Advertisement

Theft Case ಮಂಗಳೂರು: 13 ಲಕ್ಷ ರೂ. ಚಿನ್ನಾಭರಣ ಕಳವು

12:29 AM Jun 24, 2024 | Team Udayavani |

ಮಂಗಳೂರು: ಮನೆಯ ಲ್ಲಿದ್ದ ಸುಮಾರು 13 ಲ.ರೂ ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ಹೆಲೆನ್‌ ಲೋಬೋ ಅವರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಹೆಲೆನ್‌ ಬೆಂಗಳೂರಿಗೆ ಹೋಗು ವಾಗ ಪಕ್ಕದ ಮನೆಯವರ ಬಳಿ ಚಿನ್ನ ನೀಡಿದ್ದರು. ವಾಪಸ್‌ ಬಂದ ಬಳಿಕ ಚಿನ್ನಾಭರಣ ಪಡೆದುಕೊಂಡಿದ್ದರು. ಆಗ ಚಿನ್ನವನ್ನು ಪರಿಶೀಲಿಸಿರಲಿಲ್ಲ. ಕೆಲವು ಸಮಯದ ಅನಂತರ ಅವರ ಮನೆಗೆ ಮಹಿಳೆಯೊಬ್ಬರು ಕೆಲಸಕ್ಕೆ ಸೇರಿದ್ದರು.

ಜೂ. 16ರಂದು ಹೆಲೆನ್‌ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ 25 ಪವನ್‌ನ ನೆಕ್ಲೆಸ್‌, 2 ಸರ, 1 ಕರಿಮಣಿ ಸರ, 1 ಕೈ ಬಳೆ, 1 ಕಿವಿಯೋಲೆ ಸಹಿತ ಸುಮಾರು 13 ಲ.ರೂ. ಮೌಲ್ಯದ ಆಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next