Advertisement

ಆಲಮೇಲ: ಎರಡು ದೇವಸ್ಥಾನ ಮತ್ತು ಏಳು ಮನೆಗಳಲ್ಲಿ ಕಳ್ಳತನ, ಜನರಲ್ಲಿ ಹೆಚ್ಚಿದ ಆತಂಕ

11:33 AM Dec 18, 2020 | keerthan |

ವಿಜಯಪುರ: ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಗುರುವಾರ ರಾತ್ರಿ ಎರಡು ದೇವಸ್ಥಾನಗಳು ಹಾಗೂ 7 ಮನೆಗಳ ಸರಣಿ ಕಳ್ಳತನ ಮಾಡಿ ಆರೋಪಿಗಳು ಪರಾರಿಯಾದ ಘಟನೆ ಜರುಗಿದೆ.

Advertisement

80 ಗ್ರಾಮ ಬಂಗಾರ, ದೇವರ ಮುಖವಾಡಗಳು ಸೇರಿ 4 ಕೆಜಿ ಬೆಳ್ಳಿ ಆಭರಣ, ದುಡ್ಡು, ಬಟ್ಟೆ, ಒಂದು ಬೈಕ್ ಕಳ್ಳತನವಾಗಿದೆ. ಶುಕ್ರವಾರ ಬೆಳಗ್ಗೆ ಸರಣಿ ಕಳ್ಳತನ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಜನರು ಭಯಭೀತರಾಗಿದ್ದಾರೆ.

ಕರಿದೇವರ ದೇವಸ್ಥಾನದಲ್ಲಿ 4 ಕೆಜಿ ಬೆಳ್ಳಿ ದೇವರ ಮುಖಗಳು, 30 ಗ್ರಾಮ ಬಂಗಾರ ಕಳ್ಳತನವಾಗಿದೆ. ವೀರನಾಗಮ್ಮ ದೆವರ ಗುಡಿಯಲ್ಲಿ 40 ಗ್ರಾಮ ಬಂಗಾರ, ಬೆಳ್ಳಿ ಮುಖವಾಡಗಳನ್ನು ಕಳ್ಳತನ ಮಾಡಲಾಗಿದೆ.

ಖಾಸೀಮ ಸಾಲೋಟಗಿ ಅವರ ಮನೆಯಲ್ಲಿ 9 ಗ್ರಾಂ ಬಂಗಾರ, 35 ಸಾವಿರ ರೂ. ನಗದು, ಬಟ್ಟೆ ಹಾಗೂ ಬೈಕ್ ಕಳ್ಳತನ ಮಾಡಲಾಗಿದೆ.

ಲಲಿತಾ ನಾರಾಯಣಕರ, ಶಕೀಲ ಮಕಾಂದಾರ, ಪೀರಪ್ಪ ನಾರಾಯಾಣಕರ, ರಾವುತಪ್ಪ ಕಟ್ಟಿಮನಿ, ಗಂಗಾಬಾಯಿ ಗೂಗದಡ್ಡಿ ಎಂಬವರ ಮನೆಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ.

Advertisement

ಇದನ್ನೂ ಓದಿ:ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ, ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ವಿಷಯ ತಿಳಿದು ಸ್ಥಳಕ್ಕೆ ಅಗಮಿಸಿದ ಪಿಎಸ್ಐ ನಿಂಗಪ್ಪ ಪೂಜಾರಿ, ಪರಿಶೀಲನೆ ನಡೆಸಿದ್ದಾರೆ. ಆಲಮೇಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಮಧ್ಯೆ ಪಟ್ಟಣದಲ್ಲಿ ಸರಣಿ ಕಳ್ಳತನ ಘಟನೆಯಿಂದ ಆಕ್ರೋಶ ಹೊರ ಹಾಕಿರುವ ಸಾರ್ವಜನಿಕರು, ಇನ್ನಾದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ರಾತ್ರಿ ಗಸ್ತು ಹೆಚ್ಚಿಸಿ, ಕಳ್ಳರನ್ನು ಬಂಧಿಸಿ, ಕಳ್ಳತನ ಆಗಿರುವ ಬೆಳ್ಳಿ, ಚಿನ್ನಾಭರಣ ಕೊಡಿಸುವಂತೆ ಆಗ್ರಹಿಸಿದ್ದಾರೆ.

ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ ಪಟ್ಟಣದಲ್ಲಿ ಹಲವು ಬಾರಿ ಕಳ್ಳತನ ನಡೆದರೂ ಪೊಲೀಸರು ಈವರೆಗೆ ಯಾವೊಬ್ಬ ಕಳ್ಳನನ್ನೂ ಬಂಧಿಸಿಲ್ಲ. ಕಳ್ಳತನ ಆಗಿರುವ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ಹೀಗಾಗಿ ಪಟ್ಟಣದ ಜನರಿಗೆ ಸೂಕ್ತ ಭದ್ರತೆ, ರಕ್ಷಣೆ ಇಲ್ಲದಂತಾಗಿದೆ ಎಂದು ಹರಿಹಾಯ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next