Advertisement

Theft: ಪೋಲಿಸ್ ಇಲಾಖೆ ಬೇಜವಬ್ದಾರಿಯಿಂದ‌ ದೇವಸ್ಥಾನ ಹುಂಡಿ ಹಣ ಕಳವು: ಆರೋಪ

11:59 AM Aug 20, 2023 | Team Udayavani |

ಕನಕಗಿರಿ: ಪಟ್ಟಣದ ಪೋಲಿಸ್ ಇಲಾಖೆಯ ಬೇಜಾವಬ್ದಾರಿಯಿಂದ ದೇವಸ್ಥಾನದ ಮುಂಬಾಗದಲ್ಲಿರಿಸಿದ ಹುಂಡಿ ಹಣವನ್ನು ಕಿಡಿಗೇಡಿಗಳು ದೋಚಿದ್ದಾರೆ ಎಂದು ಪೊನ್ನಬಲ ಅಯ್ಯಪ್ಪಸ್ವಾಮಿ ಸೇವಾಟ್ರಸ್ಟ್ ಪದಾಧಿಕಾರಿಗಳು ಆರೋಪಿಸಿದರು.

Advertisement

ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಮುದಗಲ್ ಗಂಗಾವತಿ ಮುಖ್ಯ ರಸ್ತೆಯಲ್ಲಿದ್ದು ದಿನನಿತ್ಯ ಎಲ್ಲಾ ಸಮಾಜದ ಜನರು ದೇವರ ದರ್ಶನಕ್ಕೆ ಬಂದು ಹೋಗುತ್ತಾರೆ.

ಪಟ್ಟಣ ಸೇರಿದಂತೆ ವಿವಿಧೆಡೆ ಕಳ್ಳತನ ಹೆಚ್ಚಾಗಿದ್ದು, ಪೋಲಿಸ್ ಇಲಾಖೆ ಸುಖಾ ಸುಮ್ಮನೆ ಕಾರ್ಯನಿರ್ವಹಿಸುತ್ತಿದೆ. ದೇವಸ್ಥಾನದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ರೂಪಾಯಿಗಳನ್ನು ಕಳ್ಳರು ದೋಚಿದ್ದಾರೆ.

ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೂಡಲೇ ತಪ್ಪಿಸ್ಥರನ್ನು ಪತ್ತೆ ಹಚ್ಚುವಂತೆ ಸೇವಾ ಟ್ರಸ್ಟ್ ಪದಾಧಿಕಾರಿಗಳು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next