Advertisement

ಕ್ಲಸ್ಟರ್‌ಗಳಲ್ಲಿ ಸೋಂಕು ಪ್ರಕರಣಗಳಿಲ್ಲ

05:34 AM Jun 13, 2020 | Lakshmi GovindaRaj |

ಬೆಂಗಳೂರು: ನಗರದ ವಿವಿಧ ವಾರ್ಡ್‌ಗಳಲ್ಲಿ ಸೋಂಕು ಪ್ರಕರಣಗಳು ದೃಢಪಡುತ್ತಿವೆ. ಸೋಂಕು ದೃಢಪಟ್ಟ ವ್ಯಕ್ತಿ ವಾಸವಿರುವ ಪ್ರದೇಶ ಕಂಟೈನ್ಮೆಂಟ್‌ ಮಾಡುತ್ತಿರುವುದರಿಂದ ನಗರದಲ್ಲಿ ಕಂಟೈನ್ಮೆಂಟ್‌ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದರು. ಪ್ರಾರಂಭದಲ್ಲಿ ನಗರದಲ್ಲಿ ಸೋಂಕು ದೃಢಪಟ್ಟ ವ್ಯಕ್ತಿ ಇದ್ದ ಒಂದು ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಕಂಟೈನ್ಮೆಂಟ್‌ ಮಾಡಲಾಗುತ್ತಿತ್ತು.

Advertisement

ಇದನ್ನು ಸದ್ಯ 100 ಮೀ. ಇಳಿಸಲಾಗಿದೆ. ಸದ್ಯ ಸೋಂಕು ಕಾಣಿಸಿಕೊಂಡ ವ್ಯಕ್ತಿಯ  ಮನೆ ಮಾತ್ರ ಕಂಟೈನ್ಮೆಂಟ್‌ ಮಾಡಲಾಗುತ್ತಿದ್ದು, ವಸತಿ ಸಮುತ್ಛಯವಾಗಿದ್ದರೆ, ಸೋಂಕು ದೃಢಪಟ್ಟ ವ್ಯಕ್ತಿ ವಾಸವಿದ್ದ ಮನೆಯ ಮೇಲ್ಭಾಗ ಮತ್ತು ಕೆಳಭಾಗದ ಮಹಡಿಗಳನ್ನು  ಕಂಟೈನ್ಮೆಂಟ್‌ ಮಾಡಲಾಗುತ್ತಿದೆ. ಇದರಿಂದ ನಗರದಲ್ಲಿ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ ಏರಿಕೆಯಾಗಿದೆ ಎಂದರು.

ಈ ಹಿಂದೆ ಪಾದರಾಯನಪುರ, ಹೊಂಗಸಂದ್ರ ಸೇರಿದಂತೆ ಪಾಲಿಕೆ ಗುರುತಿಸಿದ್ದ ಕ್ಲಸ್ಟರ್‌ ಪ್ರದೇಶಗಳಲ್ಲಿ ಹೆಚ್ಚಿನ  ಜನರಲ್ಲಿ ಸೋಂಕು ಕಾಣಿಸಿಕೊಳ್ಳತ್ತಿದ್ದಂತೆ ಈಗ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿಲ್ಲ. ಹೊರ ರಾಜ್ಯದಿಂದ ಆಗಮಿಸಿದವರು ಮತ್ತು ಕೆಮ್ಮು ಶೀತ ಮತ್ತು ಜ್ವರ (ಐಎಲ್‌ಐ) ಸಮಸ್ಯೆ  ಇರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದರು. ನಗರದಲ್ಲಿ ನಿತ್ಯ ಎರಡು ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸೋಂಕು ಪರೀಕ್ಷೆಗೆ  ಪಲ್‌ಗ‌ಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ.

ಇದರಿಂದ ವರದಿ ತಡವಾಗುತ್ತಿದ್ದು, ಸಮಸ್ಯೆಯಾಗುತ್ತಿದೆ. ನಾಲ್ಕೆ çದು ದಿನಗಳ ವರದಿ ಒಂದೇ ದಿನ ಬರುತ್ತಿದೆ ಎಂದರು. ಬಿಬಿಎಂಪಿ ನಡೆಸಿದ ಮನೆ- ಮನೆ ಆರೋಗ್ಯ ಸಮೀಕ್ಷೆಯಲ್ಲಿ ಪತ್ತೆಯಾಗಿರುವ  ಸೋಂಕು ಲಕ್ಷಣ ಇರುವವರು, ಹೊರ ರಾಜ್ಯದಿಂದ ಬಂದವರು ಹಾಗೂ ಕ್ವಾರಂಟೈನ್‌ನಲ್ಲಿ ಇರುವವರು ಸೇರಿದಂತೆ ಒಟ್ಟು ಎರಡು ಸಾವಿರ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಸೋಂಕಿಲ್ಲ: ನಗರದಲ್ಲಿ ಗುರುವಾರ ಸೋಂಕು ದೃಢಪಟ್ಟ ಒಟ್ಟು 17 ಪ್ರಕರಣಗಳಲ್ಲಿ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಸೋಂಕು ಪತ್ತೆಯಾಗಿಲ್ಲ. ಆದರೆ ಸಮೀಪದ ಅರ್ಕಾವತಿ ಬಡಾವಣೆಯಲ್ಲಿ 45   ವರ್ಷದ ಮಹಿಳೆಗೆ ಸೋಂಕು ದೃಢ ಪಟ್ಟಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರದ ವರದಿಯಲ್ಲಿ ಮಾನ್ಯತಾ ಪಾರ್ಕ್‌ನಲ್ಲಿ ಸೋಂಕುಎಂದು ಬಂದಿದ್ದು, ಪಾಸಿಟಿವ್‌ ಕೇಸ್‌ ಬಂದಿಲ್ಲ ಎಂದು ಪಾರ್ಕ್‌ನ ವಕ್ತಾರರು ತಿಳಿಸಿದ್ದಾರೆ.

Advertisement

ರಾಜಧಾನಿಯಲ್ಲಿ ರಿವರ್ಸ್‌ ಕ್ವಾರಂಟೈನ್‌!: ನಗರದಲ್ಲಿ ಕೋವಿಡ್‌ 19 ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡುವ ವೇಳೆ “ರಿವರ್ಸ್‌ ಕ್ವಾರಂಟೈನ್‌” ಪದಟಛಿತಿ ಬಳಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಕೋವಿಡ್‌ 19  ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಿವರ್ಸ್‌ ಕ್ವಾರಂಟೈನ್‌ ಪದ್ಧತಿ ಬಳಸುವಂತೆ ಸೂಚನೆ ನೀಡಲಾಗಿದೆ. ಸದ್ಯ ಸೋಂಕಿನ ಲಕ್ಷಣ ಮತ್ತು ಸೋಂಕಿತರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ.

ಸೋಂಕಿತರ  ಸಂಪರ್ಕದಲ್ಲಿದ್ದು, ಕ್ವಾರಂಟೈನ್‌ ಆಗುವ ಆರೋಗ್ಯವಂತರಿಗೂ ಸೋಂಕು ಹಬ್ಬುವ ಆತಂಕ ಎದುರಾಗಿದೆ. ಹೀಗಾಗಿ, ರಿವರ್ಸ್‌ ಕ್ವಾರಂಟೈನ್‌ಗೆ ನಿರ್ದೇಶಿಸ ಲಾಗಿದೆ. ಅದರಂತೆ ವಿದೇಶ, ರಾಜ್ಯದಿಂದ ಬರುವವರು ಮತ್ತು ಮನೆಯಿಂದ ನಿತ್ಯ  ಹೊರಗೆ ಓಡಾಡುವವರಿಂದ ಮನೆಯ ಲ್ಲಿರುವ ಮಕ್ಕಳು, ಹಿರಿಯರು, ಗರ್ಭಿಣಿ ಮತ್ತು ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಪ್ರತ್ಯೇಕವಾಗಿ ಇರುವುದು ರಿವರ್ಸ್‌ ಕ್ವಾರಂಟೈನ್‌ ಪದಟಛಿತಿಯಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next