Advertisement
ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲೂ ಈ ಸಮಸ್ಯೆ ತೀವ್ರವಾಗಿದೆ. ಮಳೆ ಆರಂಭಗೊಂಡ ಕೆಲವು ದಿನಗಳ ಬಳಿಕ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಈಗಾಗಲೇ ಶೇ.50ರಷ್ಟು ಎಳೆ ಅಡಿಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
Related Articles
Advertisement
ಈಗಾಗಲೇ ಅಡಿಕೆಗೆ ಔಷಧ ಸಿಂಪಡಣೆ ಆರಂಭಿಸಲಾಗಿದೆ. ಸಾಮಾನ್ಯ ವಾಗಿ ಮೊದಲ ಹಂತದಲ್ಲಿ ಅಡಿಕೆ ಫಸಲು ನಿಲ್ಲಲು ಔಷಧ ಸಿಂಪಡಿಸಲಾಗುತ್ತದೆ. ಕೆಲವರು ಪ್ರತಿ ತಿಂಗಳು ಅಥವಾ 2-3 ತಿಂಗಳಿಗೊಮ್ಮೆ ಔಷಧ ಸಿಂಪಡಿಸುತ್ತಾರೆ. ಎಳೆ ಅಡಿಕೆ ಉದುರುವುದನ್ನು ತಡೆ ಯಲೂ ಔಷಧ ಸಿಂಪಡಿಸುತ್ತಿದ್ದಾರೆ. ಇದರಿಂದ ಕೆಲವೆಡೆ ಮಾತ್ರ ಸಮಸ್ಯೆ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ರೈತರು.
ಕೀಟ ರಸ ಹೀರುವುದರಿಂದ ಎಳೆ ಅಡಿಕೆ ಉದುರುತ್ತದೆ. ಮಳೆಗಾಲ ಸಂದರ್ಭದಲ್ಲಿ ಇದು ಅಲ್ಲಲ್ಲಿ ಕಂಡುಬರುತ್ತದೆ. ಔಷಧ ಸಿಂಪಡಣೆ ಮೂಲಕ ನಿಯಂತ್ರಣ ಸಾಧ್ಯವಿದೆ. ಸ್ಪಷ್ಟವಾಗಿ ಯಾವ ಕಾರಣದಿಂದ ಎಳೆ ಅಡಿಕೆ ಉದುರುತ್ತಿದೆ, ಅದಕ್ಕೆ ಯಾವ ಔಷಧ ಮೂಲಕ ನಿಯಂತ್ರಣ ಸಾಧ್ಯ ಎಂಬುದನ್ನು ಸ್ಥಳಕ್ಕೆ ಭೇಟಿ ನೀಡಿ ಅಥವಾ ಉದುರಿದ ಎಳೆ ಅಡಿಕೆಯನ್ನು ಪರಿಶೀಲಿಸಿ ತಿಳಿಯಬಹುದು.– ಡಾ| ನಾಗರಾಜ್ ವಿಜ್ಞಾನಿ, ಸಿ.ಪಿ.ಸಿ.ಐ. ವಿಟ್ಲ