ಕುಷ್ಟಗಿ: ಬೀಗ ಹಾಕಿದ್ದ ಎರಡು ಮನೆಗಳಲ್ಲಿ ದೋಚಿದ್ದಾರಲ್ಲದೇ ಅದೇ ಓಣಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಾಣೆಯಾದ ಘಟನೆ ಪಟ್ಟಣದ 15ನೇ ವಾರ್ಡ್ ವ್ಯಾಪ್ತಿಯ ಗಾಂಧಿ ನಗರದಲ್ಲಿ ನಡೆದಿದೆ.
ಕುಷ್ಟಗಿ ಪಟ್ಟಣದ ತಾವರಗೇರಾ ಪಟ್ಟಣ ಸಹಕಾರ ಬ್ಯಾಂಕ್ ಪಿಗ್ಮಿ ಸಂಗ್ರಾಹಕ ಬಸವರಾಜ ಸಾಶ್ವಿಹಾಳ ಹಾಗೂ ಯಲಬುರ್ಗಾ ತಾ.ಪಂ.ನೌಕರ ಬಾಬು ಮೈತ್ರಿ ಅವರ ಮನೆ ಕಳ್ಳತನವಾಗಿದೆ.
ನಗದು ಸಹಿತ ಚಿನ್ನಾಭರಣ ಕಳುವಾಗಿದ್ದು, ಪ್ರಕರಣ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದಾರೆ.
ಈ ಮನೆಯವರು ಅನ್ಯ ಕಾರ್ಯ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಕೀಲಿ ಹಾಕಿರುವ ಮನೆಗಳ ಸುಳಿವು ಅರಿತ ಕಳ್ಳರು, ಈ ಮನೆಗಳಿಗೆ ನುಗ್ಗಿ ಬೀಗ ಮುರಿದು ಅಲ್ಮಾರದಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.
ಅದೇ ವಾರ್ಡಿನಲ್ಲಿ ಮುರ್ತುಜಾಸಾಬ್ ಅವರ ಮನೆಯ ಮುಂದೆ ನಿಲ್ಲಿಸಿದ್ದ ಹೊಂಡಾ ಶೈನ್ ಬೈಕನ್ನು ಕದ್ದು ಪರಾರಿಯಾಗಿದ್ದಾರೆ.