Advertisement
ಕಾರ್ಯಕ್ರಮದಲ್ಲಿ ರುದ್ರಾಭಿಷೇಕ, ರಥಕಲಶ, ಮಹಾಪೂಜೆಯ ಬಳಿಕ ರಥಾರೋಹಣ, ಪಲ್ಲಪೂಜೆ, ಅನ್ನಸಂತರ್ಪಣೆ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾದ್ಯ ಸಂಗೀತ, ಭಕ್ತಿ ಸಂಗೀತ ನಡೆಯಿತು. ಜ. 18ರಂದು ಬೆಳಗ್ಗೆ ಕವಾಟೋದ್ಘಾಟನೆ, ಅಭಿಷೇಕ, ತುಲಾಭಾರ ಸೇವೆ, ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಮರುಳು ಧೂಮಾವತಿ ಭಂಡಾರ ಬರಲಿದೆ.
ಕಟ್ಟೆಪೂಜೆ, ಅವಭೃತ, ಅಗ್ನಿಕೇಳಿ, ದೈವದ ಭೇಟಿ, ಧ್ವಜಾವರೋಹಣ, ದೈವಗಳ ನೇಮ ನಡೆಯಲಿದೆ. ಜ. 20ರಂದು ದೇಗುಲದಲ್ಲಿ ಸಂಪ್ರೋಕ್ಷಣೆ, ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ.