ನವದೆಹಲಿ: ವಿಶ್ವದಲ್ಲಿ ಅತಿ ದೊಡ್ಡದಾಗಿ ಹೂವು ಬಿಡುವ ಸಸ್ಯವೊಂದನ್ನು ಕಂಡು ಹಿಡಿದಿರುವುದಾಗಿ ಇಂಡೋನೇಷ್ಯಾದ ಪರಿಸರ ವಿಜ್ಞಾನಿಗಳು ಘೋಷಿಸಿದ್ದಾರೆ.
ರಫ್ಲೆಸಿಯಾ ಟ್ಯುಯಾನ್-ಮುಡೆ ಹೆಸರಿನ ಈ ಹೂವಿನ ದಳಗಳು ದಪ್ಪಗೆ ನೀರು ತುಂಬಿಕೊಂಡಂತೆ ಇರುತ್ತವೆ. ದಳಗಳ ಮೇಲೆ ಬೊಬ್ಬೆಗಳ ಮಾದರಿಯಲ್ಲಿ ಬಿಳಿಯ ಚಿತ್ತಾರವಿದೆ. ಈ ಹೂವು ಸರಾಸರಿ 3.6 ಅಡಿ ಅಗಲ ಬೆಳೆಯುತ್ತದೆ. ಒಮ್ಮೆ ಅರಳಿದರೆ ಒಂದು ವಾರದವರೆಗೆ ನಳನಳಿಸುತ್ತಿರುತ್ತದೆ.
ಇದರ ವಿಶೇಷವೇನೆಂದರೆ, ಇದು ಮಾಂಸಾಹಾರಿ ಹೂವು. ಕೊಳೆತ ಮಾಂಸದ ವಾಸನೆಯನ್ನು ತನ್ನ ಸುತ್ತ ಬೀರುವ ಇದು ಆ ಮೂಲಕ ಕೀಟಗಳನ್ನು ಆಕರ್ಷಿಸಿ ಅವನ್ನು ತಿನ್ನುತ್ತದೆ. ಈ ಜಾತಿಯ ಹೂವುಗಳಿಗೆ 19ನೇ ಶತಮಾನದಲ್ಲಿ ಬ್ರಿಟನ್‌ನ ಅಧಿಕಾರಿ ಸರ್ ಸ್ಟಾನ್‌ಫೋರ್ಡ್ ರಫಲ್ಸ್ ಈ ಜಾತಿಯ ಹೂಗಳನ್ನು ಪತ್ತೆ ಮಾಡಿದ್ದರಿಂದ ಈ ಜಾತಿಯ ಹೂಗಳಿಗೆ ರೆಫ್ಲೆಸಿಯಾ ಎಂದೇ ಕರೆಯಲಾಗಿದೆ.
ಈವರೆಗೆ ಸುಮಾತ್ರಾ ನಗರದ ಪಶ್ಚಿಮ ಕರಾವಳಿಯ ದಂಡೆಯಲ್ಲಿರುವ ದಟ್ಟ ಕಾನನಗಳಲ್ಲಿ ಕೆಲವು ವರ್ಷಗಳ ಹಿಂದೆ ಕಂಡುಬಂದಿದ್ದ 3.5 ಅಡಿ ಅಗಲದ ಕಾಡು ಪುಷ್ಪ ಈವರೆಗೆ ವಿಶ್ವದ ಅತಿ ದೊಡ್ಡ ಹೂವು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.