ಮಂಡ್ಯ: ಪಟ್ಟಣದ ಶಾಂತಿ ಶಿಕ್ಷಣ ಸಂಸ್ಥೆ ಮತ್ತು ಹಲವು ಅಂಗಡಿಗಳ ಬೀಗ ಒಡೆದಿರುವ ದುಷ್ಕರ್ಮಿಗಳು ನಗದು ಕದ್ದೊಯ್ದಿರುವ ಘಟನೆ ಶುಕ್ರವಾರ ತಡರಾತ್ರಿ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.
ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕಚೇರಿಯಲ್ಲಿದ್ದ 25 ಸಾವಿರ ರೂ. ನಗದು, ಚೆಕ್ ಬುಕ್ ಹಾಗೂ ಕೆಲ ದಾಖಲಾತಿಗಳನ್ನು ಕಳ್ಳತನ ಮಾಡಿ, ನಂತರ ಪಕ್ಕದಲ್ಲಿಯೇ ಇದ್ದ ಶಾಂತಿ ಸಮುದಾಯದ ಕಚೇರಿಯಲ್ಲೂ 20 ಸಾವಿರ ರೂ. ನಗದು ಹಾಗೂ ಬೀರುವಿನಲ್ಲಿದ್ದ ದಾಖಲಾತಿಯನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯ ಸುಜುಕಿ ಬೈಕ್ ಶೋ ರೋಮ್ನ ಕಿಟಕಿಯ ಸರಳುಗಳನ್ನು ಬ್ಲೇಡ್ನಿಂದ ಕತ್ತರಿಸಿ ಒಳಗೆ ನುಗ್ಗಿ ಎಂಟು ಸಾವಿರ ರೂ. ನಗದು ದೋಚಿದ್ದಾರೆ. ಕಿಟಕಿ ಮೂಲಕ ಒಳನುಗ್ಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಕಣ್ಣು ಮಾತ್ರ ಕಾಣುತ್ತಿದೆ. ನಂತರ ಸುಲ್ತಾನ್ ರಸ್ತೆಯ ಸ್ವರಾಜ್ ಟ್ರ್ಯಾಕ್ಟರ್ ಶೋ ರೋಂನಲ್ಲೂ ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ:ಸದ್ದಿಲ್ಲದೇ ಶುರುವಾಗಿದೆ ಪ್ರಚಾರ: ಪಶ್ಚಿಮಬಂಗಾಳದಲ್ಲಿ ಮಮತಾ v/s ಬಿಜೆಪಿ ಚುನಾವಣಾ ರಣತಂತ್ರ!
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಎಂ.ಜೆ.ಪೃಥ್ವಿ, ಪಿಎಸ್ಐ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಟ್ಟಣದ ಟೌನ್ ಹಾಗೂ ಗ್ರಾಮಾಂತರ ಎರಡು ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.