Advertisement

World Cup: ವಿಶ್ವಕಪ್‌ ಕ್ರಿಕೆಟ್‌ 50ರ ಸಂಭ್ರಮ: ಮೊದಲು ನಡೆದದ್ದು ವನಿತಾ ವಿಶ್ವಕಪ್‌!

10:59 PM Jun 20, 2023 | Team Udayavani |

ಲಂಡನ್‌: ಕ್ರಿಕೆಟ್‌ ಇತಿಹಾಸದ ಪ್ರಪ್ರಥಮ ವಿಶ್ವಕಪ್‌ ಪಂದ್ಯಾವಳಿಗೆ ಮಂಗಳವಾರ ಸುವರ್ಣ ಸಂಭ್ರಮ. ಸರಿಯಾಗಿ 50 ವರ್ಷಗಳ ಹಿಂದೆ, 1973ರ ಜೂನ್‌ 20ರಂದು ಇಂಗ್ಲೆಂಡ್‌ನ‌ಲ್ಲಿ ಈ ಟೂರ್ನಿ ಆರಂಭಗೊಂಡಿತ್ತು.

Advertisement

ಆದರೆ ಇದು ಪುರುಷರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಯಲ್ಲ, ವನಿತೆಯರದ್ದು! ಪುರುಷರ ಏಕದಿನ ವಿಶ್ವಕಪ್‌ ಆರಂಭವಾಗುವುದಕ್ಕಿಂತ 2 ವರ್ಷ ಮೊದಲೇ ವನಿತೆ ಯರ ವಿಶ್ವಕಪ್‌ ನಡೆದಿತ್ತು ಎಂಬುದು ಕ್ರಿಕೆಟ್‌ ಸ್ವಾರಸ್ಯಗಳಲ್ಲೊಂದು.

ವಿಶ್ವಕಪ್‌ ಇತಿಹಾಸದ ಮೊದಲ ಪಂದ್ಯ ನ್ಯೂಜಿಲ್ಯಾಂಡ್‌-ಜಮೈಕಾ ನಡುವೆ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಇದು ಒಂದೂ ಎಸೆತ ಕಾಣದೆ ರದ್ದುಗೊಂಡಿತು.
ಚೊಚ್ಚಲ ವಿಶ್ವಕಪ್‌ ಪಂದ್ಯಾವಳಿ ಯಲ್ಲಿ 7 ತಂಡಗಳು ಪಾಲ್ಗೊಂಡಿ ದ್ದವು. ಇವುಗಳೆಂದರೆ ಇಂಗ್ಲೆಂಡ್‌, ಆಸ್ಟ್ರೇ ಲಿಯ, ಜಮೈಕಾ, ನ್ಯೂಜಿ ಲ್ಯಾಂಡ್‌, ಟ್ರಿನಿಡಾಡ್‌ ಆ್ಯಂಡ್‌ ಟೊಬೆಗೊ, ಯಂಗ್‌ ಇಂಗ್ಲೆಂಡ್‌ ಮತ್ತು ಇಂಟರ್‌ನ್ಯಾಶನಲ್‌ ಇಲೆವೆನ್‌.

1973ರ ಜುಲೈ 28ರಂದು ಎಜ್‌ಬಾಸ್ಟನ್‌ನಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 92 ರನ್ನುಗಳಿಂದ ಮಣಿಸಿದ ಇಂಗ್ಲೆಂಡ್‌ ಚಾಂಪಿಯನ್‌ ಆಗಿ ಮೂಡಿಬಂತು. ಇಂಗ್ಲೆಂಡ್‌ನ‌ ಎನಿಡ್‌ ಬ್ಯಾಕ್‌ವೆಲ್‌ 2 ಶತಕ ಸೇರಿದಂತೆ ಸರ್ವಾಧಿಕ 264 ರನ್‌ ಹೊಡೆದರು.

ಇಂಗ್ಲೆಂಡ್‌ನ‌ ಉದ್ಯಮಿ ಸರ್‌ ಜಾಕ್‌ ಹೇವಾರ್ಡ್‌ 40 ಸಾವಿರ ಪೌಂಡ್‌ ಮೊತ್ತವನ್ನು ನೀಡಿ ಈ ಪಂದ್ಯಾವಳಿ ಯನ್ನು ಪ್ರಾಯೋಜಿಸಿದ್ದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next