Advertisement

Parliament ‘ಅಸ್ಪೃಶ್ಯ’ ಎಂಬ ಕಾರಣಕ್ಕೆ ಕೋವಿಂದ್ ಅವರಿಗೆ ಆಹ್ವಾನ ನೀಡಿರಲಿಲ್ಲ: ಖರ್ಗೆ

08:33 PM Sep 23, 2023 | Team Udayavani |

ಹೊಸದಿಲ್ಲಿ: ನೂತನ ಸಂಸತ್ ಭವನದ ಶಂಕುಸ್ಥಾಪನೆಗೆ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು “ಅಸ್ಪೃಶ್ಯ” ಎಂಬ ಕಾರಣಕ್ಕೆ ಆಹ್ವಾನಿಸಲಾಗಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.

Advertisement

ಜೈಪುರದಲ್ಲಿ ಕಾಂಗ್ರೆಸ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, “ಅಸ್ಪೃಶ್ಯರು ಅಡಿಪಾಯ ಹಾಕಿದರೆ, ಸ್ವಾಭಾವಿಕವಾಗಿ ಅದನ್ನು ಗಂಗಾಜಲದಿಂದ ತೊಳೆಯಬೇಕಾಗಿತ್ತು” ಎಂದು ಅವರು ಮಾಜಿ ರಾಷ್ಟ್ರಪತಿಗಳ ಜಾತಿಯನ್ನು ಉಲ್ಲೇಖಿಸಿ ಹೇಳಿದರು.

ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗಿಲ್ಲ ಮತ್ತು ನಟರು ಸೇರಿದಂತೆ ಅನೇಕರನ್ನು ಆಹ್ವಾನಿಸಲಾಗಿತ್ತು. ಇದು ರಾಷ್ಟ್ರಪತಿಗೆ ಮಾಡಿದ ಅವಮಾನವಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ತರುವುದರ ಹಿಂದೆ ನರೇಂದ್ರ ಮೋದಿ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿ, ಮಹಿಳೆಯರಿಗೆ ಮೀಸಲಾತಿ ನೀಡಲು ಬಿಜೆಪಿ ಬಯಸುವುದಿಲ್ಲ ಎಂದರು.

ಹಲವಾರು ವಿರೋಧ ಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿರುವುದರಿಂದ ಬಿಜೆಪಿಯು ಚುನಾವಣೆಗೆ ಮುಂಚೆಯೇ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಯೋಚಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next