Advertisement
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕಿ ರೂಪಾ ಜೆ.ಮಾಡ, ಭೂಮಿಯಲ್ಲಿ ಭತ್ತದ ಸಾಲು ನಾಟಿ ಪ್ರಾತ್ಯಕ್ಷಿಕೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಧನಂಜಯ ವಿಜ್ಞಾನಿ ಡಾ| ಜಯಪ್ರಕಾಶ್ , ತೆಕ್ಕಟ್ಟೆ ಗ್ರಾಮ ಪಂಚಾಯತ್ ಪಿಡಿಒ ಸುನಿಲ್, ಕೃಷಿ ಜಿಲ್ಲಾ ವ್ಯವಸ್ಥಾಪಕರು ಡಾ|ಸೌಮ್ಯ , ಕೃಷಿ ಯುವ ವೃತ್ತಿಪರರಾದ ರಂಜಿತ, ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ರಮಿತಾ, ಕೃಷಿ ಸಖೀ ಸಂಗೀತ ದೇವಾಡಿಗ , ಹಾಗೂ ಕೃಷಿ ಸಖಿಯರು ಉಪಸ್ಥಿತರಿದ್ದರು.
Related Articles
Advertisement
ಸುಮಾರು 30 ಸೆಂಟ್ಸ್ ವಿಸ್ತೀರ್ಣದ ಕೃಷಿ ಭೂಮಿಯಲ್ಲಿ ಗ್ರಾ.ಪಂ. ಅಧ್ಯಕ್ಷರು, ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಹಾಗೂ ಮಹಿಳೆಯರು ಸೇರಿ ಒಟ್ಟು 40ಕ್ಕೂ ಅಧಿಕ ಮಂದಿ ತಾವು ಉಟ್ಟ ಹೊಸ ಬಟ್ಟೆಯಲ್ಲಿಯೇ ಹದ ಮಾಡಿದ ಕೃಷಿಭೂಮಿಗೆ ಇಳಿದು ಸಾಂಪ್ರದಾಯಿಕ ಕೃಷಿ ಸಾಲು ನಾಟಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಹಡಿಲು ಭೂಮಿಯಲ್ಲಿ ಭತ್ತದ ಸಾಲು ನಾಟಿ ಪ್ರಾತ್ಯಕ್ಷಿಕೆ ಮಾಡಿ ಎಲ್ಲರ ಗಮನ ಸೆಳೆದರು.