Advertisement

ದ.ರಾ.ಬೇಂದ್ರೆ ಕಾವ್ಯದಲ್ಲಿದೆ ಹಲವು ವೈಶಿಷ್ಟ್ಯ; ಪ್ರೊ.ಎನ್‌.ಬಿ. ಝರೆ

02:24 PM Feb 04, 2023 | Team Udayavani |

ಕಾಗವಾಡ: ಬೇಂದ್ರೆಯವರ ಕಾವ್ಯ ಹಲವು ವೈಶಿಷ್ಟ್ಯ ಗಳಿಂದ ಕೂಡಿದೆ. ಅದನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿಲ್ಲ. ಬೇಂದ್ರೆಯವರ ಕಾವ್ಯದಲ್ಲಿ ತಾಯಿ, ಅಜ್ಜಿ, ಹೆಂಡತಿ, ಪರಿಸರ, ಸಾಹಿತ್ಯದ ಹಲವು ಪ್ರಕಾರಗಳು ಪ್ರಭಾವವನ್ನು ಬೀರಿವೆ ಎಂದು ಕೆ.ಎ.ಲೋಕಾಪೂರ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಎನ್‌.ಬಿ. ಝರೆ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಸ್ಥಳೀಯ ಶಿವಾನಂದ ಮಹಾ ವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಕಾಲೇಜು ಒಕ್ಕೂಟ ಹಾಗೂ ಕನ್ನಡ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಡಾ|ದ.ರಾ.ಬೇಂದ್ರೆಯವರ 127ನೆ ಜನ್ಮದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಕವಿ ದಿನ ಕಾರ್ಯಕ್ರಮದಲ್ಲಿ ಬೇಂದ್ರೆಯವರ ಕಾವ್ಯದಲ್ಲಿ ಸಖ್ಯ-ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಪ್ರೊ| ವಿ.ಎಸ್‌.ತುಗಶೆಟ್ಟಿ, ಡಾ| ದ.ರಾ.ಬೇಂದ್ರೆಯವರು
ಕನ್ನಡಕ್ಕೆ ಎರಡನೇ ಜ್ಞಾನಪೀಠವನ್ನು ತಂದು ಕೊಟ್ಟವರು. ಬೇಂದ್ರೆಯವರ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಬೇಕು, ಅರ್ಥೈಸಿಕೊಳ್ಳಬೇಕು ಎಂದು ಹೇಳುತ್ತಾ ತಮ್ಮ ಧಾರವಾಡದ ಶೆ„ಕ್ಷಣಿಕ ಅನುಭವ, ಬೇಂದ್ರೆಯವರನ್ನು ಪ್ರತ್ಯಕ್ಷ ಕಂಡು ಮಾತನಾಡಿಸಿದ್ದನ್ನು ನೆನಪಿಸಿಕೊಂಡರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಡಿ.ಡಿ.ನಗರಕರ್‌ ಮಾತನಾಡಿ, ಬೇಂದ್ರೆಯವರು ಅಂತಃಕರಣ ತುಂಬಿದ ವ್ಯಕ್ತಿತ್ವದವರಾಗಿದ್ದರು. ಅವರ ಹಲವಾರು ಕವಿತೆಗಳು ಜಾನಪದಲಯವನ್ನು ಹೊಂದಿವೆ. ಹೀಗಾಗಿ ಡಾ| ದ.ರಾ.ಬೇಂದ್ರೆಯವರು ಶಬ್ದಗಾರುಡಿಗರೆನಿಸಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಒಕ್ಕೂಟದ ಚೇರಮನ್‌ ಹಾಗೂ ಕವಿ ದಿನದ ಸಂಯೋಜಕರಾದ ಡಾ. ಎ.ಎಂ.ಜಕ್ಕಣ್ಣವರ, ಬೇಂದ್ರೆಯವರ ಕಾವ್ಯಕ್ಕೆ ಹಲವು ಆಯಾಮಗಳಿವೆ. ಒಂದಕ್ಕಿಂತ ಒಂದು ಭಿನ್ನವಾಗಿವೆ. ಇವು ಲೋಲಕದಂತಿದ್ದು ಬೆಳಕನ್ನು ಪಸರಿಸಿವೆ.

ಬೇಂದ್ರೆಯವರನ್ನು ಕೇವಲ ಪಠ್ಯದಲ್ಲಿ ಮಾತ್ರ ವಿದ್ಯಾರ್ಥಿಗಳು ಓದುವಂತಾಗಬಾರದು ಎಂಬ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಬೇಂದ್ರೆಯವರ ಕುರಿತು ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಭಾವಗೀತೆಗಳು, ಚಿತ್ರಪಟ, ರಂಗೋಲಿ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು. ಪ್ರೊ|ಜೆ.ಕೆ.ಪಾಟೀಲ ಸ್ವಾಗತಿಸಿದರು. ಪ್ರೊ| ಎಸ್‌.ಎಸ್‌.ಮೋರೆ ಪರಿಚಯಿಸಿದರು. ಪ್ರೊ| ಬಿ.ಡಿ.ಧಾಮಣ್ಣವರ ವಂದಿಸಿ, ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಮೇಘಾ ಸ್ವಾಮಿ ಪ್ರಾರ್ಥಿಸಿದರು. ಪದ್ಮಾವತಿ ನರೋಟಿ ನಿರೂಪಿಸಿದರು. ಮಹಾವಿದ್ಯಾಲಯದ ಉಪ-ಪ್ರಾಚಾರ್ಯ ಡಾ| ಎಸ್‌.ಎ.ಕರ್ಕಿ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next