Advertisement

ಕಣ್ಣೂರು ಅನಂತಪುರ ರಸ್ತೆಯ ಸಿದ್ಧಿಬೈಲು ಮೋರಿ ಕುಸಿದು ವರ್ಷ ತುಂಬಿತು !

06:25 AM Jul 27, 2018 | Team Udayavani |

ಕುಂಬಳೆ: ಸೀತಾಂಗೋಳಿ ವಿದ್ಯಾನಗರ ಕಾಸರಗೋಡು ಒಳ ರಸ್ತೆಯಾದ ಕಣ್ಣೂರು ಅನಂತಪುರ ರಸ್ತೆಯ ಸಿದ್ಧಿಬೈಲಿನಲ್ಲಿ   ಮೋರಿಸಂಕ ವೊಂದು  2017 ಜು. 28ರಂದು ಸಂಜೆ ಕುಸಿದಿದೆ. ಕುಸಿದು ರಸ್ತೆ ಮಧ್ಯೆ ಹೊಂಡವಾಗಿ ನಾಳೆಗೆ ಒಂದು ವರ್ಷವಾಗುತ್ತಿದೆ.  ಇದನ್ನು ಸಂಬಂಧಪಟ್ಟವರು ನಿರ್ಲಕ್ಷಿಸಿದ ಕಾರಣ ಇದು ಅಪಾಯವನ್ನು ಆಹ್ವಾನಿಸುತ್ತಿರುವ ಹೊಂಡವಾಗಿ ಬದಲಾಗಿದೆ.

Advertisement

ಪುತ್ತಿಗೆ ಗ್ರಾಮ ಪಂಚಾಯತಿನ 9ನೇ ವಾರ್ಡಿನಲ್ಲಿ ಹಾದು ಹೋಗುವ ಈ ರಸ್ತೆ ಇತಿಹಾಸ ಪ್ರಸಿದ್ಧ ಸರೋವರ ಕ್ಷೇತ್ರವಾದ ಶ್ರೀ ಅನಂತಪುರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಧಾನ ರಸ್ತೆಯಾಗಿದೆ.

ಮಾಯಿಪ್ಪಾಡಿ ನೈಕ್ಕಾಡ್‌ ಮೂಲಕ ಕುಂಬಳೆಗೆ ತೆರಳಲು ಹತ್ತಿರವಾಗಿರುವ ಈ ರಸ್ತೆಯಲ್ಲಿ ರಾಜ್ಯ ಸರಕಾರದ ಕೈಗಾರಿಕಾ ಕೇಂದ್ರಕ್ಕೆ ಸರಕು ಒಯ್ಯುವ ಘನ ವಾಹನಗಳು ಮತ್ತು ಶಾಲಾ ವಿದ್ಯಾರ್ಥಿಗಳನ್ನು ಹೇರಿದ ಹಲವಾರು ವಾಹನಗಳು ಸಾಗುತ್ತಿರು ತ್ತವೆ. ಮೋರಿ ಕುಸಿದ ಬಗ್ಗೆ ಮಾಹಿತಿ ಇಲ್ಲದ ಹಾಗೂ ಈ ರಸ್ತೆಯಲ್ಲಿ ಅಪರೂಪದಲ್ಲಿ ಆಗಮಿಸುವ ವಾಹನಗಳ ಚಾಲಕರು ಇಕ್ಕೆಲಗಳಲ್ಲಿ ಕಾಡು ತುಂಬಿದ ಈ ಪ್ರದೇಶವನ್ನು ಕಾಣದೆ ದಂಗಾಗಿ ಬಿಡುತ್ತಾರೆ. ಹಲವು ವಾಹನಗಳು ಸಡನ್‌ ಬ್ರೇಕ್‌ ಹಾಕಿ ನಿಯಂತ್ರಣ ತಪ್ಪಿದ ಉದಾಹರಣೆಯೂ ಇದೆ. ಆದರೆ ಅದೃಷ್ಟವಶಾತ್‌ ಇಲ್ಲಿ ಯಾವುದೇ  ರೀತಿಯ ದೊಡ್ಡ ಅನಾಹುತ ಸಂಭವಿಸಿಲ್ಲ.  ಹಾಗೆಂದು ಇದನ್ನು ನಿರ್ಲಕ್ಷಿಸುವುದು ಮುಂದುವರಿದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.ಮೋರಿ ಕುಸಿತದ ಸಚಿತ್ರ ವರದಿಯನ್ನು ಮಾಧ್ಯಮಗಳು ಹಲವು ಬಾರಿ ಪ್ರಕಟಿಸಿದರೂ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. 

ಈ ರಸ್ತೆಯಲ್ಲಿ ಸಂಚರಿಸುವ ಕರ್ನಾಟಕ ರಾಜ್ಯ ಕ್ರೈಂ ಮತ್ತು ಭ್ರಷ್ಟಾಚಾರ ತಡೆ ನಿಗಮದ ಅಧ್ಯಕ್ಷರು ರಸ್ತೆ ದುರ ವಸ್ಥೆ  ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ವೀಡಿಯೋ ದೃಶ್ಯ ಸಹಿತ ದೂರು ನೀಡಲು ಮುಂದಾಗಿದ್ದಾರೆ.ರಸ್ತೆ ಫಲಾನುಭವಿಗಳು ಪ್ರತಿಭಟನೆಗೆ ಸಜ್ಜಾಗಿದ್ದಾರೆ.ಇನ್ನಾದರೂ ಅಧಿಕಾರಿಗಳು  ಎಚ್ಚೆತ್ತು ಸಂಭವನೀಯ ಅಪಾಯ ತಪ್ಪಿಸಲು  ಕ್ರಮ ಕೈಗೊಳ್ಳಬೇಕಾಗಿದೆ.

ಚಿತ್ರ: ಶರತ್‌ ಕುಮಾರ್‌ ಜಿ.ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next