Advertisement

ಅಂದು ತಾಯಿ, ಇಂದು ಮಗಳ ಉಡುಪಿ ಭೇಟಿ

08:04 AM Nov 21, 2017 | Team Udayavani |

ಉಡುಪಿ: ಗ್ವಾಲಿಯರ್‌ ರಾಜಮಾತೆ ವಿಜಯ ರಾಜೇ ಸಿಂಧಿಯಾ ಹಿಂದಿನಿಂದಲೂ ಪೇಜಾವರ ಶ್ರೀಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರು 1969ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ ಪ್ರಥಮ ಪ್ರಾಂತ ಸಮ್ಮೇಳನಕ್ಕೆ ಆಗಮಿಸಿದ್ದರೆ ಈಗ 15ನೇ ಧರ್ಮಸಂಸದ್‌ ಅಧಿವೇಶನ ನಡೆಯಲು ಇನ್ನು ಕೇವಲ ನಾಲ್ಕೇ ದಿನ ಇರುವಾಗ ಅವರ ಪುತ್ರಿ, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಆಕಸ್ಮಿಕ ವಾಗಿ ಪ್ರಥಮ ಬಾರಿ ಆಗಮಿಸಿ ದೇವರ ದರ್ಶನ ಪಡೆದರು.

Advertisement

ಸೋಮವಾರ ವಸುಂಧರಾ ರಾಜೇ ಮತ್ತು ಪುತ್ರ ದುಷ್ಯಂತ್‌ ಸಿಂಗ್‌ ಅವರು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದ ಬಳಿಕ ಅವರಿಗೆ ಶ್ರೀಕೃಷ್ಣ ಮಠದ ಮುಂಭಾಗ ಚಂದ್ರಶಾಲೆಯಲ್ಲಿ ಸ್ಮರಣಿಕೆ, ಪ್ರಸಾದ ನೀಡಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹರಸಿದರು. ವಿಜಯರಾಜೇ ಸಿಂಧಿಯಾ ಅವರೊಂದಿಗೆ ಇದ್ದ ಸಂಬಂಧವನ್ನು ಶ್ರೀಗಳು ನೆನಪಿಸಿಕೊಂಡರು.

ಅನಿರೀಕ್ಷಿತ ಭೇಟಿ: ಉಡುಪಿಗೆ ನಾನಿಂದು ದಿಢೀರ್‌ ಭೇಟಿ ನೀಡಿದ್ದೇನೆ. ಪೂರ್ವನಿಗದಿ ಆಗಿರಲಿಲ್ಲ. ಇದು ನನ್ನ ಪ್ರಥಮ ಭೇಟಿ. ಇದನ್ನು ನಾನು ಮರೆಯುವಂತಿಲ್ಲ. ನಾಲ್ಕು ತಲೆಮಾರಿನಿಂದ ಪೇಜಾವರ ಶ್ರೀಗಳವರ ಸಂಪರ್ಕವಿದೆ. ಈಗ ಐದನೇ ಪರ್ಯಾಯದ ಕೊನೆಯ ಹಂತದಲ್ಲಿರುವಾಗ ನಾನು ಮತ್ತು ಮಗ ಶ್ರೀಗಳನ್ನು  ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇವೆ. ಕೊಲ್ಲೂರಿಗೆ ಹಿಂದೆ ಬರಬೇಕೆಂದು ಪ್ರಯತ್ನಿಸಿದ್ದೆ. ಆಗಿರಲಿಲ್ಲ. ಈಗ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡಿದಂತಾಗಿದೆ ಎಂದು ವಸುಂಧರಾ ರಾಜೇ ಸುದ್ದಿಗಾರರಿಗೆ ತಿಳಿಸಿದರು.

“ನೀವು ಬರುತ್ತೀರಿ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಬರುತ್ತಿಲ್ಲ’ ಎಂದು ಪತ್ರಕರ್ತರು ಹೇಳಿದಾಗ “ಅದರ ಬಗ್ಗೆ ಏನನ್ನೂ ಹೇಳಬಯಸುವುದಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next