Advertisement

ರಂಗಭೂಮಿ ಸಮಾಜವನ್ನು ಒಗ್ಗೂಡಿಸುತ್ತದೆ 

06:25 AM Jan 08, 2018 | Team Udayavani |

ಉಡುಪಿ: ರಂಗಭೂಮಿಯು ಜನರನ್ನು ಒಂದುಗೂಡಿಸುವ ಕೆಲಸ ಮಾಡುತ್ತದೆ. ರಂಗಭೂಮಿಯಿಂದಲೇ ಒಂದು ಸಮಾಜ ಸೃಷ್ಟಿಯಾಗುತ್ತದೆ ಎಂದು ಹಿರಿಯ ರಂಗಕರ್ಮಿ ಕೆ.ವಿ. ಅಕ್ಷರ ಅಭಿಪ್ರಾಯಪಟ್ಟರು.

Advertisement

ಅವರು ಜ. 7ರಂದು ರಂಗಭೂಮಿ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ 38ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ, “ಕಲಾಂಜಲಿ’ ಬಿಡುಗಡೆ ಮತ್ತು ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ರಂಗಕಲಾ ವಾರಿಧಿ’ ಪ್ರಶಸ್ತಿ ಸ್ವೀಕರಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ರಂಗಭೂಮಿ ಪ್ರೇಕ್ಷಕರ ಜತೆ ಸಂವಹನವನ್ನಷ್ಟೇ ಮಾಡುವುದಲ್ಲ. ಬದಲಾಗಿ ಅಲ್ಲಿ ಜಗಳ, ಪ್ರೀತಿ ಕೂಡ ಇರುತ್ತದೆ.
ಪ್ರೇಕ್ಷಕರು ದಡ್ಡರಲ್ಲ. ಅವರಿಗೆ ಉಪದೇಶ, ಸಂವಹನದ ಅಗತ್ಯವಿಲ್ಲ ಎಂದು ಕೆ.ವಿ. ಅಕ್ಷರ ಅಭಿಪ್ರಾಯಪಟ್ಟರು.

ನೀನಾಸಂ ಮತ್ತು ರಂಗಭೂಮಿ ಸಂಸ್ಥೆಗಳು ನಾಟಕ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತ ಬಂದಿವೆ. ಆದರೆ ಇಂದಿನ ಸರಕಾರಗಳು ಸರಕಾರಿ ಮಟ್ಟದಲ್ಲಿ ದುಂದುವೆಚ್ಚ ಮಾಡುತ್ತಿವೆಯೇ ಹೊರತು ರೆಪರ್ಟರಿಗಳನ್ನು ಪ್ರೋತ್ಸಾಹಿಸುತ್ತಿಲ್ಲ ಎಂದು ಅಕ್ಷರ ಅಸಮಾಧಾನ ವ್ಯಕ್ತಪಡಿಸಿದರು.

ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಡಾ| ಎಚ್‌. ಶಾಂತಾರಾಮ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ನಂದಕುಮಾರ್‌ ಸ್ವಾಗತಿಸಿದರು. “ಕಲಾಂಜಲಿ’ ಸಂಚಿಕೆಯನ್ನು ಹಿರಿಯ ಸಾಹಿತಿ ಡಾ| ಮಹಾಬಲೇಶ್ವರ ರಾವ್‌ ಬಿಡುಗಡೆಗೊಳಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿ, ವಿ.ಜೆ. ಶೆಟ್ಟಿ ವಂದಿಸಿದರು. ರಂಗಭೂಮಿ ನಾಟಕ ಸ್ಪರ್ಧೆಯಲ್ಲಿ ಹೆಗ್ಗೊàಡಿನ ಕೆ.ವಿ. ಸುಬ್ಬಣ್ಣ ರಂಗಸಮೂಹ ತಂಡ ಪ್ರದರ್ಶಿಸಿದ “ಸಂದೇಹ ಸಾಮ್ರಾಜ್ಯ’ ತಂಡಕ್ಕೆ ಪ್ರಥಮ ಬಹುಮಾನ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next