Advertisement

ಕಳ್ಳತನ; 5 ದಿನ ಕಳೆದರೂ ದಾಖಲಾಗದ ದೂರು

02:52 PM Nov 13, 2021 | Team Udayavani |

ಮಸ್ಕಿ: ಪಟ್ಟಣದ ಹೊರ ವಲಯದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಬೀಗ ಮುರಿದು ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ದೂರು ದಾಖಲಾಗದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.

Advertisement

ನ.8ರಂದು ರೈತ ಸಂಪರ್ಕ ಕೇಂದ್ರದ ಬೀಗ ಮುರಿದ ಕಳ್ಳರು ರೈತರಿಗೆ ವಿತರಿಸಲು ಸರ್ಕಾರದಿಂದ ಮುಂಜೂರಾಗಿದ್ದ 40ಕ್ಕೂ ಹೆಚ್ಚು ತಾಡಪಲ್‌, ಬ್ಯಾಟರಿ, ಯುಪಿಎಸ್‌ ಸೇರಿದಂತೆ ಅನೇಕ ವಸ್ತುಗಳನ್ನು ಕಳವು ಮಾಡಿದ್ದರು. ಕಳವು ನಡೆದ ದಿನ ಪೊಲೀಸರು, ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದರು. ಸಹಾಯಕ ಕೃಷಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಸರ್ಕಾರಿ ಇಲಾಖೆ ಕಚೇರಿಯೊಂದು ಕಳ್ಳತನ ನಡೆದು ಐದು ದಿನ ಕಳೆದರೂ ಸಹಾಯಕ ಕೃಷಿ ಅಧಿಕಾರಿ ದೂರು ನೀಡದ ಕಾರಣ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಇದುವರೆಗೂ ದೂರು ದಾಖಲಾಗಿಲ್ಲ. ಕಚೇರಿಯಲ್ಲಿ ಕಳ್ಳತನ ನಡೆದಿದ್ದರೂ ಇದುವರೆಗೂ ದೂರು ನೀಡದಿರುವುದು ಕೃಷಿ ಅಧಿಕಾರಿಗಳ ನಡೆ ಕುರಿತು ಸಂಶಯ ಉಂಟು ಮಾಡಿದೆ.

ಪೊಲೀಸ್‌ ಅಧಿಕಾರಿಗಳು ಖುದ್ದು ಸ್ಥಾನಿಕ ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ಆದರೂ ಇದುವರೆಗೂ ಕೇಸ್‌ ದಾಖಲಿಸಿಲ್ಲ. ರೈತರಿಗೆ ವಿತರಿಸಲು ಇಟ್ಟಿದ್ದ ತಾಡಪಲ್‌ ಹಾಗೂ ಬ್ಯಾಟರಿ ಸೇರಿ ಇತರೆ ಬೆಲೆಬಾಳುವ ವಸ್ತುಗಳು ಕಳ್ಳತನವಾದರೂ ಪ್ರಕರಣ ಗಂಭೀರವಾಗಿ ಪರಿಗಣಿಸಿಲ್ಲ. ಬದಲಾಗಿ ಕೇಸ್‌ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಕ್ಕೆ ರೈತ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಮಸ್ಕಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕಳ್ಳತನ ನಡೆದ ಬಗ್ಗೆ ಅಧಿಕಾರಿಗಳು ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೂ ದೂರು ಕೊಡದ ಕಾರಣ ಪ್ರಕರಣ ದಾಖಲಾಗಿಲ್ಲ. -ಸಿದ್ಧರಾಮ ಬಿದರಾಣಿ, ಪಿಎಸ್‌ಐ, ಮಸ್ಕಿ

Advertisement

Udayavani is now on Telegram. Click here to join our channel and stay updated with the latest news.

Next