Advertisement

ಅಮ್ಮಾ ಎಂದರೆ ಏನೋ ಹರುಷವು…; ಅಮ್ಮ ಎಂಬ ಎರಡ‌‌ಕ್ಷರದ ಪದದಲ್ಲಿ ಏನೋ ಖುಷಿ

11:18 AM May 10, 2020 | Hari Prasad |

‘ಅಮ್ಮಾ ಎಂದರೆ ಏನೋ ಹರುಷವು… ನಮ್ಮ ಪಾಲಿಗೆ ಅವಳೇ ದೈವವು…’ ಈ ಮಾತು ಅಕ್ಷ಼಼ರಃ ಸತ್ಯ.

Advertisement

ಅಮ್ಮ ಎಂಬ ಎರಡ‌‌ಕ್ಷರದ ಪದದಲ್ಲಿ ಏನೋ ಖುಷಿ. ಇದು ನಮ್ಮ ಅರಿವಿಗೆ ಬರುವುದು ನಾವು ತಾಯಿಯಾದಾಗ. ಅಮ್ಮನ ಎರಡು ಮಾತನ್ನು ಕೇಳಲು ಕಿವಿ ಚಡಪಡಿಸುತ್ತಿದೆ, ಅವರ ಮಡಿಲಲ್ಲಿ ಮಲಗಲು ಆಸೆಯಾಗುತ್ತಿದೆ.

ಅವರಿಗೆ ನಾನು ಯಾವ ಉಡುಗೊರೆಯನ್ನು ಕೊಡಲಿಲ್ಲ, ಆದರೆ ಅವರಿಂದ ಪಡೆದದ್ದೆ ಜಾಸ್ತಿ. ಎಲ್ಲ ವಿಧದಲ್ಲೂ ಅಮ್ಮ ನನಗೆ ಆಸರೆಯಾಗಿದ್ದರು.

ಅವರಿಗೆ ಮಕ್ಕಳೆಲ್ಲರೂ ಬಂದು ಮಾತಾನಾಡಿಸಿ ಹೋದರೆ ತುಂಬಾ ಖುಷಿ. ಅವರಿಗೆ ಅದುವೇ ದೊಡ್ಡ ಗಿಫ್ಟ್, ಮಕ್ಕಳೆಲ್ಲರೂ ಒಗ್ಗಾಟ್ಟಾಗಿ ಇರಬೇಕೆಂದು ಬಯಸಿದವರು ಮಾತ್ರವಲ್ಲದೇ ತನ್ನ ಮಕ್ಕಳು ಮೊಮ್ಮಕ್ಕಳಲ್ಲಿ ಪ್ರಾಣವನ್ನೆ ಇಟ್ಟಿದ್ದರು.

ಸಾಧು ಸ್ವಭಾವದ ನನ್ನ ಅಮ್ಮ ಇಂದು ನಮ್ಮ ಜೊತೆ ಇಲ್ಲ. ಅವರೊಂದಿಗೆ ಕಳೆದ ಪ್ರತೀ ದಿನಗಳು, ಪ್ರತಿಯೊಂದೂ ನೆನಪುಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಯಾರಿಂದಲೂ ಯಾವುದನ್ನು ಬಯಸದ ನನ್ನ ಅಮ್ಮ ಇಂದಿಗೆ ಕೇವಲ ನೆನಪು ಮಾತ್ರ.

Advertisement

ದಾನದಲ್ಲಿ ಎತ್ತಿದ ಕೈ
ನನ್ನ ಅಮ್ಮ ಎಲ್ಲರೊಂದಿಗೂ ಮಾತಾನಾಡುತ್ತ , ಬಡವರ ಕಷ್ಟಕ್ಕೆ  ಸ್ಪಂದಿಸುತ್ತ ಎಲ್ಲರೂ ನನ್ನವರೆಂದು ನೋಡುತ್ತಿದ್ದರು. ಆದರೆ ವಿಪರ್ಯಾಸವೆಂದರೆ, ತನ್ನವರನ್ನು ಚೆನ್ನಾಗಿ ನೋಡಿಕೊಂಡ ನನ್ನ ಅಮ್ಮ ಕೊನೆಗಾಲದಲ್ಲಿ ತುಂಬಾ ಸಂಕಟಪಟ್ಟರು.

ತನ್ನವರೇ ಅವರನ್ನು ಕಡೆಗಣಿಸಿ ಮೂಲೆ ಗುಂಪು ಮಾಡಿದರು ಸಾಯುವ ಮೊದಲು ಹೇಳಿದ ಒಂದೇ ಮಾತು “ನಾನು ಯಾಕೆ ಸಾಯುವುದಿಲ್ಲ” ಇದು ಇವತ್ತಿಗೂ ನನ್ನ ಹೃದಯವನ್ನು ಕೊರೆಯುತ್ತಿದೆ.

ಪ್ರತೀದಿನ ಬರುವ ಕನಸಿನಲ್ಲಿ ನನ್ನ ಅಮ್ಮ ನನನ್ನ ಮಾತನಾಡಿಸಿ ಹೋಗುವುದೇ ನನಗೆ ಸ್ವರ್ಗ ಸಿಕ್ಕಂತಾಗಿದೆ. ಅಮ್ಮಾ…, ನೀನು ಎಂದಿಗೂ ನನ್ನ ಜೊತೆಯಿರು. ನನ್ನ ಹೃದಯದಲ್ಲಿರು.

– ಲಲಿತ

Advertisement

Udayavani is now on Telegram. Click here to join our channel and stay updated with the latest news.

Next