Advertisement
ಸೋಮವಾರ ಟ್ವೀಟ್ ಮಾಡಿರುವ ರಾಹುಲ್, “ಪ್ರಧಾನಿ ಮೋದಿ ಅವರು “ಜಾತಿಗಣತಿ’ ಎಂಬ ಪದವನ್ನು ಹೇಳಲೂ ಹೆದರುತ್ತಾರೆ. ಅಲ್ಲದೆ “ಬಹುಜನರು’ ತಮ್ಮ ಹಕ್ಕುಗಳನ್ನು ಪಡೆಯುವುದನ್ನು ಅವರು ಬಯಸುವುದಿಲ್ಲ ಎಂದು ಟೀಕಿಸಿದ್ದಾರೆ. ಸಮಗ್ರ ಜಾತಿ ಜನಗಣತಿ ನಡೆಯುವವರೆಗೆ, ಮೀಸ ಲಾತಿ ಮೇಲಿನ ಶೇ.50 ಮಿತಿ ತೆಗೆದು ಹಾಕುವ ಮೂಲಕ ಪ್ರತೀ ವರ್ಗವು ತನ್ನ ಹಕ್ಕುಗಳು, ನ್ಯಾಯ ಪಡೆಯುವವರೆಗೆ ನಾವು ವಿರಮಿಸುವುದಿಲ್ಲ ಎಂದಿದ್ದಾರೆ.ಸ್ಥಳೀಯರೇ ಆಡಳಿತ ನಡೆಸಲಿ: ಜಮ್ಮು-ಕಾಶ್ಮೀರ ಸರಕಾರವನ್ನು ದಿಲ್ಲಿ ನಾಯಕರು ಮುನ್ನಡೆಸುವ ಬದಲಾಗಿ, ಸ್ಥಳೀಯ ನಾಯಕರೇ ಮುನ್ನಡೆಸಲೆಂದು ಕಾಂಗ್ರೆಸ್ ಬಯಸುತ್ತದೆಂದು ರಾಹುಲ್ ಹೇಳಿದ್ದಾರೆ. ಪೂಂಛ… ಚುನಾವಣ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿ, ಮೊದಲ ಬಾರಿಗೆ ಪ್ರಜಾಪ್ರಭುತ್ವದ ಹಕ್ಕು ಕಸಿದು, ರಾಜ್ಯವನ್ನು ಯುಟಿ ಆಗಿ ಬದಲಿಸಲಾಗಿದೆ ಎಂದು ದೂರಿದ್ದಾರೆ.