Advertisement

Theft 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು; ಸೊತ್ತು ಸಹಿತ ಬಂಧನ

05:13 PM Sep 05, 2023 | Team Udayavani |

ಬಜಪೆ: ಪೊರ್ಕೋಡಿ ದೇವಸ್ಥಾನದ ಕಡೆಗೆ ಹೋಗುವ ರಸ್ತೆಯಲ್ಲಿ ಕರೋಡಿ ಎಂಬಲ್ಲಿರುವ ಮನೆಯ ಬೆಡ್‌ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಮಿನಿಲಾಕರ್‌ ನ್ನು ಮುರಿದು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಸೆ.1ರಂದು ಪ್ರಕರಣ ಕೇಸು ದಾಖಲಾಗಿರುತ್ತದೆ.

Advertisement

ಈ ಪ್ರಕರಣದಲ್ಲಿ ಗುಮಾನಿತ ವ್ಯಕ್ತಿಯಾದ ಬಜಪೆಯ ತಾರೀಕಂಬ್ಳ ನಿವಾಸಿ ವಿನ್ಸೆಂಟ್‌ ಡಿ’ಸೋಜಾ (34) ಎಂಬವರನ್ನು ಬಜಪೆ ಪೊಲೀಸ್‌ ನಿರೀಕ್ಷಕಪ್ರಕಾಶ್‌ ರವರ ತಂಡ ಸೆ.4ರಂದು ಮಧ್ಯಾಹ್ನ ಬಜಪೆಯ ಕಿನ್ನಿಪದವು ಚೆಕ್‌ ಪೋಸ್ಟ್‌ ಬಳಿ ವಶಕ್ಕೆ ಪಡೆದುಕೊಂಡು ,ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 80 ಗ್ರಾಂ ತೂಕದ ಚಿನ್ನಾಭರಣಗಳನ್ನು (ಚಿನ್ನದ ಕರಿಮಣಿ ಸರ, ಬಿಳಿ ಬಣ್ಣದ ಹರಳುಗಳಿಂದ ಕೂಡಿರುವ ಚಿನ್ನದ ನೆಕ್ಲೆಸ್‌, ಚಿನ್ನದ ಬಳೆಗಳು-2, ಚಿನ್ನದ ಉಂಗುರಗಳು-3, ಒಂದು ಜೊತೆ ಚಿನ್ನದ ಕಿವಿ ಒಲೆ ಮತ್ತು ಒಂದು ಜತೆ ಚಿನ್ನದ ಜುಮುಕಿ) ವಶಪಡಿಸಿಕೊಂಡಿರುತ್ತಾರೆ.

ಮಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ದೃಢನಿರ್ಧಾರ ಕೈಗೊಂಡಿರುವ ಪೊಲೀಸ್‌ ಆಯುಕ್ತ ಕುಲದೀಪ ಕುಮಾರ್‌ ಜೈನ್‌ ರವರ ಮಾರ್ಗದರ್ಶನದಂತೆ, ಡಿ.ಸಿ.ಪಿ ಯವರಾದ ಅಂಶು ಕುಮಾರ್‌ ಮತ್ತು ದಿನೇಶ್‌ ಕುಮಾರ್‌ ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್‌ ಕುಮಾರ್‌ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್‌ ನಿರೀಕ್ಷಕ ಪ್ರಕಾಶ ರವರು ,ಎಸ್‌ಐಯವರಾದ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ಕುಮಾರೇಶನ್‌, ಲತಾ, ಎಎಸ್‌ಐ ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್‌, ಸುಜನ್‌, ರೋಹಿತ, ದುರ್ಗಾ ಪ್ರಸಾದ ಶೆಟ್ಟಿ, ಸಂತೋಷ, ಬಸವರಾಜ್‌ ಪಾಟೀಲ್‌, ಕೆಂಚನ ಗೌಡ ಮತ್ತು ಇತರ ಸಿಬಂದಿ ವರ್ಗಪತ್ತೆ ಕಾರ್ಯದಲ್ಲಿ ಭಾಗಿಯಾಗಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next