ಬೆಂಗಳೂರು: ಕೋವಿಡ್ ಲಾಕ್‌ಡೌನ್ ತೆರವಾದ ಬಳಿಕ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಸರ್ಕಾರ ಶರತ್ತುಬದ್ಧ ಅನುಮತಿ ನೀಡಿದ್ದು, ಎಂಟು ತಿಂಗಳ ಬಳಿಕ ಹೊಸ ಸಿನಿಮಾ “ಆಕ್ಟ್-1978′ ಬಿಡುಗಡೆಯಾಗಿದೆ.
ಇನ್ನು “ಆಕ್ಟ್-1978′ ರಾಜ್ಯಾದ್ಯಂತ ಸುಮಾರು ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ತುಂಬಿದ ಪ್ರದರ್ಶನ ಕಾಣುತ್ತಿದ್ದು, ಸುಮಾರು ಎಂಟು ತಿಂಗಳ ಬಳಿಕ ಬೆಂಗಳೂರಿನ ಮಾಗಡಿ ರಸ್ತೆಯ ವೀರೇಶ್, ಮೈಸೂರಿನ ಡಿಆರ್‌ಸಿ ಸೇರಿದಂತೆ ರಾಜ್ಯದಪ್ರಮುಖಕೆಲಚಿತ್ರಮಂದಿರಗಳ ಮುಂದೆ ವಾರಾಂತ್ಯವಾದ ಭಾನುವಾರ ಹೌಸ್‌ಫುಲ್ ಬೋರ್ಡ್ ಹಾಕಿದ್ದ ದೃಶ್ಯಗಳು ಕಂಡುಬಂದಿತು. ಇದು ಸಿನಿಮಾ ಮಂದಿಯ ಮೊಗದಲ್ಲಿ ನಗುತಂದಿದೆ.
ಕೋವಿಡ್ ಮಾರ್ಗಸೂಚಿ ಅನ್ವಯ ಸಿಂಗಲ್ ಸ್ಕ್ರೀನ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇಕಡಾ ಐವತ್ತರಷ್ಟು ಮಾತ್ರ ಪ್ರೇಕ್ಷಕರ ಪ್ರವೇಶಾತಿಗೆ ಅವಕಾಶಕಲ್ಪಿಸಲಾಗಿದೆ. ಆಕ್ಟ್ 1978 ಒಂದು ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಯಜ್ಞಾ ಶೆಟ್ಟಿ ಈ ಚಿತ್ರದ ನಾಯಕಿ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ.
ಎಂಟು ತಿಂಗಳ ನಂತರ ಹೌಸ್‌ಫುಲ್ ಬೋರ್ಡ್ ಬಿದ್ದಿರೋದುಖುಷಿಕೊಟ್ಟಿದೆ. ಜನ ನಿಧಾನವಾಗಿ ಸಿನಿಮಾಕ್ಕೆ ಬರುತ್ತಿದ್ದಾರೆ. ಆದರೆ, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು. ಜನ ಸದ್ಯ ಚಿತ್ರಮಂದಿರದತ್ತಯಾವ ಸಿನಿಮಾವಿದೆ ಎಂಬುದನ್ನು ತಿರುಗಿ ನೋಡೋದನ್ನೇ ಮರೆತು ಬಿಟ್ಟಿದ್ದಾರೆ. ಅವರು ಮತ್ತೆ ನೋಡುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಚಿತ್ರಮಂದಿರಗಳುಕೂಡಾ ಜನ ಬರಲಿಲ್ಲಎಂದು ಪ್ರದರ್ಶನ ನಿಲ್ಲಿಸಬಾರದು. ಆಗ ಮಾತ್ರ ಮುಂದಿನ ದಿನಗಳಲ್ಲಿ ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಸಾಧ್ಯ.
–ಕೆ.ವಿ.ಚಂದ್ರಶೇಖರ್, ಪ್ರದರ್ಶಕರ ಸಂಘದ ಅಧ್ಯಕ್ಷ
ವಾರಾಂತ್ಯದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಕಂಡುಬರುತ್ತಿದೆ. ರಾಜ್ಯದ ಅನೇಕ ಸಿಂಗಲ್ ಸ್ಕ್ರೀನ್ ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳಲ್ಲಿ ಹಲವುಶೋಗಳು ಹೌಸ್‌ಫುಲ್ ಆಗಿವೆ. ರಾಜ್ಯದ ಪ್ರಮುಖ ನಗರಗಳಲ್ಲಿ ಗಳಿಕೆಕೂಡ ಚೆನ್ನಾಗಿದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಚೇತರಿಕೆ ಕಾಣಬೇಕಿದೆ.
–ಮಂಸೋರೆ, ನಿರ್ದೇಶಕ