ಚಿಕ್ಕನಾಯಕನಹಳ್ಳಿ: ಶನಿವಾರ ಲಕ್ಮಗೊಂಡನಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಆಯೋಜಿಸಲಾಗಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಯುವಕರ ತಂಡವೊಂದು ತಮಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ ಎಂದು ತಹಶೀಲ್ದಾರ್‌ಗೆ ಅಹವಾಲು ಸಲ್ಲಿಸಿದ್ದಾರೆ.
ಇದಕ್ಕೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಪರಿಹಾರ ಮಾರ್ಗ ಕಂಡುಕೊಳ್ಳಬೇಕು ಎಂದು ಯುವಕರು ಕೋರಿಕೊಂಡಿದ್ದಾರೆ.
“ಅವಿವಾಹಿತರಿಗೆ ವಿವಾಹ ಮಾಡಿಸಿ’ ಎಂದು ಯುವಕರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಲಕ್ಮಗೊಂಡನಹಳ್ಳಿ ಹಾಗೂ ತಿಮ್ಮಾಲಪುರ ಗ್ರಾಮದ ರೈತಾಪಿ ವರ್ಗದ ಗಂಡು ಮಕ್ಕಳಿಗೆ ಮದುವೆ ಆಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಯುವ ರೈತರನ್ನು ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ತಡವಾದರೂ ಮಾನ್ಯ: ಸುಪ್ರೀಂ ಕೋರ್ಟ್