ವೆಂಟಿಲೇಟರ್ ಸೌಲಭ್ಯಗಳಿಲ್ಲ. ಈಚೆಗೆ ತಾಲೂಕಿನ ಮೋಕಾ ಗ್ರಾಮದ ಬಳಿ ಸಮಯಕ್ಕೆ ಆಂಬ್ಯುಲೆನ್ಸ್ ಚಾಲಕನಿಲ್ಲದ್ದರಿಂದ ರೋಗಿಯೊಬ್ಬ ಮೃತಪಟ್ಟಿದ್ದು ಹೊರತುಪಡಿಸಿದರೆ ಉಳಿದಂತೆ ಯಾವುದೇ ಗಂಭೀರ ಸ್ವರೂಪದ ಸಮಸ್ಯೆಗಳು ಆಗಿಲ್ಲ.
Advertisement
ಆಂಬ್ಯುಲೆನ್ಸ್ ಕೊರತೆ, ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸದಿರುವುದು, ಚಾಲಕರ ಕೊರತೆ, ಕೆಟ್ಟು ನಿಂತಿರುವುದು ಹೀಗೆ ಹಲವು ಸಮಸ್ಯೆಗಳಿಂದಾಗಿ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ದೊರೆಯದ್ದರಿಂದ ಸಾಕಷ್ಟು ರೋಗಿಗಳು ತೊಂದರೆ ಅನುಭವಿಸಿದ್ದಾರೆ. ಕೆಲವೊಮ್ಮೆ ಆಂಬ್ಯುಲೆನ್ಸ್ ತಡವಾಗಿ ಆಗಮಿಸಿದ್ದರಿಂದ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನವೇ ರಸ್ತೆಯಲ್ಲೇ ಮೃತಪಟ್ಟಿರುವ ಉದಾಹರಣೆಗಳು ಇವೆ.
Related Articles
Advertisement
ಜಿಲ್ಲೆಯಲ್ಲಿ ಎಷ್ಟಿವೆ ಆ್ಯಂಬುಲೆನ್ಸ್: ಜಿಲ್ಲೆಯಲ್ಲಿ 1 ಜಿಲ್ಲಾಸ್ಪತ್ರೆ, ತಾಲೂಕಿಗೊಂದು 9 ಸರ್ಕಾರಿ ಆಸ್ಪತ್ರೆ, ಹೋಬಳಿಗೊಂದು 11 ಸಮುದಾಯ ಆರೋಗ್ಯ ಕೇಂದ್ರ ಮತ್ತು 72 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ನಗುಮಗು ಆಂಬ್ಯುಲೆನ್ಸ್ 8, ಎಚ್‌ಆರ್‌ಡಿಬಿಯಿಂದ ಬಂದಿರುವ 7 ಆಂಬ್ಯುಲೆನ್ಸ್ ಜಿಲ್ಲಾ ಖನಿಜ ನಿಧಿಯಿಂದ 8, ಸಾಮಾನ್ಯ ಆಂಬ್ಯುಲೆನ್ಸ್ 26, 108 ಆಂಬ್ಯುಲೆನ್ಸ್ 27 ಸೇರಿ ಒಟ್ಟು 76 ಆಂಬ್ಯುಲೆನ್ಸ್ ಗಳಲ್ಲಿ 66 ಕಾರ್ಯ ನಿರ್ವಹಿಸುತ್ತಿವೆ. ಉಳಿದ 10ರಲ್ಲಿ ಮೂರು ದುರಸ್ತಿಯಲ್ಲಿದ್ದು, 2 ಅಪಘಾತಕ್ಕೀಡಾಗಿವೆ.5 ನಿರುಪಯುಕ್ತ ವಾಹನಗಳಾಗಿವೆ. ಈ ಪೈಕಿ ಬಳ್ಳಾರಿ ನಗು ಮಗು ಆಂಬ್ಯುಲೆನ್ಸ್ 2, ಸಾಮಾನ್ಯ ಆಂಬ್ಯುಲೆನ್ಸ್ 1,
108ಆಂಬ್ಯುಲೆನ್ಸ್ 6 ಸೇರಿ 9 ಕಾರ್ಯ ನಿರ್ವಹಿಸುತ್ತಿವೆ. ಸಿರುಗುಪ್ಪ ನಗುಮಗು 1, ಎಚ್‌ಕೆಆರ್‌ಡಿಬಿ 2, ಸಾಮಾನ್ಯ 2, 108 ಆಂಬ್ಯುಲೆನ್ಸ್ 3 ಸೇರಿ ಒಟ್ಟು 8 ಹಾಗೂ ಹೊಸಪೇಟೆ ನಗುಮಗು 1, ಎಚ್‌ಕೆಆರ್ ಡಿಬಿ 1, ಸಾಮಾನ್ಯ 4, 108 ಆಂಬ್ಯುಲೆನ್ಸ್ 4 ಸೇರಿ ಒಟ್ಟು 10, ಸಂಡೂರು ನಗುಮಗು 1, ಸಾಮಾನ್ಯ 5, 108 ಆ್ಯಂಬುಲೆನ್ಸ್ 3 ಒಟ್ಟು 9, ಕೂಡ್ಲಿಗಿ ನಗುಮಗು 1, ಎಚ್‌ಕೆಆರ್ ಡಿಬಿ 2, ಸಾಮಾನ್ಯ 8, 108 ಆಂಬ್ಯುಲೆನ್ಸ್ 6 ಒಟ್ಟು 16, ಹಗರಿಬೊಮ್ಮನಹಳ್ಳಿ ನಗುಮಗು
1, ಎಚ್‌ಕೆಆರ್‌ಡಿಬಿ 2, ಸಾಮಾನ್ಯ 3, 108 ಆಂಬ್ಯುಲೆನ್ಸ್ 2 ಒಟ್ಟು 6, ಹೂವಿನಹಡಗಲಿ ನಗುಮಗು 1 ಸಾಮಾನ್ಯ 3, 108 ಆಂಬ್ಯುಲೆನ್ಸ್ 3 ಒಟ್ಟು 7 ಆಂಬ್ಯುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿನ ಆಂಬ್ಯುಲೆನ್ಸ್‌ಗಳ ಪೈಕಿ 108 ವಾಹನಗಳಲ್ಲಿ ಕೆಲವೊಂದರಲ್ಲಿ ವೆಂಟಿಲೇಟರ್ ಇದೆ. ಕೆಲವೊಂದರಲ್ಲಿ ಇಲ್ಲ. ವೆಂಟಿಲೇಟರ್ ಸೇರಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಂಬ್ಯುಲೆನ್ಸ್ ಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಮಾನಿಟರ್ ಸೇರಿ ಹಲವು ಸಾಧನಗಳು ಬೇಕಾಗಿವೆ. ಸದ್ಯ ಜಿಲ್ಲೆಯಲ್ಲಿ 76 ವಾಹನಗಳಿವೆ. ಇದರಲ್ಲಿ 10 ರಿಪೇರಿಯಿದ್ದು, 66 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಡಿಎಂಎಫ್ ನಿಧಿಯಿಂದ ಹೆಚ್ಚುವರಿಯಾಗಿ ಆಂಬ್ಯುಲೆನ್ಸ್ ಗಳನ್ನು ನೀಡುವಂತೆ ಕೋರಲಾಗಿದೆ. ಮುಂದಿನ ಸಭೆಯೊಳಗೆ ಈ ಕುರಿತು ನಿರ್ಣಯ ಕೈಗೊಳ್ಳಲಾಗುತ್ತದೆ.
ಶಿವರಾಜ್ ಹೆಡೆ, ಜಿಲ್ಲಾ ಆರೋಗ್ಯಾಧಿಕಾರಿ, ಬಳ್ಳಾರಿ. ವೆಂಕೋಬಿ ಸಂಗನಕಲ್ಲು