Advertisement

ಕ್ಯಾಂಟೀನ್‌ನಲ್ಲಿ ಕನ್ನಡಿಗರಿಗಿಲ್ಲ ಕೆಲಸ

11:27 AM Aug 21, 2017 | Team Udayavani |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದರೆ, ಮೇಯರ್‌ ಜಿ.ಪದ್ಮಾವತಿ ಮಾತ್ರ ಆರೋಪ ಸತ್ಯಕ್ಕೆ ದೂರ ಎಂದು ತಳ್ಳಿಹಾಕಿದ್ದಾರೆ. 

Advertisement

ಪ್ರತಿ ಇಂದಿರಾ ಕ್ಯಾಂಟೀನ್‌ನಲ್ಲಿ 7 ಸಿಬ್ಬಂದಿ ಹಾಗೂ ಅಡುಗೆ ಮನೆಯಲ್ಲಿ 20 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಗುತ್ತಿಗೆ ಪಡೆದಿರುವ ಸಂಸ್ಥೆಯವರು ಕನ್ನಡಿಗರಿಗೆ ಆದ್ಯತೆ ನೀಡದೆ ಹೊರ ರಾಜ್ಯದ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಆಹರ ಪೂರೈಕೆ ಮಾಡುವ ಗುತ್ತಿಗೆಯನ್ನು ಕುಂದಾಪುರ ಮೂಲಕ ಶೆಫ್ಟಾಕ್‌ ಹಾಗೂ ಪಂಜಾಬ್‌ ಮೂಲಕ ರಿವಾರ್ಡ್ಸ್‌ ಸಂಸ್ಥೆಗೆ ನೀಡಲಾಗಿದೆ. ಶೆಫ್ಟಾಕ್‌ ಸಂಸ್ಥೆಯವರು ಸಂಪೂರ್ಣವಾಗಿ ಕನ್ನಡಿಗರನ್ನು ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದು, ರಿವಾರ್ಡ್ಸ್‌ ಸಂಸ್ಥೆಯವರು ಹೊರ ರಾಜ್ಯದವರನ್ನು ನೇಮಿಸಿಕೊಂಡಿದ್ದಾರೆ.

ಈ ಕುರಿತು ಗುತ್ತಿಗೆದಾರರನ್ನು ಪ್ರಶ್ನಿಸಿದರೆ, ಸ್ಥಳೀಯರನ್ನೇ ನೇಮಿಸಿಕೊಳ್ಳಲು ಮುಂದಾದರೂ ಇಲ್ಲಿನವರು ಪಾತ್ರೆ ತೊಳೆಯುವುದು, ಕಸ ಗುಡಿಸುವ ಕೆಲಸಗಳಿಗೆ ಆಸಕ್ತಿ ತೋರುತ್ತಿಲ್ಲ. ಆ ಹಿನ್ನೆಲೆಯಲ್ಲಿ ಸ್ಥಳೀಯರನ್ನೇ ಆಹಾರ ಸರಬರಾಜು ಮಾಡುವ ವಾಹನ ಚಾಲಕರಾಗಿ ನೇಮಿಸಿಕೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡುತ್ತಾರೆ. 

ಸುಳ್ಳು ಸುದ್ದಿ ಹರಡಬೇಡಿ: ಮೇಯರ್‌
ಆಹಾರ ಪೂರೈಕೆ ಗುತ್ತಿಗೆಯನ್ನು ಎರಡು ಸಂಸ್ಥೆಗಳಿಗೆ ನೀಡಿದ್ದು, ಒಂದು ಸಂಸ್ಥೆಯಲ್ಲಿ ಎಲ್ಲರೂ ಕನ್ನಡಿಗರೇ ಇದ್ದಾರೆ. ಮತ್ತೂಂದು ಸಂಸ್ಥೆಯವರಿಗೆ ಸ್ಥಳೀಯರು ದೊರೆಯದ ಹಿನ್ನೆಲೆಯಲ್ಲಿ ಹೊರ ರಾಜ್ಯದ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ ಎಂದು ಮೇಯರ್‌ ಜಿ.ಪದ್ಮಾವತಿ ಸ್ಪಷ್ಟನೆ ನೀಡಿದ್ದಾರೆ. 

Advertisement

“ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದು, ಸ್ಥಳೀಯ ಏಜೆನ್ಸಿಗಳ ಮೂಲಕ ಕನ್ನಡಿಗರನ್ನೇ ನೇಮಿಸಿಕೊಳ್ಳುವ ಭರವಸೆಯನ್ನು ಸಂಸ್ಥೆಗಳು ನೀಡಿವೆ. ಆದರೆ, ಇಂದಿರಾ ಕ್ಯಾಂಟೀನ್‌ ಯಶಸ್ಸನ್ನು ಅರಗಿಸಿಕೊಳ್ಳಲು ಆಗದವರು ದಿನಕ್ಕೊಂದು ಸುಳ್ಳು ಸುದ್ದಿ ಹರಡಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಜನರಿಗೆ ಯಾರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಗೆತ್ತು,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next