Advertisement
ಆಂಧ್ರದ ಕಡಪ ಜಿಲ್ಲೆಯ ಕೋತಮದ್ರವರಂ ಪ್ರದೇಶದ ಆರು ಆರೋಪಿಗಳನ್ನು ಬಂಧಿಸಿರುವ ಸೈಬರಬಾದ್ ಪೊಲೀಸರ ವಿಶೇಷ ತಂಡ, ಆರೋಪಿಗಳು ಕರ್ನಾಟಕ, ಆಂಧ್ರ, ತೆಲಂಗಾಣದ ವಿವಿಧ ಭಾಗಗಳಲ್ಲಿ ನಡೆಸಿದ್ದ ದೇವಾಲಯ ಹುಂಡಿ ಕಳವು ಪ್ರಕರಣಗನ್ನು ಪತ್ತೆಹಚ್ಚಿದೆ. ಈ ಪೈಕಿ ಕೋಲಾರ ಜಿಲ್ಲೆಯ ಆರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದ್ದ ಏಳು ಪ್ರಕರಣಗಳು ಸೇರಿವೆ.
Related Articles
Advertisement
ನಾಣ್ಯ ನೀಡುತ್ತಿತ್ತು ಸುಳಿವು: ಇಡೀ ತಂಡ ಕುಟುಂಬಗಳ ಜತೆ ದೇವಾಲಯ ಇರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಡೇರೆ ಹಾಕಿಕೊಂಡು ವಾಸಿಸಲು ಆರಂಭಿಸುತ್ತದೆ. ಹಲವು ದಿನಗಳ ಕಾಲ ಊರಿನಲ್ಲಿ ತಿರುಗಾಡಿಕೊಂಡು ಭಕ್ತರ ಸೋಗಿನಲ್ಲಿ ದೇವಾಲಯಗಳಿಗೆ ಪ್ರವೇಶಿಸುತ್ತಿದ್ದರು. ಹುಂಡಿಗೆ ಹಣ ಹಾಕುವವರಂತೆ ನಾಣ್ಯವೊಂದನ್ನು ಹುಂಡಿಗೆ ಹಾಕುತ್ತಿದ್ದರು.
ಹುಂಡಿಯೊಳಗಡೆ ನಾಣ್ಯಬಿದ್ದ ಬಳಿಕ ಸದ್ದಾಗದಿದ್ದರೆ ಹುಂಡಿ ತುಂಬಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕ ಅದೇ ದಿನ ರಾತ್ರಿ ದೇವಾಲಯಕ್ಕೆ ನುಗ್ಗಿ ಹುಂಡಿ ಹಾಗೂ ದೇವರ ಮೂರ್ತಿಗಳಿಗೆ ಹಾಕಲಾಗುತ್ತಿದ್ದ ಆಭರಣ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದರು ಎಂದು ಸೈಬರಬಾದ್ ಪೊಲೀಸರು ಮಾಹಿತಿ ನೀಡಿದರು.
ತೆಲಂಗಾಣದಲ್ಲಿ ನಡೆಯುತ್ತಿದ್ದ ದೇವಾಲಯಗಳ ಸರಣಿ ಕಳ್ಳತನ ಪ್ರಕರಣಗಳಿಂದಾಗಿ ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡಕ್ಕೆ ದೇವಾಲಯೊಂದರಲ್ಲಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಗಿತ್ತು. ಈ ಸುಳಿವು ಆಧರಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 50 ಪ್ರಕರಣಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
“ಅಂತಾರಾಜ್ಯ ಕಳ್ಳರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆಸಿದ 11 ದೇವಾಲಯ ಹುಂಡಿ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿ, ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಬಂಧನ ಹಾಗೂ ಪತ್ತೆಯಾದ ಕೇಸ್‌ಗಳ ಬಗ್ಗೆ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ’-ವಿ.ಸಿ.ಸಜ್ಜನರ್, ಸೈಬರಬಾದ್ ಪೊಲೀಸ್ ಆಯುಕ್ತ