Advertisement
ಸೋಮವಾರ ರೇಣುಕಾ ಮಂದಿರದಲ್ಲಿ ಜಿಲ್ಲಾ ಸರ್.ಎಂ. ವಿಶ್ವೇಶ್ವರಾಯ ಕಟ್ಟಡ, ನಲ್ಲಿ ಮತ್ತು ಸ್ಯಾನಿಟರಿ ಕಾರ್ಮಿಕರಸಂಘದ 6ನೇ ವಾರ್ಷಿಕೋತ್ಸವ, ವಿಶ್ವ ಪ್ಲಂಬರ್ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಪ್ಲಂಬರ್ ಮೇಸ್ತ್ರಿಗಳಿಗೆ
ಗೌರವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನೆ, ಕಚೇರಿ ಎಲ್ಲಾ ಕಡೆ ಸ್ವತ್ಛತೆಯ ವಾತಾವರಣಕ್ಕೆ ಪ್ಲಂಬರ್ ಅವಶ್ಯಕತೆ ಇದೆ. ಪ್ಲಂಬರ್‌ಗಳು ಇರದಿದ್ದರೇ ದೇಶವೇ ಅಸ್ವತ್ಛತೆಯಿಂದ ಕೂಡಿರುತ್ತಿತ್ತು ಎಂದರು.
ಹೇಳಿದಂತೆ ಕಾಯಾ, ವಾಚಾ, ಮನಸಾ ಯಾರು ಪರಿಶುದ್ಧ, ಪ್ರಾಮಾಣಿಕ ಕಾಯಕ ಮಾಡುವರೋ ಅವರೇ ನಿಜವಾದ ಕಾಯಕ ಜೀವಿಗಳು, ದೇವರು, ಕರ್ಮಯೋಗಿಗಳು. ಸತ್ಯ ಶುದ್ಧತೆಯಿಂದ ಯಾರು ಕಾಯಕ ಮಾಡುತ್ತಾರೋ ಅಂತಹವರು 100 ವರ್ಷಗಳ ಕಾಲ ಆರೋಗ್ಯಪೂರ್ಣರಾಗಿ ಬಾಳುತ್ತಾರೆ ಎಂದು ತಿಳಿಸಿದರು. ಪ್ರತಿಯೊಬ್ಬರು ಪ್ಲಂಬರ್‌ಗಳೇ. ನಿತ್ಯವೂ ಎಲ್ಲರೂ ಯಾವುದಾದರೂ ಜೋಡಣೆ ಕಾರ್ಯದಲ್ಲಿಯೇ ತೊಡಗಿಕೊಂಡಿರುತ್ತಾರೆ. ಇತರರಿಗೂ ಪ್ಲಂಬರ್‌ಗಳಿಗೆ ಯಾವುದೇ ವ್ಯತ್ಯಾಸ ಇಲ್ಲ. ಮುಂದಿನ ವರ್ಷ ಹರಿಹರ ಪೀಠದಲ್ಲಿ ವಿಶ್ವ ಪ್ಲಂಬರ್ ದಿನದ ಆಚರಣೆ ಮಾಡುವಂತೆ ತಿಳಿಸಿದರು. ಮಹಾನಗರ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್ ಮಾತನಾಡಿ, ಕಟ್ಟಡ ಕಾರ್ಮಿಕ ಸಂಘಕ್ಕೆ ವರ್ಷಕ್ಕೆ 275 ರೂ. ಶುಲ್ಕ ಪಾವತಿಸುವ ಮೂಲಕ ಕಾರ್ಡ್ ಪಡೆಯುವುದರಿಂದ ಮಕ್ಕಳ ಶಿಕ್ಷಣ, ಯಾವುದಾದರೂ ಅವಘಡ ಸಂಭವಿಸಿದಲ್ಲಿ ಪರಿಹಾರ, ವಿವಾಹ ಪ್ರೋತ್ಸಾಹಧನ ನೀಡಲಾಗುತ್ತದೆ. ವಿವಿಧ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ 220 ಕೋಟಿ ಕಲ್ಯಾಣ ಮಂಡಳಿಯಿಂದ ಕಾರ್ಮಿಕರು ಸದ್ವಿನಿಯೋಗ ಪಡಿಸಿಕೊಂಡಿದ್ದರು ಎಂದು ತಿಳಿಸಿದರು.
Related Articles
Advertisement
ಕಟ್ಟಡ ಕಾರ್ಮಿಕರಿಗೆ ಇರುವಂತಹ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವ ಜ್ಞಾನದ ಕೊರತೆ ಇದೆ. ಕಟ್ಟಡ ಕಾರ್ಮಿಕರ ಶ್ರಮದ ಶೇ.1 ಪಾಲನ್ನು ಕಲ್ಯಾಣ ಮಂಡಳಿಗೆ ನೀಡುವುದರಿಂದ ಮಂಡಳಿಯಲ್ಲಿ 7.500 ಕೋಟಿ ರೂಪಾಯಿ ಇದೆ. ಅದು ಕಾರ್ಮಿಕರಿಗೆ ಸದ್ಬಳಕೆಯಾಗಬೇಕು.ಜಿಲ್ಲೆಯ 46 ಸಾವಿರ ಕಟ್ಟಡ ಕಾರ್ಮಿಕರಲ್ಲಿ ಎಷ್ಟು ನಿಷ್ಠಾವಂತರು, ಮೋಸಗಾರರು ಎನ್ನುವುದು ತಿಳಿಯಬೇಕಾಗಿದೆ. ನಿಜವಾದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು ದೊರಕಬೇಕು. ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾ.18 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಎನ್. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ದೇವಮನೆ ಶಿವಕುಮಾರ್, ಎಚ್.ಬಿ. ಮಂಜುನಾಥ್, ಅರವಿಂದ್ ಎಲ್.ಬದ್ಧಿ, ಶಿವಕುಮಾರ್ ಡಿ. ಶೆಟ್ಟರ್, ಜಿ.ಬಿ. ಸುರೇಶ್‌ಕುಮಾರ್, ಎಚ್.ವಿ. ಮಂಜುನಾಥ್‌ಸ್ವಾಮಿ, ಸಿ.ಎಂ. ರವಿ, ಎಸ್. ಎಸ್. ರಮೇಶ್, ಎ.ಆರ್. ಶರಣಕುಮಾರ್, ಡಿ. ನವೀನ್‌ಕುಮಾರ್ ಇತರರು ಇದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ಪ್ಲಂಬರ್ ಮೇಸ್ತ್ರಿಗಳಿಗೆ ಪುರಸ್ಕರಿಸಲಾಯಿತು. ಕಾರ್ಯಕ್ರಮದ ಮುನ್ನ ಬೈಕ್ ರ್ಯಾಲಿ ನಡೆಯಿತು.