಯರು ಹಿಂದೆ ಸರಿದರೆ ನನಗೆ, ಆರಗ ಜ್ಞಾನೇಂದ್ರಗೆ ಅವಕಾಶವಾಗಲಿದೆ ಎಂದರು.

ಇದನ್ನೂ ಓದಿ:ಹಣಕಾಸು ಸಚಿವೆ ಭೇಟಿ ಮಾಡಿದ ಮುಖ್ಯಮಂತ್ರಿ : ಜಿಎಸ್ ಟಿ ಪರಿಹಾರ ಬಿಡುಗಡೆಗೆ ಮನವಿ

ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ.  ಹೀಗಾಗಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ‌ಎಂಬುದನ್ನು ಕಾದು ನೋಡೋಣ. ಹೈಕಮಾಂಡ್ ಅಳೆದು ತೂಗಿ ಗಟ್ಟಿ ತಿರ್ಮಾನ ಕೈಗೊಳ್ಳಲಿದೆ‌. ಸಚಿವ ಸ್ಥಾನ ಸಿಕ್ಕರೆ ನಿರ್ವಹಿಸುತ್ತೇನೆ. ನಾನು ಆಶಾವಾದಿ, ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಆದರೆ ಲಾಬಿ ಮಾಡುವುದಿಲ್ಲ ಎಂದು ಹರತಾಳು ಹಾಲಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next