ನವದೆಹಲಿ: ಭಾರತೀಯ ಜನತಾ ಪಕ್ಷ ಹಿಮಾಚಲ್ ಪ್ರದೇಶದ ಅಭಿವೃದ್ಧಿ ಮಾಡಲಿದೆ ಎಂಬುದು ಯುವಕರಿಗೆ ತಿಳಿದಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಸೆಪ್ಟೆಂಬರ್ 24) ಹಿಮಾಚಲ ಪ್ರದೇಶದ ಮಾಂಡಿಯಲ್ಲಿ ಯುವ ವಿಜಯ್ ಸಂಕಲ್ಪ ಹೆಸರಿನ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದ್ದಾರೆ.
ಇದನ್ನೂ ಓದಿ:ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಡಾ.ರಮೇಶ್ ಅರವಿಂದ್ ಆಯ್ಕೆ
ಒಂದು ವೇಳೆ ಯಾರಾದರು ಹಿಮಾಚಲ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದಿದ್ದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದು ಯುವಕರಿಗೆ ತಿಳಿದಿದೆ ಎಂದು ಹೇಳಿದರು. ವಿಧಾನಸಭಾ ಚುನಾವಣೆ ಸನಿಹದಲ್ಲಿರುವ ರಾಜಸ್ಥಾನದ ಮಾಂಡಿಯಲ್ಲಿ ಈ ಮೊದಲು ಮೂರು ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಮಳೆಯಿಂದಾಗಿ ಕೊನೆಯ ಕ್ಷಣದಲ್ಲಿ ಪ್ರಧಾನಿ ಮೋದಿ ಅವರ ಭೇಟಿಯನ್ನು ರದ್ದುಪಡಿಸಿದ್ದು, ಬಳಿಕ ವರ್ಚುವಲ್ ಆಗಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು.
ಜಾಗತಿಕ ಮಟ್ಟದಲ್ಲಿ ಭಾರತ ಸರ್ಕಾರದ ಮೇಲಿನ ವಿಶ್ವಾಸ ಹೆಚ್ಚಳವಾಗುತ್ತಿದೆ ಎಂದ ಪ್ರಧಾನಿ, ಭಾರತೀಯ ಜನತಾ ಪಕ್ಷ ಯುವಕರಿಗೆ ಆದ್ಯತೆ ನೀಡಲು ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ. ಬಿಜೆಪಿ ಸರ್ಕಾರ ಹಿಮಾಚಲ ಪ್ರದೇಶದಲ್ಲಿನ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಪಡಿಸಲು ಕಾರ್ಯನಿರ್ವಹಿಸುತ್ತಿದೆ ಎಂದರು.
ಮಳೆಯನ್ನು ಲೆಕ್ಕಿಸದೇ ಸಮಾವೇಶಕ್ಕೆ ಆಗಮಿಸಿದ ಯುವಕರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಬಿಜೆಪಿ ಯುವಕರ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶ ಎಂಬುದಾಗಿ ಬೆಳೆಯುವ ಕನಸನ್ನು ಯುವಕರು ಪೂರ್ಣಗೊಳಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.