Advertisement

ಜಗತ್ತೇ ಬೆರಗಾಗಲಿದೆ ಶರಣಬಸವ ವಿವಿ ಶಿಕ್ಷಣಕ್ಕೆ

11:59 AM Aug 16, 2018 | Team Udayavani |

ಕಲಬುರಗಿ: ಮುಂಬರುವ ವರ್ಷಗಳಲ್ಲಿ ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಶರಣಬಸವ ವಿಶ್ವವಿದ್ಯಾಲಯವೂ ಒಂದಾಗಲಿದೆ ಎಂದು ಶರಣಬಸವ ವಿವಿ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ಸದೀಚ್ಛೆ ವ್ಯಕ್ತಪಡಿಸಿದರು.

Advertisement

ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ 72ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ
ಮಾಡಿ ಆಶೀರ್ವಚನ ನೀಡಿದ ಅವರು, ಶರಣಬಸವ ವಿವಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆ ಮಟ್ಟ ಹೆಚ್ಚಾಗುತ್ತಿದೆ. ಕೆಲವೇ ಕೆಲವು ವರ್ಷಗಳಲ್ಲಿ ಜಗತ್ತು ಶರಣಬಸವ ವಿವಿಯ ಗುಣಮಟ್ಟದ ಶಿಕ್ಷಣಕ್ಕೆ ಬೆರಗುಗಣ್ಣಿನಿಂದ ನೋಡುವ ದಿನಗಳು ಹತ್ತಿರವಾಗಲಿವೆ ಎಂದರು.

ಶರಣಬಸವ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ಆಗಿದ್ದು, ಜಗತ್ತಿನ 200 ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಶರಣಬಸವ ವಿವಿ ಗುರುತಿಸಿಕೊಳ್ಳುವಂತೆ ಎಲ್ಲರೂ ಶ್ರಮವಹಿಸಬೇಕೆಂದು ಸಲಹೆ ನೀಡಿದರು. 

ಭಾರತಕ್ಕೆ ಸ್ವಾತಂತ್ರ್ಯಾ ದೊರಕಿದರೂ ಹೈದ್ರಾಬಾದ ಕರ್ನಾಟಕದ ಭಾಗದ ಜನತೆಗೆ ಸ್ವಾತಂತ್ರ್ಯಾ ದೊರಕಿರಲಿಲ್ಲ. ಈ ಭಾಗ ಹೈದ್ರಾಬಾದ ನಿಜಾಮನ ಅರಸನ ಅಧೀನದಲ್ಲಿತ್ತು. ನಂತರ ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯಾ ದೊರೆಯಿತು. ಬ್ರಿಟಿಷ್‌ ಮತ್ತು ನಿಜಾಮನ ಗುಲಾಮಗಿರಿಯಿಂದ ಮುಕ್ತಿ ಹೊಂದಿತು ಎಂದರು.

ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಭಾರತಕ್ಕೆ ಸ್ವಾತಂತ್ರ್ಯಾ ಸಿಗಲು ಸಾಧ್ಯವಾಯಿತು. ಸ್ವಾತಂತ್ರ್ಯಾ ದೊರಕಿ ಬಹಳ ವರ್ಷಗಳಾದರೂ ಭಾರತ ಅಭಿವೃದ್ಧಿಯಲ್ಲಿ ಇನ್ನು ಹಿಂದೆ ಬಿದ್ದಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಸಾಗಬೇಕು ಎಂದರು. 

Advertisement

ವಿವಿ ಕುಲಪತಿ ಡಾ| ನಿರಂಜನ ವಿ.ನಿಷ್ಠಿ, ಸಹ  ಲಪತಿಗಳಾದ ಡಾ| ವಿ.ಡಿ. ಮೈತ್ರಿ, ಪ್ರೊ| ಎಸ್‌.ಎಸ್‌. ದೇವರಕಲ್‌, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಎಸ್‌.ಎಚ್‌. ಹೊನ್ನಳ್ಳಿ, ಡೀನ್‌ ಡಾ| ಲಿಂಗರಾಜ ಶಾಸ್ತ್ರೀ, ಪ್ರೊ| ಸಿ.ಎಸ್‌.ಉಗಾಜಿ, ಹಣಕಾಸು ಅ ಧಿಕಾರಿ ಶಿವಲಿಂಗಪ್ಪ ನಿರಗುಡಿ, ಡಾ| ಎಸ್‌.ಜಿ. ಡೊಳ್ಳೇಗೌಡ್ರ, ವಿವಿಯ ಎಲ್ಲ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು

ಧ್ವಜದ ಮಹತ್ವ ತಿಳಿ ಹೇಳಿದ ಸತ್ಯಾತ್ಮತೀರ್ಥರು 
ಕಲಬುರಗಿ: 23ನೇ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಕೃಷ್ಣಾಮೃತ ಮಹಾರ್ಣವ ಪಾಠಪ್ರವಚನದಲ್ಲಿ ಮಾತನಾಡಿದ ಸತ್ಯಾತ್ಮತೀರ್ಥರು ಗುರುಗಳು ಶ್ರೀಮಧ್ವಾಚಾರ್ಯರೇ ತಮ್ಮ ಕೃಷ್ಣಾಮೃತ ಮಹಾರ್ಣವ ಕೃತಿಯಲ್ಲಿ ಗರುಡಧ್ವಜ… ಎಂದು
ಹೇಳುವ ಮೂಲಕ ನಮ್ಮೆಲ್ಲರ ಗಮನ ಸೆಳೆದಿದ್ದಾರೆ ಎಂದರು.

ನಮ್ಮ ದೇಶದ ಧ್ವಜ ಅದು ಬರೀ ಧ್ವಜವಲ್ಲ, ಅದನ್ನು ಗರುಡಧ್ವಜ ಎಂದು ಅನುಸಂಧಾನ ಮಾಡಿಕೊಂಡು ಧ್ವಜಾರೋಹಣ ಮಾಡಬೇಕು ಎಂದಿರುವ ಉತ್ತರಾದಿ ಮಠದ ಸತ್ಯಾತ್ಮತೀರ್ಥ ಶ್ರೀಪಾದರು ದೇಶದ, ಧರ್ಮದ ಕೀರ್ತಿ ಪತಾಕೆ ಹಾರಿಸುವ ಧ್ವಜ ಅವಶ್ಯವಾಗಿ ಎಲ್ಲರೂ ಹಾರಿಸುವ ಮೂಲಕ ದೇಶ ಹಾಗೂ ಧರ್ಮವನ್ನು ಗೌರವಿಸಬೇಕೆಂದು ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next