Advertisement

ತೆಂಕನಿಡಿಯೂರು ಪೊಟ್ಟುಕೆರೆ, ಕೆಳಾರ್ಕಳ ಬೆಟ್ಟು ದುಃಸ್ಥಿತಿ

07:00 AM Apr 07, 2018 | Team Udayavani |

ಮಲ್ಪೆ: ಒಂದು ಕಾಲದಲ್ಲಿ  ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ತೆಂಕನಿಡಿಯೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಳಾರ್ಕಳಬೆಟ್ಟು ಪೊಟ್ಟುಕೆರೆ ಮತ್ತು ಕೆಳಾರ್ಕಳಬೆಟ್ಟು ಮದಗ ಇಂದು ನಿರ್ವಹಣೆ ಇಲ್ಲದೆ ಹೂಳು ತುಂಬಿಕೊಂಡು ಬರಡಾಗಿದೆ.


ಕೆಳಾರ್ಕಳಬೆಟ್ಟು  ಮದಗ

Advertisement

ಪೊಟ್ಟುಕೆರೆ: ಹೂಳೆತ್ತದೆ 30 ವರ್ಷ
ಗ್ರಾಮದ ಸುತ್ತಮುತ್ತ ಹಲವಾರು ಕೆರೆಗಳಿದ್ದರೂ ಪೊಟ್ಟುಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಭಾರಿ ಪ್ರಮಾಣದ ಹೂಳಿ ನಿಂದಾಗಿ ನೀರಿನ ಒರತೆ  ಇಲ್ಲದೆ ಸುಮಾರು 30 ವರ್ಷಗಳಿಂದ ಹೆಸರಿಗೆ ತಕ್ಕಂತೆ ಅಕ್ಷರಶಃ ಪೊಟ್ಟುಕೆರೆಯಾಗಿಯೇ ಉಳಿದಿದೆ. ನಗರಸಭಾ ವ್ಯಾಪ್ತಿಯ ಗೋಪಾಲಪುರ ವಾರ್ಡ್‌ ಮತ್ತು ತೆಂಕನಿಡಿಯೂರು ಕೆಳಾರ್ಕಳಬೆಟ್ಟು ಗ್ರಾಮವನ್ನು ಸಂಧಿಸುವಲ್ಲಿ ಇರುವ ಈ ಕೆರೆ ಹಿಂದೆ 8 ಎಕ್ರೆಯಷ್ಟು ವಿಸೀ¤ರ್ಣ  ಹೊಂದಿತ್ತು. ಇದೀಗ ಒತ್ತುವರಿಯಾಗಿ 3 ಎಕ್ರೆ ಮಾತ್ರ ಉಳಿದಿದೆ. ಹಿಂದೆ ಮೇ ಕೊನೆಯವರೆಗೂ ಈ ಕೆರೆಯಲ್ಲಿ ನೀರು ತುಂಬಿಕೊಂಡಿದ್ದು 200 ಎಕ್ರೆ ಕೃಷಿ ಭೂಮಿಗೆ ಸುತ್ತಮುತ್ತಲಿನ ರೈತರು ಇದೇ ಕೆರೆಯ ನೀರನ್ನು ಉಪಯೋಗಿಸಿ ಹಿಂಗಾರು ಬೆಳೆ ಬೆಳೆಯುತ್ತಿದ್ದರು. ಈಗ ನೀರಿನ ಕೊರತೆಯಿಂದಾಗಿ ಹಲವಾರು ಎಕ್ರೆ ಕೃಷಿ ಭೂಮಿ ಪಾಳುಬಿದ್ದಿದೆ. ಮೂರು ವರ್ಷದ ಹಿಂದೆ ಪಂ. ವತಿಯಿಂದ ಬಾವಿ ನಿರ್ಮಿಸಲಾಗಿದ್ದು ಈ ಬಾವಿಯ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದೆ.

ಡಂಪಿಂಗ್‌ ಯಾರ್ಡ್‌ ಆಗುತ್ತಿದೆಯೇ?
ಕೆಳಾರ್ಕಳಬೆಟ್ಟು ಸರಕಾರಿ ಶಾಲೆಯ ಬಳಿ ಇರುವ ಮದಗ ಈಗ ಡಂಪಿಂಗ್‌ ಯಾರ್ಡ್‌ ಆಗಿ ಪರಿವರ್ತನೆಗೊಳ್ಳುತ್ತಿದೆ. ಒಂದು ಮುಕ್ಕಾಲು ಎಕರೆ ವಿಸೀ¤ರ್ಣವನ್ನು ಹೊಂದಿರುವ  ಈ ಮದಗದಿಂದ ಸುತ್ತಮುತ್ತಲ 10 ಎಕ್ರೆ ಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿತ್ತು. ಅಲ್ಲದೆ ಮೇ ಕೊನೆಯವರೆಗೂ ನೂರಾರು ಮನೆಯ ಬಾವಿಯಲ್ಲೂ ಯಥೇತ್ಛ ನೀರು ಸಿಗುತ್ತಿತ್ತು. ಮದಗದಲ್ಲಿ ಹೂಳು ತುಂಬಿದ್ದರಿಂದ ನೀರು ಸಂಗ್ರಹದ ಸಾಮರ್ಥ್ಯವೂ  ಕಡಿಮೆಯಾಗಿ ಇಂಗುವ ಪ್ರಮಾಣವೂ ಕೀÒಣಿಸಿದೆ. ಹಾಗಾಗಿ ತೋಡಿನ ಮೂಲಕ ಹರಿದು ಸಮುದ್ರ ಸೇರುತ್ತದೆ. 20 ಅಡಿಗಳಷ್ಟು ಹೂಳನ್ನು ತೆಗೆದರೆ ವರ್ಷ ಪೂರ್ತಿ ನೀರು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊಳವೆ ಬಾವಿಗಳಿಂದ ನೀರಿನ ಒರತೆ ಕಡಿಮೆ
ಕೆಳಾರ್ಕಳಬೆಟ್ಟು ಮದಗದಲ್ಲಿ  ಎರಡು ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು ಇಲ್ಲಿನ ನೀರನ್ನು ಸಮೀಪದ ಕಲ್ಯಾಣಪುರ ಪಂಚಾಯತ್‌ಗೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ನೀರಿನ ಒರತೆ ಕಡಿಮೆ ಯಾಗಿದೆ. ಮದಗ ಹೂಳೆತ್ತಿದರೆ ಗ್ರಾಮಕ್ಕೆ ಬೇಕಾಗುವಷ್ಟು ನೀರು ದೊರೆಯುತ್ತದೆ.
ಹರೀಶ್‌ ಸಾಮಗ, ಅಧ್ಯಕ್ಷರು, ಕೆಳಾರ್ಕಳಬೆಟ್ಟು ನಾಗರಿಕ ಸಮಿತಿ

ಕೊಳವೆ ಬಾವಿಗಳಿಂದ ನೀರಿನ ಒರತೆ ಕಡಿಮೆ
ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಎದುರಾಗಿದ್ದರೂ ಇಲ್ಲಿರುವ ಪೊಟ್ಟುಕೆರೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಆಡಳಿತ ಮುಂದಾಗಿಲ್ಲ. ಪ್ರತೀ ಸಲ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಇಲಾಖೆಗೆ ಮನವಿ ಮಾಡಲಾಗುತ್ತಿದೆಯಾದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೆರೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ  ಮಾಡಬೇಕು. ಈ ಹಿನ್ನೆ°ಲೆಯಲ್ಲಿ ಪುರಾತನ ಕೆರೆಯನ್ನು ಉಳಿಸಬೇಕು.
ಕೃಷ್ಣ ಶೆಟ್ಟಿ, ತೆಂಕನಿಡಿಯೂರು ಗ್ರಾ. ಪಂ. ಸದಸ್ಯರು

Advertisement

ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next