Advertisement

ಗೋವಾದ ಸ್ವಾತಂತ್ರ್ಯಕ್ಕಾಗಿ ಹಲವರ ಬಲಿದಾನವಿದೆ : ಪ್ರಧಾನಿ ಮೋದಿ

05:36 PM Dec 19, 2021 | Team Udayavani |

ಪಣಜಿ : ‘ಗೋವಾದ ಸ್ವಾತಂತ್ರ್ಯಕ್ಕಾಗಿ ಹಲವಾರು ಹೋರಾಟಗಾರರು ಬಲಿದಾನ ಮಾಡಿದ್ದು, ಗೋಮಾಂತಕದ ಸ್ವಾತಂತ್ರ್ಯ ಹೋರಾಟಗಾರರು ನಿಜವಾದ ಅರ್ಥದಲ್ಲಿ ವಿಮೋಚನೆಗಾಗಿ ಹೋರಾಡಿದವರು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಶ್ಯಾಮಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿ ‘ಗೋವಾ ವಿಮೋಚನಾ ದಿನಾಚರಣೆ’ಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಪ್ರಧಾನಿ ಮೋದಿ ಮಾತನಾಡಿ, ‘ಗೋವಾ ವಿಮೋಚನಾ ದಿನಾಚರಣೆಯ ಸಂದರ್ಭದಲ್ಲಿ ಗೋವಾದ ಜನತೆಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.ಗೋವಾದ ಭೂಮಿ, ವಾತಾವರಣ ಮತ್ತು ಸಮುದ್ರಕ್ಕೆ ಪ್ರಕೃತಿ ಅದ್ಭುತ ಕೊಡುಗೆ ನೀಡಿದೆ.ಇಂದು ನಮ್ಮಲ್ಲಿ 60 ವರ್ಷಗಳ ಹೋರಾಟದ ಕಥೆ ಮತ್ತು ತ್ಯಾಗವಿದೆ’ ಎಂದರು.

‘ಗೋವಾದ ವಿಮೋಚನಾ ಹೋರಾಟವು, ಹೋರಾಟ ಮತ್ತು ತ್ಯಾಗದ ನಿಜವಾದ ಕಥೆಯನ್ನು ಹೇಳುತ್ತದೆ. ಪೋರ್ಚುಗೀಸ್ ಆಕ್ರಮಣದಲ್ಲಿದ್ದರೂ ಗೋವಾವನ್ನು ಉಳಿಸಿಕೊಂಡಿದೆ. ಪೋರ್ಚುಗೀಸರ ವಿರುದ್ಧ ಸ್ವಾತಂತ್ರ್ಯದ ಯುದ್ಧವನ್ನು ನಡೆಸಲಾಯಿತು’ ಎಂದರು.

”ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಗೋವಾದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಗೋವಾದ ಅಭಿವೃದ್ಧಿಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ.ಹರ್ ಘರ್ ನಲ್ ಯೋಜನೆ,ಆಧಾರ್ ಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಗೋವಾ ಇಂದು ಅಗ್ರಸ್ಥಾನದಲ್ಲಿದೆ’ ಎಂದರು.

“ಪ್ರಧಾನಿ ಗತಿಶಕ್ತಿ ಮಿಷನ್ ಅನ್ನು ವೇಗಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಪ್ರಧಾನ ಮಂತ್ರಿ ಗತಿಶಕ್ತಿ ಮಿಷನ್ ಮೂಲಸೌಕರ್ಯ ಅಭಿವೃದ್ಧಿಗೆ ನಿಜವಾಗಿಯೂ ಉತ್ತೇಜನ ನೀಡುತ್ತದೆ. ಗೋವಾ ಸ್ವಾವಲಂಬಿಯಾಗಲು ರಾಜ್ಯ ಸರ್ಕಾರವು ಗೋವಾದ ಪ್ರತಿಯೊಬ್ಬ ಜನರನ್ನು ತಲುಪುತ್ತಿದೆ” ಎಂದರು.

Advertisement

ಪ್ರಧಾನಮಂತ್ರಿ ಅವರನ್ನು ಸ್ವಾಗತಿಸಿ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ”60ನೇ ಗೋವಾ ವಿಮೋಚನಾ ದಿನಾಚರಣೆ ಅಂಗವಾಗಿ ಕೇಂದ್ರ ಸರಕಾರದಿಂದ 300 ಕೋಟಿ ರೂ.ನೀಡಿದೆ.ಪ್ರಧಾನಿ ಬಡವರ ಕಲ್ಯಾಣ ಯೋಜನೆ ಜಾರಿಗೊಳಿಸಿದ್ದೇವೆ. ಪಾರದರ್ಶಕ ರೀತಿಯಲ್ಲಿ ಯೋಜನೆ. ಪ್ರಧಾನಿಯವರ ಕನಸಿನ ನವಭಾರತವನ್ನು ರಚಿಸಲು ನಾವು ಗೋವಾದ ಜನರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.

ಗೋವಾ ರಾಜ್ಯ ಸರ್ಕಾರ ಭಾನುವಾರ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಗೋವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರಧಾನಿ ಮೋದಿಯವರ ಕೈಯಿಂದ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next