Advertisement
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೌಶಲ್ಯಭಿವೃದ್ಧಿ ಇಲಾಖೆ ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಏರ್ಪಡಿಸಿದ್ದ ಮಿನಿ ಉದ್ಯೋಗ ಮೇಳದಲ್ಲಿ ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡವರು ಹಾಗೂ ಕೊರೊನೋತ್ತರ ಉದ್ಯೋಗದ ಆಸೆ ಹೊತ್ತ 3,122ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
Related Articles
ಸಂಬಳಕ್ಕೆ ಬರುವಂತೆ ಆಹ್ವಾನಿಸಿದ್ದರಿಂದ ಅನೇಕರು ಹಿಂದೆ ಸರಿಯುತ್ತಿದ್ದ ದೃಶ್ಯ ಕಂಡುಬಂದಿತು. ಇನ್ನೂ ಕೆಲವರು ಕೌಶಲಗಳಲ್ಲಿ ಹಿನ್ನಡೆಯಾಗಿದ್ದರಿಂದ ಖಾಲಿಯಿದ್ದ 4004 ಹುದ್ದೆಗಳಿಗೆ ಕೇವಲ 50 ಮಂದಿಯಷ್ಟೇ ನೇಮಕಾತಿ ಆದೇಶ ಪಡೆದಿದ್ದುಕಂಡು ಬಂದಿತು.
Advertisement
ಬಹುತೇಕರು ಇಂಗ್ಲಿಷ್ ಭಾಷಾ ಕೊರತೆ, ಟ್ಯಾಲಿ ಮತ್ತು ಫೀಲ್ಡ್ ವರ್ಕ್ ಕೆಲಸವಾಗಿದ್ದರಿಂದಲೂ ಅನೇಕರು ನಿರಾಸಕ್ತಿ ತೋರಿದರು. ಇನ್ನೂ ಅನೇಕ ವಿದ್ಯಾರ್ಥಿಗಳು ಇಂತಹ ಮೇಳಗಳು ಮತ್ತಷ್ಟು ಹೆಚ್ಚಾಗಿ ನಡೆಯ ಬೇಕಿದೆ. ಅಲ್ಲದೆ ಬಂದಿರುವ ಕಂಪನಿಗಳಲ್ಲಿ ಸಾಕಷ್ಟು ಫಿಲ್ಡ್ ವರ್ಕ್ ಆಧಾರಿತ ಕಂಪನಿಗಳಾಗಿದ್ದು, ಆಫೀಸ್ ವರ್ಕ್ ಕಂಪನಿಗಳು ಬಂದೆ ಇಲ್ಲ ಎಂದು ದೂರಿದರು. ಒಟ್ಟಾರೆ ಕೋವಿಡ್ ನಂತರ ನಡೆದ ಉದ್ಯೋಗಮೇಳಕ್ಕೆ ನಿರೀಕ್ಷೆಗೂ ಮೀರಿದ ವಿದ್ಯಾರ್ಥಿಗಳ ಸ್ಪಂದನೆ ದೊರೆತಿತ್ತಾದರೂ ಉದ್ಯೋಗಾಕಾಂಕ್ಷಿಗಳು ಸೂಕ್ತಕೆಲಸ ಪಡೆಯುವಲ್ಲಿ ವಿಫಲರಾದರು. ಉದ್ಯೋಗ ಮೇಳಕ್ಕೆ ಶಾಸಕ ರಾಮದಾಸ್ ಚಾಲನೆ ನೀಡಿದರು. ಇದೇ ವೇಳೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. 50ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳು ಭಾಗಿ
ಉದ್ಯೋಗ ಮೇಳದಲ್ಲಿ ಎಕ್ಸೆಲ್ ಸಾಫ್ಟ್, ತಿಯರಮ್ಸ್, ದೊಡ್ಡಕೈಗಾರಿಕೆಗಳ ಪೈಕಿ ಪ್ರಮುಖವಾಗಿ ಬೆಮಲ್, ಜೆ.ಕೆ. ಟೈರ್, ರಾಣೆ ಮದ್ರಾಸ್, ದುರ್ಗಾ ಸಲ್ಯೂಷನ್, ಗ್ರಾಸ್ ರೂಟ್ಸ್, ಆದಿತ್ಯಾ ಬಿರ್ಲಾ,ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ನಂಜನಗೂಡಿನ ನೆಸ್ಲೆ, ಜುಬಿಲಿಯಂಟ್, (ಯು.ಬಿ)ಯುನೈಟೆಡ್ ಬ್ರಿವರೀಸ್, ಸೆಕ್ಯೂರಿಟಿ ಏಜನ್ಸಿಗಳು, ಗಾರ್ಮೆಂಟ್ಸ್, ಹೆಲ್ತ್ ಸೆಕ್ಟರ್‌ನಂತಹ50ಕ್ಕೂ ಹೆಚ್ಚು ಪ್ರತಿಷ್ಟಿತಕಂಪನಿಗಳು ಭಾಗವಹಿಸಿದ್ದವು.