Advertisement
ಇದೇ ವೇಳೆ ಆರೋಪಿಗಳ ಬಂಧನದಿಂದ ಆರ್.ಟಿ.ನಗರ, ಅನ್ನಪೂರ್ಣೇಶ್ವರಿ ನಗರ, ಡಿ.ಜೆ.ಹಳ್ಳಿ, ಅಶೋಕ ನಗರ, ವಿವೇಕ ನಗರ, ವಿಧಾನ ಸೌಧ, ಕೆ.ಆರ್.ಪುರ.ಬೆಳ್ಳಂದೂರು, ಕೊತ್ತನೂರು, ಮಡಿವಾಳ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮನೆಕಳವು, ಕನ್ನಗಳವು ಮತ್ತು ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
Related Articles
Advertisement
ಕಿಟಕಿ ಪಕ್ಕ ಬೀಗದ ಕೀ – ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಪ್ರತಿ ರಸ್ತೆಗಳನ್ನು ಸುತ್ತುತ್ತಿದ್ದ ದಂಪತಿ, ಈ ವೇಳೆ ಬೀಗ ಹಾಕಿ ಕಿಟಕಿ ಪಕ್ಕ ಅಥವಾ ಇತರೆಡೆ ಕೀ ಇಟ್ಟು ಹೋಗುವ ಮನೆಗಳನ್ನು ಗುರುತಿಸುತ್ತಿದ್ದರು. ನಂತರ ಒಂದೆರಡು ದಿನಗಳ ಬಳಿಕ ಆ ಮನೆ ಬಳಿ ದಂಪತಿ ಹೋಗುತ್ತಿದ್ದರು. ಬಾಬು ಮನೆ ಹೊರ ಭಾಗದಲ್ಲಿ ನಿಂತು ಸಾರ್ವಜನಿಕರ ಮೇಲೆ ನಿಗಾ ವಹಿಸಿದ್ದ. ಜಯಂತಿ ಮನೆಯೊಳಗೆ ಹೋಗಿ ಕಳ್ಳತನ ಮಾಡುತ್ತಿದ್ದಳು. ಬಳಿಕ ಇಬ್ಬರು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.
ಸುಳಿವು ಕೊಟ್ಟ ಬೆರಳಚ್ಚು- ಆರ್.ಟಿ.ನಗರದಲ್ಲೂ ಅದೇ ತಂತ್ರದಿಂದ ಕಳ್ಳತನ ಮಾಡಿದ್ದರು. ಪೊಲೀಸರು ಸ್ಥಳ ಮಹಜರು ಮಾಡುವಾಗ ಆರೋಪಿಗಳ ಬೆರಳಚ್ಚು ಸಿಕ್ಕಿತ್ತು. ನಂತರ ನಗರದ ವಿವಿಧ ಠಾಣೆಗಳಿಗೆ ಕಳುಹಿಸಿ ಪರಿಶೀಲಿಸಿದಾಗ 2019ರಲ್ಲಿ ಮÇÉೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಸಂಗ್ರಹಿಸಿದ್ದ ಬೆರಳಚ್ಚಿಗೆ ಹೊಲಿಕೆ ಆಗುತ್ತಿತ್ತು. ಬಳಿಕ ದಂಪತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಸಂಗ್ರಹಿಸಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ರೌಡಿಶೀಟರ್ ಸಹಚರರ ಬಂಧನ ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದರೋಡೆಗೆ ಸಂಚು ರೂಪಿಸಿದ ಆರೋಪದ ಮೇಲೆ ರೌಡಿಶೀಟರ್ ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗನ ಆರು ಮಂದಿ ಸಹಚರರು ಸೇರಿ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್‌ಗಾರ್ಡನ್ ಠಾಣಾ ವ್ಯಾಪ್ತಿಯ ಬಿಟಿಎಸ್ ಸರ್ವೀಸ್ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆಗೆ ಮುಂದಾಗಿದ್ದರು.
ಈ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ. ನಾಗನ ಆರು ಮಂದಿ ಸಹಚರರನ್ನು ಬಂಧಿಸಲಾಗಿದೆ. ಅವರಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ವಿಲ್ಸನ್‌ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಮತ್ತೂಂದು ಪ್ರಕರಣದಲ್ಲಿ ಆಡುಗೋಡಿ ಠಾಣಾ ವ್ಯಾಪ್ತಿಯ ಬಿ.ಜಿ.ರಸ್ತೆ ಅರಿಹಂತ್ ಸ್ಟೋನ್ಸ್ ಮುಂಭಾಗ ಒಂಟಿಯಾಗಿ ಓಡಾಡುವ ಸಾರ್ವಜನಿಕರ ದರೋಡೆಗೆ ಮುಂದಾಗಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ. ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಎಸಿಬಿ ಬಲೆಗೆ ಎಫ್ಡಿಎ ಬೆಂಗಳೂರು: ಬಿಬಿಎಂಪಿಯ ವಸತಿ ಗೃಹಗಳಿಗೆ ಸರಬರಾಜು ಮಾಡಿರುವ ಪಿಠೊಪಕರಣಗಳ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು 15,000 ಲಂಚ ಪಡೆಯುತ್ತಿದ್ದ ಪಾಲಿಕೆಯ ಪ್ರಥಮ ದರ್ಜೆ ಸಹಾಯಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾನೆ. ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಉಪ ಆಯುಕ್ತರ ಆಡಳಿತ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಚ್. ರಾಜು ಎಂಬಾತನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಶೇಷಾದ್ರಿಪುರಂ ನಿವಾಸಿಯೊಬ್ಬರೂ ಮಹಾನಗರ ಪಾಲಿಕೆಯ ಕಚೇರಿಗಳಿಗೆ ಮತ್ತು ವಸತಿ ಗೃಹಗಳಿಗೆ ಪೀಠೊಪಕರಣಗಳನ್ನು ಸರಬರಾಜು ಗುತ್ತಿಗೆ ಪಡೆದಿದ್ದರು. 2021ರ ಮೇ ಸಾಲಿನಲ್ಲಿ ತಾವರೆಕೆರೆ ಮುಖ್ಯರಸ್ತೆಯ ಪಾಲಿಕೆ ವಸತಿ ಗೃಹಗಳಿಗೆ ಸರಬರಾಜು ಮಾಡಿರುವ ಪೀಠೊಪಕರಣದ ಬಾಕಿ ಉಳಿದಿರುವ ಹಣ ಬಿಡುಗಡೆಗೆ ಕೋರಿದ್ದರು.
ಈ ಬಿಲ್ ಅನುಮೋದಿಸಲು ಪಾಲಿಕೆ ಕೇಂದ್ರ ಕಚೇರಿಯ ಉಪ ಆಯುಕ್ತರ ಆಡಳಿತ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಚ್. ರಾಜು 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗುತ್ತಿಗೆದಾರ ಎಸಿಬಿ ಅಧಿಕಾರಿಗಳಿಗೆ ದೂರು ದಾಖಲಿಸಿದ್ದರು. ಲಂಚವನ್ನು ರಾಜು ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರಾಜುವನ್ನು ಬಂಧಿಸಿದ್ದಾರೆ.