Advertisement

ಝೀಕಾ ವೈರಸ್‌; ರಾಜ್ಯದಲ್ಲಿ ಜಾಗೃತಿ

07:07 PM Jul 11, 2021 | Team Udayavani |

ಬೆಂಗಳೂರು: ನೆರೆಯ ಕೇರಳದಲ್ಲಿ ಝೀಕಾ ವೈರಸ್‌ಸೋಂಕು ಪತ್ತೆಯಾಗಿರುವ ಹಿನ್ನೆಲೆ ರಾಜ್ಯದಲ್ಲಿಯೂಮುಂಜಾಗ್ರತಾಕ್ರಮಕ್ಕೆ ಆರೋಗ್ಯ ಇಲಾಖೆ ಆಯುಕ್ತರುಸುತ್ತೋಲೆ ಹೊರಡಿಸಿದ್ದಾರೆ.ಕೇರಳ ರಾಜ್ಯದಲ್ಲಿ 13 ಝೀಕಾ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ.

Advertisement

ಹೀಗಾಗಿ ವಿಶೇಷವಾಗಿ ಗಡಿ ಜಿಲ್ಲೆಗಳಾದದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ ಜಿಲ್ಲೆಗಳಲ್ಲಿಕಟ್ಟೆಚ್ಚರ ವಹಿಸಬೇಕು. ಪ್ರಮುಖವಾಗಿ ಸೊಳ್ಳೆ ಮೂಲಕಸೋಂಕು ಹರಡಲಿದ್ದು, ಡೆಂ à, ಚಿಕೂನ್‌ ಗುನ್ಯಾಗೆಕಾರಣವಾಗುವ “ಏಡಿಸ್‌ ಈಜಿಪ್ಟೆ„’ ಸೊಳ್ಳೆಯಿಂದಲೇಝೀಕಾ ವೈರಸ್‌ ಹರಡುತ್ತದೆ. ಸದ್ಯ ರಾಜ್ಯದಲ್ಲಿಮುಂಗಾರು ಇದ್ದು, ಸೊಳ್ಳೆಗಳ ಬೆಳವಣಿಗೆಗೆ ಪೂರಕವಾತಾವರಣವಾಗಿದೆ. ಹೀಗಾಗಿ, ಲಾರ್ವ ಹಂತದಲ್ಲೇಸೊಳ್ಳೆಗಳನ್ನು ನಿಯಂತ್ರಿಸಬೇಕು ಎಂದು ತಿಳಿಸಲಾಗಿದೆ.

ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯಸಹಾಯಕರ ನೆರವಿನೊಂದಿಗೆ ಗ್ರಾಮ ಮತ್ತು ನಗರಮಟ್ಟದಲ್ಲಿ ಸೊಳ್ಳೆಗಳ ಹೆಚ್ಚಳವಾಗದಂತೆ ಮುಂಜಾಗ್ರತಾಕ್ರಮವಹಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಯಲ್ಲೂ ರೋಗ ಲಕ್ಷಣಗಳುಳ್ಳವರಮೇಲೆ ಗಮನ ಇಡಬೇಕು ಎಂದು ಸೂಚಿಸಲಾಗಿದೆ.

ಜ್ವರ, ದದ್ದುಗಳು, ಮೈಕೆ ನೋವು, ಕೀಲು ನೋವುಗಳುಉಂಟಾದರೆ ರೋಗ ಲಕ್ಷಣಗಳು ಎಂದು ಪರಿಗಣಿಸಿ ಹೊರರಾಜ್ಯ/ದೇಶ ಪ್ರವಾಸ ಹಿನ್ನೆಲೆ ಹೊಂದಿದ್ದರೆ ಅಂತಹವರಮಾದರಿಯನ್ನು ಬೆಂಗಳೂರು ವೈರಾಣು ಪ್ರಯೋಗಾಲಯಕ್ಕೆಕಳುಹಿಸಬೇಕು ಎಂದು ತಿಳಿಸಲಾಗಿದೆ. ಝೀಕಾ ವೈರಸ್‌ ಗರ್ಭಿಣಿಯರಿಗೆ ಹೆಚ್ಚು ಸಮಸ್ಯೆಉಂಟು ಮಾಡಬಹುದು.

ಹುಟ್ಟುವ ಮಗುವಿನ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಗರ್ಭಿಣಿಯರಿಗೆ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಮಾಡುವ ವೇಳೆ ನಿಗಾ ವಹಿಸಬೇಕು. ಪ್ರತಿ ವಾರ ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಹೆರಿಗೆ ಪ್ರಕರಣಗಳ ವರದಿಯನ್ನು ಆರೋಗ್ಯ ಇಲಾಖೆಗೆ ಕಳುಹಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next